ಸಾರಾಂಶ
ಪುತ್ತೂರಿನಲ್ಲಿ ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್ಸ್ ನೀಡಿರುವುದು ಒಪ್ಪುವಂಥದ್ದಲ್ಲ: ಪೇಜಾವರ ಸ್ವಾಮೀಜಿ
ಮಂಗಳೂರು: ಹಿಂದು ಕಾರ್ಯಕರ್ತರನ್ನು ಗಡಿಪಾರು ಮಾಡುವ ಕ್ರಮ ಒಪ್ಪತಕ್ಕದ್ದಲ್ಲ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಹಿಂದು ಕಾರ್ಯಕರ್ತರನ್ನು ಗಡಿಪಾರು ಮಾಡುವ ವಿದ್ಯಮಾನ ನಡೆಯಬಾರದು. ಇದು ಸರ್ಕಾರಕ್ಕೆ ಶೋಭೆ ತರುವ ವಿಚಾರವಲ್ಲ, ಸರ್ಕಾರಕ್ಕೆ ಎಲ್ಲರೂ ಸಮಾನರು. ಒಂದು ಗುಂಪನ್ನು ಗುರಿ ಮಾಡುವುದು ಸರಿಯಲ್ಲ. ಇದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತಂತೆ ಪ್ರತಿಕ್ರಿಯಿಸಿದ ಪೇಜಾವರಶ್ರೀ, ಸರ್ಕಾರ ಇರಬೇಕಾದರೆ ಪ್ರತಿಪಕ್ಷ ಪ್ರಬಲವಾಗಿರಬೇಕು. ಪ್ರತಿಪಕ್ಷ ನಾಯಕನಿಲ್ಲದೆ ಪ್ರತಿಪಕ್ಷ ಕುಂಠಿತವಾಗಿತ್ತು. ಈಗ ಪಕ್ಷಕ್ಕೆ ಸಮರ್ಥ ನಾಯಕ ಬಂದಿದ್ದಾರೆ, ಅವರ ಅಧಿಕಾರ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಹಾರೈಸುತ್ತೇನೆ ಎಂದರು.