ಸಾರಾಂಶ
ಶಿವಶರಣೆ ಅಕ್ಕಮಹಾದೇವಿಯವರ ನೂರಾರು ವಚನಗಳು ಇಂದಿನ ಮಹಿಳೆಯರಿಗೆ ಮಾರ್ಗದರ್ಶಕವಾಗಿದ್ದು ಸಮಾಜದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವ ಜೀವನಾದರ್ಶಗಳನ್ನು ಸಮಾಜಕ್ಕೆ ತಿಳಿ ಹೇಳುವ ಮುಖಾಂತರ ಪ್ರೇರಕರಾಗಿದ್ದರು ಎಂದು ನಗರದ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಜಯಶೀಲಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಶಿವಶರಣೆ ಅಕ್ಕಮಹಾದೇವಿಯವರ ನೂರಾರು ವಚನಗಳು ಇಂದಿನ ಮಹಿಳೆಯರಿಗೆ ಮಾರ್ಗದರ್ಶಕವಾಗಿದ್ದು ಸಮಾಜದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವ ಜೀವನಾದರ್ಶಗಳನ್ನು ಸಮಾಜಕ್ಕೆ ತಿಳಿ ಹೇಳುವ ಮುಖಾಂತರ ಪ್ರೇರಕರಾಗಿದ್ದರು ಎಂದು ನಗರದ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಜಯಶೀಲಾ ತಿಳಿಸಿದರು. ನಗರದ ಜಯದೇವ ಹಾಸ್ಟೆಲ್‌ನಲ್ಲಿ ಅಕ್ಕಮಹಾದೇವಿ ಸಮಾಜದ ವತಿಯಿಂದ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಅಕ್ಕಮಹಾದೇವ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಯೋಗ್ಯಳು ಎಂಬುದನ್ನು ಅಕ್ಕಮಹಾದೇವಿಯು ಅಂದೇ ನಿರೂಪಿಸಿ ಸ್ತ್ರೀ ಸ್ವಾತಂತ್ರ್ಯದ ಸಂಕೇತವಾಗಿದ್ದರು. ಮಹಿಳೆಯರು ಅಕ್ಕನ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ಹಾಗೂ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ನಿವೃತ್ತ ಶಿಕ್ಷಕ ಸೋಮಶೇಖರ್ ಮಾತನಾಡಿ, ಶಿವಶರಣೆ ಅಕ್ಕಮಹಾದೇವಿ ಸ್ತ್ರೀಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು. ಅವಳಿಗೂ ಸ್ವಾತಂತ್ರ್ಯ ಸಿಗಬೇಕೆಂದು ಶ್ರಮಿಸುವ ಮೂಲಕ ಮಹಿಳೆಯರ ಬದುಕಿಗೆ ಆದರ್ಶಪ್ರಾಯವಾಗಿದ್ದರು ಇವರ ಆದರ್ಶಗಳು ಎಲ್ಲಾ ಮಹಿಳೆಯರಿಗೂ ದಾರಿದೀಪವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಸಮಾಜದ ಉಪಾಧ್ಯಕ್ಷೆ ಶೋಭಾಮಂಜುನಾಥ್, ಸುಮಂಗಳ, ಕಾರ್ಯದರ್ಶಿ ಸುಮಪ್ರಭು, ಶೀಲಾಲೋಕೇಶ್, ಖಜಾಂಚಿ ಮುಕ್ತತಿಪ್ಪೇಶ್, ಕದಳಿ ಬಳಗದ ಅಧ್ಯಕ್ಷೆ ಸ್ವರ್ಣಗೌರಿ, ಪದಾಧಿಕಾರಿಗಳಾದ ಶಿವಗಂಗಾ, ರತ್ನ, ವೇದಾ, ಗಾಯತ್ರಿ, ಪ್ರಭಾ, ಪುಷ್ಪಾ, ಆಶಾ, ಶರಣ ಸಾಹಿತ್ಯ ಪರಿಷತ್ ತಾ. ಅಧ್ಯಕ್ಷ ಬಿ.ಆರ್. ಗುರುಸ್ವಾಮಿ, ನಿವೃತ್ತ ಪ್ರಾಂಶುಪಾಲ ನಂ. ಶಿವಗಂಗಪ್ಪ, ಮಂಜಪ್ಪ ಸೇರಿದಂತೆ ಸಮಾಜದ ಸದಸ್ಯರುಗಳು, ಜಯದೇವ ಹಾಸ್ಟೆಲ್‌ನ ಸಿಬ್ಬಂದಿಗಳು ಭಾಗವಹಿಸಿದ್ದರು.