ಪ್ರಪಂಚದ ಪ್ರಥಮ ಅರಿವಿನ ಬೆರಗು ಅಕ್ಕ ಮಹಾದೇವಿ: ಡಾ.ಅನಿತಾ ಅಭಿಮತ

| Published : Apr 27 2024, 01:22 AM IST

ಪ್ರಪಂಚದ ಪ್ರಥಮ ಅರಿವಿನ ಬೆರಗು ಅಕ್ಕ ಮಹಾದೇವಿ: ಡಾ.ಅನಿತಾ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕ ಮಹಾದೇವಿಯು ಪ್ರಪಂಚದ ಪ್ರಥಮ ವೈರಾಗ್ಯನಿಧಿ ಹಾಗೂ ಅರಿವಿನ ಬೆರಗು ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಿತಾ ದೊಡ್ಡಗೌಡರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಅಕ್ಕ ಮಹಾದೇವಿಯು ಪ್ರಪಂಚದ ಪ್ರಥಮ ವೈರಾಗ್ಯನಿಧಿ ಹಾಗೂ ಅರಿವಿನ ಬೆರಗು ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಿತಾ ದೊಡ್ಡಗೌಡರ್ ಹೇಳಿದರು.

ನಗರದ ಕೆ.ಎಸ್.ಎಸ್ .ಶಿಕ್ಷಣ ಮಹಾವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಮತ್ತು ನಗರ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕ ಮಹಾದೇವಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಶರಣಸತಿ ಲಿಂಗಪತಿ ತತ್ವವನ್ನು ಅಳವಡಿಸಿಕೊಂಡು ಚೆನ್ನಮಲ್ಲಿಕಾರ್ಜುನನಲ್ಲದೇ ಅನ್ಯಪತಿ ನನಗಿಲ್ಲ ಎಂದು ಒಬ್ಬ ಆದರ್ಶ ಪತಿ ಚೆನ್ನಮಲ್ಲಿಕಾರ್ಜುನಂತೆ ಇರಬೇಕೆಂದು ಅಕ್ಕ ಮಹಾದೇವಿ ಜಗತ್ತಿಗೆ ಸಾರಿದರು ಎಂದರು.

ಕೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಸಂವರ್ಧನೆಗೊಳಿಸುವ ಇಂತಹ ಕಾರ್ಯಕ್ರಮಗಳು ತುಂಬಾ ಅಗತ್ಯವೆಂದು ತಿಳಿಸಿದರು.

ಪ್ರಾಚಾರ್ಯ ಬಿ.ಎಸ್. ಚನ್ನಬಸಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್.ನಾಗರಾಜಪ್ಪ ಅಧ್ಯಕ್ಷ ಎಂ.ಪರಮೇಶ್ವರಪ್ಪ ಸಿರಿಗೆರೆ, ತಾಲೂಕ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ, ಕೆ.ಎಸ್. ಗಂಗಾಧರ್, ಸೌಮ್ಯ ಸತೀಶ್, ಶಿಕ್ಷಕ ನಾಗರಾಜ, ಭರ್ಮಪ್ಪ ಮೈಸೂರು, ಕಲಿವೀರ್ ಕಳ್ಳಿಮನಿ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

- - - -26ಕೆಡಿವಿಜಿ38ಃ:

ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು, ನಗರ ಘಟಕದಿಂದ ಅಕ್ಕ ಮಹಾದೇವಿ ಜಯಂತಿ, ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.