ಏಕೈಕ ಹಿಂದೂ ರಾಷ್ಟ್ರ ಭಾರತದಲ್ಲೇ ಹಿಂದೂಗಳಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದ್ದು, ಬರುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ಹಾಗೂ ಸ್ವಯಂ ರಕ್ಷಣೆಗಾಗಿ ಜಾತಿ ಮತ ಬೇಧಗಳನ್ನು ಮರೆತು ಎಲ್ಲ ಹಿಂದೂಗಳು ಸಂಘಟಿತರಾಗಬೇಕಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ತಾಲೂಕಾಧ್ಯಕ್ಷ ಜಯದೇವ ಶಿರೂರ ಹೇಳಿದರು.
ಬ್ಯಾಡಗಿ: ಏಕೈಕ ಹಿಂದೂ ರಾಷ್ಟ್ರ ಭಾರತದಲ್ಲೇ ಹಿಂದೂಗಳಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದ್ದು, ಬರುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ಹಾಗೂ ಸ್ವಯಂ ರಕ್ಷಣೆಗಾಗಿ ಜಾತಿ ಮತ ಬೇಧಗಳನ್ನು ಮರೆತು ಎಲ್ಲ ಹಿಂದೂಗಳು ಸಂಘಟಿತರಾಗಬೇಕಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ತಾಲೂಕಾಧ್ಯಕ್ಷ ಜಯದೇವ ಶಿರೂರ ಹೇಳಿದರು. ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತ ಆದರೆ ನಮ್ಮ ದೇಶದಲ್ಲಿಯೇ ಹಿಂದೂಗಳ ಮೇಲೆ ಅತೀಹೆಚ್ಚು ಹಿಂಸಾಚಾರ, ನರಮೇಧಗಳು ನಡೆಯುತ್ತಿವೆ. ಇವನ್ನೆಲ್ಲಾ ನೋಡಿಯೂ ನಾವು ಜಾಗೃತಗೊಳ್ಳದಿದ್ದರೇ ನಮ್ಮ ಮುಂದಿನ ಪೀಳಗೆ ಉಳಿಯಲು ಸಾಧ್ಯವಿಲ್ಲ ಎಂದರು.
ಫೆ.8ಕ್ಕೆ ಬೃಹತ್ ಹಿಂದೂ ಸಮಾವೇಶ: ನಮ್ಮ ಕುಟುಂಬ ವ್ಯವಹಾರ ಹಾಗೂ ಸಮಸ್ಯೆಗಳ ಮಧ್ಯವೂ ನಾವೂ ಸನಾತನ ಹಿಂದೂ ಧರ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮಾರು ಹೋಗುತ್ತಿರುವ ನಾವುಗಳು ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ ವಿಚಾರ ಹೇಳಿ ಕೊಟ್ಟು ಸನ್ಮಾರ್ಗದಲ್ಲಿ ನಡೆಸುವ ಅಗತ್ಯವಿದೆ, ಈ ಹಿನ್ನೆಲೆಯಲ್ಲಿ ಫೆ.8ರಂದು ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.ಶೋಭಾ ಯಾತ್ರೆ ಸಂಸ್ಕೃತಿಯ ಅನಾವರಣ: ಸಮಿತಿ ಕಾರ್ಯದರ್ಶಿ ಮಹಾಂತೇಶ ಅಂಕಲಕೋಟಿ ಮಾತನಾಡಿ, ಪಟ್ಟಣದ ನೆಹರೂ ನಗರದ ದಾನಮ್ಮದೇವಿ ದೇವಸ್ಥಾನದಿಂದ ಹಿಂದೂ ಸಮ್ಮೇಳನ ಸಮಿತಿಯ ಬೃಹತ್ ಶೋಭಾ ಯಾತ್ರೆಯ ಆರಂಭವಾಗಲಿದೆ, ಅಲ್ಲಿಂದ ಮೋಟೆಬೆನ್ನೂರ ರಸ್ತೆ ಸುಭಾಸ ಸರ್ಕಲ್, ಮುಖ್ಯರಸ್ತೆ, ಹಳೇಪುರಸಭೆ, ರಟ್ಟಿಹಳ್ಳಿ ರಸ್ತೆ ಮೂಲಕ ತಾಲೂಕ ಕ್ರೀಡಾಂಗಣ ತಲುಪಲಿದೆ ಎಂದರು.ಎಲ್ಲವನ್ನೂ ಮರೆತು ಬನ್ನಿ: ರಾಜು ಮೋರಿಗೇರಿ ಮಾತನಾಡಿ, ಶೋಭಾಯಾತ್ರೆಯಲ್ಲಿ ಜಾನಪದ ಕಲಾವಿದರ ತಂಡ ಹಿಂದೂ ಧರ್ಮದ ಮಹಾ ಪುರುಷರ ಹಾಗೂ ಮಹಿಳೆಯರ ಭಾವಚಿತ್ರದ ಮೆರವಣಿಗೆ ನಮ್ಮ ಆಚಾರ ವಿಚಾರ ಸಂಪ್ರದಾಯ ಬಿಂಬಿಸುವ ಕಲಾ ತಂಡಗಳು ಹಾಗೂ ಮಕ್ಕಳ ವೇಷ ಭೂಷಣಗಳು ಇರಲಿವೆ, ಜಾತಿ ಮತ ಬೇಧಗಳನ್ನು ಮರೆತು ಎಲ್ಲಾ ಸಂಘಟನೆಗಳು ನಾವೆಲ್ಲ ಹಿಂದೂಗಳ ಎಂಬ ಭಾವನೆಯಿಂದ ಕಾರ‍್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಶಿವಯೋಗಿ ಶಿರೂರ ಮಾತನಾಡಿ, ತಾಲೂಕು ಕ್ರೀಡಾಂಗಣದಲ್ಲಿ ಅಂದು ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ, ಪಟ್ಟಣದ ಮುಪ್ಪಿನೇಶ್ವರ ಮಠದ ಮ.ನಿ.ಪ್ರ. ಚೆನ್ನಮಲ್ಲಿಕಾರ್ಜುನ ಶ್ರೀಗಳು ಹಾಗೂ ಗುರುಕುಮಾರೇಶ್ವರ ಪಾಠಶಾಲೆ ವೇ.ರಾಚಯ್ಯನವರು ಓದಿಸೋಮಠ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯ ಸಂಯೋಜಕ ಜಗದೀಶ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದು, ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಜಯದೇವ ಶಿರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲಾ ಹಿಂದೂಪರ ಸಂಘಟನೆಗಳು ಸಾರ್ವಜನಿಕರು ಸಮಾಜದ ಹಿರಿಯರು ಮಾರ್ಗದರ್ಶಿಗಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಎಂ.ಎಸ್.ಪಾಟೀಲ, ಸಂಭಾಜಿ ಜಾಧವ, ಡಾ.ಹೊತಗಿಗೌಡ್ರ, ಸಿದ್ಧಲಿಂಗಪ್ಪ ಶೆಟ್ಟರ, ವಿಶ್ವನಾಥ ಅಂಕಲಕೋಟಿ, ಗಣೇಶ ವೆರ್ಣೆಕರ, ಬಿ.ಬಿ. ದೊಡ್ಮನಿ, ಪಾಂಡು ಸುತಾರ, ಮಂಜುನಾಥ ಉಪ್ಪಾರ, ಕೆ.ಸಿ. ಸೊಪ್ಪಿನಮಠ, ನಂದೀಶ ಚನ್ನಗೌಡ್ರ, ಬಾಬು ಕಲಬುರ್ಗಿ, ಪರಶುರಾಮ ಉಜನಿಕೊಪ್ಪ, ನಿಂಗರಾಜ ಆಡಿನವರ, ಮಲ್ಲಪ್ಪ ಕಾಟೇನಹಳ್ಳಿ, ರವಿ ಬಿಲ್ಲಳ್ಳಿ, ಸುರೇಶ ಡಂಬಳ ಸೇರಿದಂತೆ ಇನ್ನಿತರರಿದ್ದರು.