ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ: ಸುರೇಶಗೌಡ

| Published : Feb 14 2025, 12:35 AM IST

ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ: ಸುರೇಶಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪರಮೇಶ್ವರ್ ನಮ್ಮನ್ನ ಕರೆದು ಅನುದಾನ ಕೊಡಿಸ್ತಿವಿ ಅಂತಾ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅನುದಾ‌ನ ನೀಡಿಲ್ಲ‌

ಕನ್ನಡಪ್ರಭ ವಾರ್ತೆ ತುಮಕೂರು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಮಾಜಿ ಶಾಸಕ ಗೌರಿಶಂಕರ್ ಹಾಗೂ ಮುರಳೀಧರ ಹಾಲಪ್ಪ ಕೇಳಿರುವುದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನಿಸುತ್ತದೆ ಎಂದು ಗ್ರಾಮಾಂತರ ಶಾಸಕ ಸುರೇಶಗೌಡ ವ್ಯಂಗ್ಯವಾಡಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನೊಬ್ಬ ವಿಪಕ್ಷ ಶಾಸಕ,ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಯಾವ ಸಂದರ್ಭದಲ್ಲಿ ಹೇಗೆ ಮಾತಾಡಬೇಕೆಂದು ಗೊತ್ತಿದೆ ಎಂದ ಅವರು ಮೊನ್ನೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಗೌರಿಶಂಕರ್ ಅವರು ಸುದ್ದಿಗೋಷ್ಠಿ ನಡೆಸಲು ಪರಮೇಶ್ವರ್ ಅವರೇ ಹೇಳಿದ್ದಾರೆ ಎಂದರು.ತುಮಕೂರಿಗೆ ಮುಖ್ಯಮಂತ್ರಿ ಬಂದಾಗ ಅನುದಾನ ವಿಚಾರಕ್ಕೆ ಕಪ್ಪುಪಟ್ಟಿ ಪ್ರದರ್ಶನ ಮಾಡುವುದಾಗಿ ಹೇಳಿದೆವು. ಪರಮೇಶ್ವರ್ ನಮ್ಮನ್ನ ಕರೆದು ಅನುದಾನ ಕೊಡಿಸ್ತಿವಿ ಅಂತಾ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅನುದಾ‌ನ ನೀಡಿಲ್ಲ‌ ಎಂದರು.ಗಣರಾಜ್ಯೋತ್ಸವದ ದಿನ ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಮಾತನಾಡಿದರು. ನಾನು ಇಬ್ಬರು ಸಚಿವರಿಗೆ ಕೇಳುವುದಿಷ್ಟೆ ಡಿಕೆ ಶಿವಕುಮಾರ್ ಬಳಿ ಮಾತನಾಡಿ ಹೇಮಾವತಿ ಲಿಂಕ್ ಕೆನಾಲ್ ನಿಲ್ಲಿಸಿ ಎಂದರು.ಹೇಮಾವತಿ ಲಿಂಕ್ ಕೆನಾಲ್ ಕುಣಿಗಲ್ ,ಮಾಗಡಿಗೆ ಹೋದರೆ ನಮ್ಮ ಜಿಲ್ಲೆಯ ಆರು ತಾಲೂಕುಗಳಿಗೆ ಅನ್ಯಾಯ ಆಗಲಿದೆ. ನಮಗೆ ನೀರು ಬರುವುದಿಲ್ಲ. ಎಂದ ಅವರು ಮುಂದಿನ ಕ್ಯಾಬಿನೆಟ್ ನಲ್ಲಿ ಲಿಂಕ್ ಕೆನಾಲ್ ನಿಲ್ಲಿಸಬೇಕು ಎಂದರು.ಕುಣಿಗಲ್ ವಿಧಾನಸಭಾ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಿದ್ದಾರೆ. ಕೊರಟಗೆರೆ ಮಧುಗಿರಿ, ಕೋರಾ ಬೆಳ್ಳಾವಿಗೆ ಎತ್ತಿ‌ನಹೊಳೆ ನೀರು ಒದಗಿಸಲು ಯೋಜನೆ ಆಗಿದೆ. ಇಲ್ಲಿಯವರೆಗೆ ತುಮಕೂರು ಜಿಲ್ಲೆಗೆ ನೀರಾವರಿಗೆ ಅನುದಾನ ನೀಡಿಲ್ಲ ಎಂದರು.