11ಕ್ಕೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

| Published : Feb 10 2024, 01:47 AM IST

ಸಾರಾಂಶ

ಅಕ್ಕಮಹಾದೇವಿ ಮಹಿಳಾ ಮಂಡಳದ ಸಭಾಂಗಣ ಉದ್ಘಾಟನೆ, ರಾಜಾರಾಮ ಮೋಹನರಾಯ್ ಅವರ 250 ನೇ ಜನ್ಮ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭವಾರ್ತೆ ಬೀದರ್

ಇಲ್ಲಿನ ನಾವದಗೇರಿಯ ಅಕ್ಕಮಹಾದೇವಿ ಮಹಿಳಾ ಮಂಡಳದ ಸಭಾಂಗಣ ಉದ್ಘಾಟನೆ, ರಾಜಾರಾಮ ಮೋಹನರಾಯ್ ಅವರ 250 ನೇ ಜನ್ಮ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 11ರಂದು ಬೆಳಗ್ಗೆ 11 ಕ್ಕೆ ನಗರದ ಚಿಕಪೇಟ್ ಹೈದ್ರಾಬಾದ್ ರಿಂಗ್ ರೋಡ್‌ನಲ್ಲಿರುವ ಪುರಿ ಜಗನ್ನಾಥ ದೇವಸ್ಥಾನ ಸಮೀಪ ನಡೆಯಲಿದೆ.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು. ಡಾ. ಗಂಗಾಂಬಿಕೆ ಅಕ್ಕ ಸಾನಿಧ್ಯ ವಹಿಸುವರು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಸಭಾಂಗಣ ಉದ್ಘಾಟಿಸುವರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್ ವೈದ್ಯ, ಪಶುವೈದ್ಯಕೀಯ ವಿವಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ, ಬೀದರ್ ವಿವಿ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ್, ಕಲಬುರಗಿ ಕೇಂದ್ರೀಯ ವಿವಿ ಅಧ್ಯಯನಾಂಗ ನಿರ್ದೇಶಕ ಪ್ರೊ. ಬಸವರಾಜ ಡೋಣೂರ ಮುಖ್ಯ ಅತಿಥಿಗಳಾಗಿರುವರು.

ಬೀದರ್ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಜಗನ್ನಾಥ ಹೆಬ್ಬಾಳೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮನೋಳಿ ಉಪಸ್ಥಿತರಿರುವರು. ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಡಾ. ನೀಲಗಂಗಾ ಹೆಬ್ಬಾಳೆ ಅಧ್ಯಕ್ಷತೆ ವಹಿಸುವರು.

6 ಮಹಿಳಾ ಸಾಧಕರಿಗೆ ಪ್ರಶಸ್ತಿ:

ಸಮಾಜ ಮತ್ತು ಮಹಿಳಾ ಸಶಕ್ತೀಕರಣ ಕ್ಷೇತ್ರದಲ್ಲಿನ ಸೇವೆಗಾಗಿ ಡಾ. ಗುರಮ್ಮ ಸಿದ್ದಾರೆಡ್ಡಿ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ರೇಷ್ಮಾ ಕೌರ್, ಸಹಕಾರ ಕ್ಷೇತ್ರದಲ್ಲಿನ ಸೇವೆಗಾಗಿ ಶಕುಂತಲಾ ಬೆಲ್ದಾಳೆ, ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಡಾ. ಪ್ರೇಮಾ ಸಿರ್ಸೆ, ಪ್ರೊ. ಲೀಲಾವತಿ ಚಾಕೋತೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ ಭಾರತಿ ವಸ್ತ್ರದ ಅವರಿಗೆ ಅಕ್ಕಮಹಾದೇವಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಮಹಿಳಾ ಮಂಡಳದ ಗೌರವಾಧ್ಯಕ್ಷೆ ಮಲ್ಲಮ್ಮ ಹೆಬ್ಬಾಳೆ, ಅಧ್ಯಕ್ಷೆ ಡಾ. ನೀಲಗಂಗಾ ಹೆಬ್ಬಾಳೆ, ಕಾರ್ಯದರ್ಶಿ ಡಾ.ಮಹಾನಂದಾ ಹೆಬ್ಬಾಳೆ, ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದ್ದಾರೆ.

ಸಮಾರಂಭಕ್ಕೂ ಮುನ್ನ ಬೆಳಗ್ಗೆ 10.30 ಕ್ಕೆ ಸಂಗೀತೋತ್ಸವ ನಡೆಯುವುದು. ಸಾರೆಗಮಪ ಕಲಾ ತಂಡದ ಮಹೇಶಕುಮಾರ ಕುಂಬಾರ ಕಾರ್ಯಕ್ರಮ ನಡೆಸಿಕೊಡುವರು.

ರಾತ್ರಿ 7 ಕ್ಕೆ ಭಜನಾ ಸಂಗೀತ ದರ್ಬಾರ್‌ ನಡೆಯುವುದು. ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಅಧ್ಯಕ್ಷ ನಿರ್ಮಲ್ ವೈದ್ಯ ಉದ್ಘಾಟಿಸುವರು. ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ ಪುರಸ್ಕೃತ ಪುಂಡಲೀಕರಾವ್ ಪಾಟೀಲ್ ಗುಮ್ಮಾ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ ಅದ್ಯಕ್ಷ ಓಂಪ್ರಕಾಶ ಬಜಾರೆ, ಎಸ್‌ಬಿ. ಕುಚಬಾಳ್ ಪಾಲ್ಗೊಳ್ಳುವರು.