ಅಕ್ಕಮಹಾದೇವಿ ಮಾನವ ಕುಲಕ್ಕೆ ಮಾದರಿ

| Published : Apr 13 2025, 02:00 AM IST

ಸಾರಾಂಶ

ವೈರಾಗ್ಯಕ್ಕೆ ಮತ್ತೊಂದು ಹೆಸರೇ ಅಕ್ಕಮಹಾದೇವಿ. ಎಲ್ಲರೂ ಸುಖ, ಸಂಪತ್ತು ಅರಸುತ್ತ ಹೋಗುತ್ತೇವೆ. ಆದರೆ, ಅಕ್ಕಮಹಾದೇವಿ ಎಲ್ಲವನ್ನು ಧಿಕ್ಕರಿಸಿ ಅಧ್ಯಾತ್ಮದ ಕಡೆ ಬಂದವರಾಗಿದ್ದಾರೆ ವಿಶ್ವಗುರು ಬಸವಣ್ಣ, ಅಲ್ಲಮಪ್ರಭು ಅವರಂತೆ ಅಕ್ಕಮಹಾದೇವಿ ಅವರ ವಿಚಾರಧಾರೆ, ಚಿಂತನೆಗಳು ಜಾಗತಿಕ ಚಿಂತಕರ ಗಮನ ಸೆಳೆದಿವೆ.

ಕುಷ್ಟಗಿ:

ವಚನಗಾರ್ತಿ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಮಹಾಸಭಾದ ಅಧ್ಯಕ್ಷ ಟಿ. ಬಸವರಾಜ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬಣಜಿಗ ಸಮಾಜದ ವತಿಯಿಂದ ನಡೆದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವೈರಾಗ್ಯಕ್ಕೆ ಮತ್ತೊಂದು ಹೆಸರೇ ಅಕ್ಕಮಹಾದೇವಿ. ಎಲ್ಲರೂ ಸುಖ, ಸಂಪತ್ತು ಅರಸುತ್ತ ಹೋಗುತ್ತೇವೆ. ಆದರೆ, ಅಕ್ಕಮಹಾದೇವಿ ಎಲ್ಲವನ್ನು ಧಿಕ್ಕರಿಸಿ ಅಧ್ಯಾತ್ಮದ ಕಡೆ ಬಂದವರಾಗಿದ್ದಾರೆ ವಿಶ್ವಗುರು ಬಸವಣ್ಣ, ಅಲ್ಲಮಪ್ರಭು ಅವರಂತೆ ಅಕ್ಕಮಹಾದೇವಿ ಅವರ ವಿಚಾರಧಾರೆ, ಚಿಂತನೆಗಳು ಜಾಗತಿಕ ಚಿಂತಕರ ಗಮನ ಸೆಳೆದಿವೆ ಎಂದರು.

ವೀರೇಶ ಬಂಗಾರಶೆಟ್ಟರ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ಬಹುಪಾಲು ವಚನ ಅಕ್ಕಮಹಾದೇವಿಯ ವಚನಗಳಾಗಿವೆ. ಅವರ ಬದುಕನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಅಕ್ಕನ ವೈರಾಗ್ಯ ಮತ್ತು ಆತ್ಮಪ್ರಜ್ಞೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎನ್ನುವುದಕ್ಕೆ ಅವರ ವಚನಗಳ ಸಂದೇಶವೇ ಸಾಕ್ಷಿಯಾಗಿದೆ. ಅವರು ವಚನಗಳಲ್ಲದೆ ವಚನೇತರ ಸಾಹಿತ್ಯಕ್ಕೂ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಶಿಕ್ಷಕ ನಾಗರಾಜ ಶೆಟ್ಟರ ಮಾತನಾಡಿದರು. ಈ ವೇಳೆ ಬಸೆಟ್ಟೆಪ್ಪ ಕುಂಬಳಾವತಿ, ಬಸವರಾಜ ಕುದರಿಮೋತಿ, ಶಶಿಧರ ಕವಲಿ, ಬಸವರಾಜ ಪಡಿ, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ಲ, ಶಾಂತರಾಜ ಗೋಗಿ, ಸಚಿನ್ ಕುಡತಿನಿ, ದೊಡ್ಡಬಸಪ್ಪ ಕುಡತಿನಿ, ಅಶೋಕ ಬಳ್ಳೋಳ್ಳಿ, ಸಿದ್ದಲಿಂಗಪ್ಪ ಕಲಕಬಂಡಿ, ಶರಣಪ್ಪ ಹೊಸವಕ್ಕಲ, ದೊಡ್ಡಪ್ಪ ಲಿಂಗಶೆಟ್ಟರ್, ಈರಣ್ಣ ಸೊಬರದ ಸೇರಿದಂತೆ ಹಲವರು ಇದ್ದರು.