ಮೋದಿ ಮತ್ತೆ ಪ್ರಧಾನಿ ಮಾಡಲು ಎಲ್ಲರೂ ಕೈ ಜೋಡಿಸಿ

| Published : Jan 19 2024, 01:45 AM IST

ಸಾರಾಂಶ

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೨೦೨೪ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹವನ್ನು ಬರೆಯುವ ಮೂಲಕ ಗೋಡೆ ಬರಹಕ್ಕೆ ಚಾಲನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶ ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಯಲು ಮೋದಿಜಿ ಅವರು ಇನ್ನೊಮ್ಮೆ ಪ್ರಧಾನಿಯಾಗಬೇಕಾಗಿರುವುದು ಅಗತ್ಯವಾಗಿದೆ. ಹೀಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಕೈ ಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ೨೦೨೪ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹವನ್ನು ಬರೆಯುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಈ ಸಂದೇಶದ ಗೋಡೆಬರಹವನ್ನು ಬರೆಯುವ ಕಾರ್ಯ ರೂಪಿಸಲಾಗಿದ್ದು ಕಾರ್ಯಕರ್ತರು ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರಗೊಳಿಸಬೇಕು ಎಂದು ಮನವಿ ಮಾಡಿದರು.

ಭಾರತವನ್ನು ವಿಶ್ವಗುರುವಾಗಿಸುವ ದಿವ್ಯ ಸಂಕಲ್ಪ ಹೊತ್ತು ಕೆಲಸ ಮಾಡಿ ವಿಶ್ರಾಂತಿ, ರಜೆಯನ್ನು ಪಡೆಯದೇ ಕೆಲಸ ಮಾಡುತ್ತಿರುವ ಮೋದಿಜಿ ಅವರಂತಹ ಪ್ರಧಾನಿಯನ್ನು ಪಡೆದಿದ್ದೆ ಒಂದು ಸುದೈವ. ಮೋದಿಜಿ ಅವರ ಕಾಲಘಟ್ಟದಲ್ಲಿ ಪ್ರಾಮಾಣಿಕ, ಜನಪರ ಹಾಗೂ ಪರಿಶುದ್ಧ ಆಡಳಿತ ಪ್ರತಿಯೊಬ್ಬ ಭಾರತೀಯರ ಮನಗೆದ್ದಿದೆ. ವಿದೇಶಿಯರು ಸಹ ಮೋದಿಜಿ ನಾಯಕತ್ವಕ್ಕೆ ಮನಸೋತಿವೆ ಎಂದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಭವ್ಯ ರಾಮಮಂದಿರ ನಿರ್ಮಾಣ, ಕಪ್ಪು ಹಣದ ವಿರುದ್ಧ ಸಮರ, ಉಜ್ವಲ ಯೋಜನೆ ಮೂಲಕ ಮನೆ ಮನೆಗೆ ಅಡುಗೆ ಅನೀಲ, ಫಸಲ್‌ ಬಿಮಾ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಹೀಗೆ ಮೋದಿಜಿ ಅವರು ರೂಪಿಸಿದ ಜನಪರ, ರೈತಪರ ಕಾರ್ಯಕ್ರಮಗಳ ಪಟ್ಟಿ ದೊಡ್ಡದಿದೆ. ಆರ್ಥಿಕತೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದೇ ರೀತಿಯ ಪ್ರಗತಿಯ ಪರಂಪರೆ ಮುಂದುವರಿಯಲು ಮೋದಿಜಿ ಅವರು ಇನ್ನೊಮ್ಮೆ ಪ್ರಧಾನಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳು ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಹೂಗಾರ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಸಗಾಯಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶಿಂದೆ, ಅಶೋಕ್ ರಾಥೋಡ್, ಸಂದೀಪ್ ಪಾಟೀಲ್, ಮಹೇಶ್ ಒಡೆಯರ್, ಶರಣಬಸವ ಕುಂಬಾರ, ಶ್ರೀಧರ ಬಿಜ್ಜರಗಿ, ರಾಘವೇಂದ್ರ ಕಾಪ್ಸೆ, ಸಿದ್ದರಾಮ ಆನಗೊಂಡ, ಯುವ ಮೋರ್ಚಾ ಪದಾಧಿಕಾರಿಗಳಾದ ಅನಿಲ್ ಉಪ್ಪಾರ, ಪ್ರವೀಣ ಕೋಡಗಿ, ದಶರಥ ಕಾಂಬಳೆ, ಆನಂದ್ ಮುಚ್ಚಂಡಿ, ವಿಕಾಸ್ ಕಿಟ್ಟಾ, ನಿಖಿಲ್ ಬಾಗೇವಾಡಿ, ಸ್ವರೂಪ ಸಪ್ತಾಳೆ ಉಪಸ್ಥಿತರಿದ್ದರು.