ಸಾರಾಂಶ
ಶಟಲ್ ಬ್ಯಾಡ್ಮಿಂಟನ್ ಲೀಗ್ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದಲ್ಲಿ 40 ಆಟಗಾರರು ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಅಜ್ಜರಕಾಡು ಮಾರ್ನಿಂಗ್ ಶೆಟಲ್ ಫ್ರೆಂಡ್ಸ್ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಲೀಗ್ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.ಪಂದ್ಯಾಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ರೋಷನ್ ಶೆಟ್ಟಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ನಾಯಕ ಉದಯಕುಮಾರ್ ಶೆಟ್ಟಿ, ಜಿಲ್ಲಾ ಯೋಜನಾಧಿಕಾರಿ ದೇವರಾಜ್, ತೂಕ ಮತ್ತು ಅಳತೆ ಮಾಪನ ಅಧಿಕಾರಿ ಅಭಿಜಿತ್ ಕೋಟ್ಯಾನ್ ಭಾಗವಹಿಸಿದ್ದರು.
ಪಂದ್ಯಾಟದಲ್ಲಿ ಒಟ್ಟು ನಾಲ್ಕು ತಂಡಗಳ 40 ಆಟಗಾರರು ಭಾಗವಹಿಸಿದ್ದರು. ಪಂದ್ಯಕೂಟದಲ್ಲಿ ವಿಜೇತರಾಗಿ ರೋಹಿತ್ ಶೆಟ್ಟಿ ನಾಯಕತ್ವದ ಟೀಂ ಬ್ಲೇಸರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ಸ್ ಟ್ರೋಫಿ ಪ್ರಶಸ್ತಿಯನ್ನು ಅಮೀತ್ ಪಡುಕೋಣೆ ನಾಯಕತ್ವದ ಟೀಂ ಅಲ್ಪಾ ಪಡೆದುಕೊಂಡಿತು.ಸಮಾರೋಪ ಸಮಾರಂಭದಲ್ಲಿ ಎಎಸ್ಪಿ ಎಸ್. ಟಿ. ಸಿದ್ದಲಿಂಗಪ್ಪ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಈ ಸಂದರ್ಭ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾಶಿನಾಥ್ ಪೈ, ಸುಹೇಲ್ ಅಮೀನ್, ಡಾಕ್ಟರ್ ಅತುಲ್ ಭಾಗವಹಿಸಿದ್ದರು.
ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ಬಿನ ಸದಸ್ಯರಾದ ಗಣೇಶ್ ಮಟ್ಟು ಮತ್ತು ಅಮಿತ್ ಪಡುಕೋಣೆ ಪಂದ್ಯಾಕೂಟವನ್ನು ನೆರವೇರಿಸಿದರು. ಕಾರ್ಯಕ್ರಮವನ್ನು ನಂದಕಿಶೋರ್ ಕೆಮ್ಮಣ್ಣು ನೆರವೇರಿಸಿದರು.