ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಮತ್ತು ನಮ್ಮ ತಂಡದ 24 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವರುಣ ಮಹೇಶ್ ಹೇಳಿದರು.ಪಟ್ಟಣದ ಬಸವೇಶ್ವರ ಬಡಾವಣೆಯ ಬಳೆ ಬಸವರಾಜಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ ಸಮಾಜದ ಮುಖಂಡರು ಮತ್ತು ಮತದಾರರ ಸಭೆಯಲ್ಲಿ ಮಾತನಾಡಿದರು.
ನಮಗೆ ಈ ಬಾರಿ ಅವಕಾಶ ಕಲ್ಪಿಸಿದರೆ ಸಮಾಜ ಬಾಂಧವರ ಋಣ ತೀರಿಸಲು ಎಲ್ಲರೊಡಗೂಡಿ ದುಡಿಯುತ್ತೇನೆ. ನಾವು ಚುನಾಯಿತರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ 23 ಅಂಶದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು ಅದರಂತೆ ನಡೆದುಕೊಳ್ಳುವುದಾಗಿ ತಿಳಿಸಿದ ಅವರು ಈ ಬಾರಿ ಸಮಾಜದ ಮತಬಾಂಧವರು ಹೊಸಬರು ಮತ್ತು ಯುವಕರಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.ಈವರೆಗೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಭವನ ಜಿಲ್ಲಾ ಕೇಂದ್ರದಲ್ಲಿ ಇರುವುದು ವಿಷಾದನೀಯವಾಗಿದ್ದು ಈ ವಿಚಾರವನ್ನು ಸಮಾಜದ ಬಾಂಧವರು ಅರಿತು ನಮಗೆ ಬೆಂಬಲ ನೀಡಿದರೆ ನಾವು ಆ ಕೆಲಸವನ್ನು ಮಾಡುತ್ತೇವೆಂದರು.
ಜಿಲ್ಲೆಯಲ್ಲಿ ಈಗ 3,700 ಮಂದಿ ಮಾತ್ರ ಜಿಲ್ಲಾ ಸಂಘಕ್ಕೆ ಸದಸ್ಯರಾಗಿದ್ದು, ಇದಕ್ಕೆ ಹಿಂದಿನವರ ನಿರ್ಲಕ್ಷ್ಯ ಕಾರಣ ಎಂದು ಪ್ರಶ್ನಿಸಿದ ಅವರು ಕಳೆದ 30 ವರ್ಷಗಳಿಂದ ಸಮಾಜದ ಏಳಿಗೆಗೆ ಕೆಲಸ ಮಾಡುತ್ತಿದ್ದು, ನನಗೆ ಬಾಂಧವರು ಬೆಂಬಲ ನೀಡಬೇಕು ಎಂದು ಕೋರಿದರು.ವೀರಶೈವ ಲಿಂಗಾಯಿತ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಮತ್ತು ಸಂಘದ ಸವಲತ್ತುಗಳನ್ನು ಕೊಡಿಸಿ ಅದರೊಂದಿಗೆ ಜಿಲ್ಲಾ ಸಂಘದ ವತಿಯಿಂದ ಉದ್ಯೋಗ ಮೇಳ ಸೇರಿದಂತೆ ಇತನ ಕೌಶಲ್ಯ ತರಬೇತಿ ಶಿಬಿರ ನಡೆಸುವ ಭರವಸೆ ನೀಡಿದರು.
ಜು. 21 ರಂದು ಮೈಸೂರಿನ ಶಂಕರಮಠದಲ್ಲಿ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಸಮಾಜದ ಬಾಂಧವರು ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡಬೇಕು ಎಂದು ಕೋರಿಕೊಂಡರು.ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ಸಿ.ಎಸ್. ಆನಂದ್, ಪಿ.ಎಂ. ಕುಮಾರ್, ಕೆಂಪರಾಜು,, ಎಂ.ಬಿ. ಕೊಟ್ರೇಶ್ ಬಾಬು, ಎಚ್.ಸಿ. ಗುರುಸ್ವಾಮಿ, ಸಿ.ಆರ್. ನಟರಾಜು, ನಂಜುಂಡ, ಬಿ. ನಂದೀಶ್ ಕುಮಾರ್, ಪುಟ್ಟಣ್ಣ, ಎನ್. ಎಸ್. ಪ್ರಕಾಶ್, ಟಿ. ಮಲ್ಲಿಕಾರ್ಜುನ, ಬಿ. ಮುಕೇಶ್ ಕುಮಾರ್, ಎಂ. ಮಂಜುನಾಥ್ ಸ್ವಾಮಿ, ಜೆ. ಸಿ. ಯೋಗೇಶ್ ಕುಮಾರ್, ಬಿ. ಬಿ. ರಾಜಶೇಖರ, ಡಾ. ಶಿವಯೋಗ, ಎಚ್. ಎಸ್. ಶಿವಲಿಂಗಪ್ಪ ಶೆಟ್ಟಿ, ಸಿ.ಎನ್. ಮಂಜುನಾಥ ಸ್ವಾಮಿ, ಷಡಕ್ಷರಿ, ಎಸ್. ಸ್ವಾಮಿ, ಕೆ. ಎಂ. ನಾಗರತ್ನಮ್ಮ, ಬಿ. ಎಂ. ಭಾಗ್ಯವತಿ, ಎಸ್. ಲಿಖಿತ, ಶೈಲಾ ನಾಗರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ಮಾಜಿ ಸದಸ್ಯ ಕೆ.ಎಸ್.ಉಮಾಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಗ್ರಾಪಂ ಸದಸ್ಯ ಕೆ.ಎಸ್. ಶೇಖರ್, ವೀರಶೈವ ಮುಖಂಡರಾದ ಎಸ್.ವಿ.ಎಸ್. ಸುರೇಶ್, ಲಾಲನಹಳ್ಳಿ ಮಹೇಶ್, ಮಲ್ಲಪ್ಪ, ಅಮೃತರಘು, ನಾಗೇಂದ್ರ ಇದ್ದರು.