ಸಾರಾಂಶ
ಸೀಮೆಯ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯ ನೇತೃತ್ವದಲ್ಲಿ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವಕ್ಕೆ ಮಕರ ಸಂಕ್ರಾಂತಿಯ ದಿನದಂದು ಚಾಲನೆ ನೀಡಲಾಯಿತು. ಜಾತ್ರೆ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ: ತಾಲೂಕಿನ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ಜ.14 ರಿಂದ ಆರಂಭಗೊಂಡಿರುವ ಜಾತ್ರಾ ಮಹೋತ್ಸವ 21ರ ವರೆಗೆ ನಡೆಯಲಿದೆ. ಜ.20ರಂದು ರಾತ್ರಿ ಮಹಾರಥೋತ್ಸವ ನೆರವೇರಲಿದೆ.
ಸೀಮೆಯ ತಂತ್ರಿಗಳಾದ ನಡ್ವಂತಾಡಿ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯ ನೇತೃತ್ವದಲ್ಲಿ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವಕ್ಕೆ ಮಕರ ಸಂಕ್ರಾಂತಿಯ ದಿನದಂದು ಚಾಲನೆ ನೀಡಲಾಯಿತು. ಜಾತ್ರೆ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಂದಿನ ಕಾರ್ಯಕ್ರಮ: ಬೆಳಗ್ಗೆ ದೇವಿಗೆ ಅಭಿಷೇಕ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಧ್ವಜ ಪೂಜೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಶ್ರೀ ಮೂಜಿಲ್ನಾಯ ದೈವದ ನೇಮ ಹಾಗೂ ಪರಿವಾರ ದೈವಗಳ ನೇಮ, ಶ್ರೀ ಭೂತಬಲಿ, ಕವಾಟ, ಬಂಧನ ನಡೆಯಲಿದೆ.ನಾಳೆ ಮಹಾರಥೋತ್ಸವ: ಜ.20 ರಂದು ಬೆಳಗ್ಗೆ ಪ್ರಾರ್ಥನೆ, ಕವಾಟೋದ್ಘಾಟನೆ, ದಿವ್ಯದರ್ಶನ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಚಂದ್ರಮಂಡಲ ಉತ್ಸವ, ಮಹಾಪೂಜೆ, ದೇವರ ಬಲಿ, ಹಣ್ಣುಕಾಯಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನೆ, ದೇವರ ಮಹೋತ್ಸವ, ವಸಂತ ಕಟ್ಟೆಪೂಜೆ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಶ್ರೀ ಕೊಡಮಣಿತ್ತಾಯ ದೈವದ ನೇಮ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ನೆರವೇರಲಿದೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.