ತರೀಕೆರೆ ವಿಶೇಷ ಚೇತನರಿಗೆ ಸರ್ಕಾರದಿಂದ ಎಲ್ಲ ರೀತಿ ಪ್ರೋತ್ಸಾಹ ದೊರೆಯುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ತರೀಕೆರೆಯಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿಶೇಷ ಚೇತನರಿಗೆ ಸರ್ಕಾರದಿಂದ ಎಲ್ಲ ರೀತಿ ಪ್ರೋತ್ಸಾಹ ದೊರೆಯುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಸೋಮವಾರ ತಾಲೂಕು ಅಡಳಿತ ಮತ್ತು ತರೀಕೆರೆ ಮತ್ತು ಅಜ್ಜಂಪುರತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಚಿಕ್ಕಮಗಳೂರು, ಪುರಸಭೆ ತರೀಕೆರೆ ಮತ್ತು ಪಟ್ಟಣ ಪಂಚಾಯಿತಿ ಅಜ್ಜಂಪುರ ಹಾಗೂ ಇನ್ನಿತರ ಇಲಾಖೆಗಳು, ರೋಟರಿ ಸಂಸ್ಥೆ, ವಿಕಸನ ಸಂಸ್ಥೆ, ಭೂಮಿ ಫೌಂಡೇಶನ್, ಇತರ ವಿಶೇಷಚೇತನರ ಪರ ಸಂಘ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವವಿಕಲಚೇತನರ ದಿನಾಚರಣೆ ಉದ್ಘಾಟನೆ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇದು ಬಹಳ ಒಳ್ಳೆಯ ಕಾರ್ಯಕ್ರಮ, ವಿಶೇಷ ಚೇತನರಿಗೆ ಕ್ರೀಡಾಕೂಟ, ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಶೇಷ ಚೇತನರು ತುಂಬಾ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶೇಷ ಚೇತನರು ಅನೇಕ ಸಾಧನೆ ಮಾಡಿದ್ದಾರೆ, ವಿಶೇಷ ಚೇತನರಿಗೆ ಎಲ್ಲ ಶಾಲಾ ಕಾಲೇಜು ಇತ್ಯಾದಿ ಎಲ್ಲ ಕಡೆಗಳಲ್ಲಿ ರ್‍ಯಾಂಪ್ ಮಾಡಲಾಗುತ್ತದೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಪುರಸಭೆಯಿಂದ ವಿಶೇಷ ಚೇತನರಿಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದ್ದು, ವಿಶೇಷ ಚೇತನರಿಗೆ ಈಸಿ ಚೇರ್ ಗಳನ್ನು ನೀಡಲಾಗುತ್ತದೆ ಅಂದ ಅವರು ವಿಶ್ವ ವಿಶೇಷ ಚೇತನರ ದಿನಾಚರಣೆ ಶುಭಾಷಯ ಕೋರಿದರು.ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್. ಅವರು ಮಾತನಾಡಿ ಇಂದು ಬಹಳ ವಿಶೇಷವಾದ ದಿನ, ವಿಶೇಷ ಚೇತನರು ಅನೇಕ ಸಾಧನೆಗಳನ್ನು ಮಾಡಿದ್ದಾರೆ, ನಿಮ್ಮ ಮೇಲೆ ದೌರ್ಜನ್ಯ ಆಗಬಾರದು ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷರು ರೇವಣ್ಣ, ಸಿ.ಡಿ.ಪಿ.ಒ.ಚರಣ್, ತಾಲೂಕು ವಿವಿದೋದ್ದೇಶ ಪುನರ್ವಸಿತಿ ಕಾರ್ಯಕರ್ತರು ಅಕ್ರಂ ಪಾಶ ಅವರುಮಾತನಾಡಿದರು.ಪುರಸಭೆ ಸದಸ್ಯರಾದ ಟಿ.ಜಿ.ಲೋಕೇಶ್, ಪಾರ್ವತಮ್ಮ, ,ಪುರಸಭೆ ನಾಮಿನಿ ಸದಸ್ಯರಾದ ಆದಿಲ್ ಪಾಷ, ರೋಟರಿ ಸಂಸ್ಧೆ ಅಧ್ಯಕ್ಷರು ಬಿ.ಪಿ. ರವಿಕುಮಾರ್, ಕನ್ನಡಶ್ರೀ ಬಿ.ಎಸ್.ಭಗವಾನ್, ಎ.ಎಂ.ವರ್ಗೀಸ್ ಕ್ಲೀಟಸ್, ಜಯಕರ್ನಾಟಕ ಸಂಘದಟನೆ ತಾಲೂಕು ಅಧ್ಯಕ್ಷರು ಜಗದೀಶ್, ತಹಶೀಲ್ದಾರ್ ವಿಶ್ವಜಿತ್ ಮೇಹತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾದಿಕಾರಿ ಡಾ.ದೇವೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ರಂಜನ್, ತಾಲೂಕು ವೈದ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.---------------ಫೋಟೋ ಇದೆಃ5ಕೆಟಿಆರ್.ಕೆ. 1ಃ ತರೀಕೆರೆ.ಯಲ್ಲಿ ಏರ್ಪಾಡಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಗಾಟನೆಯನ್ನು ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ನೆರವೇರಿಸಿದರು.

ಪುರಸಭೆ ಅಧ್ಯಕ್ಷರು ವಸಂತಕುಮಾರ್, ಪುರಸಭೆ ಸದಸ್ಯರಾದ ಟಿ.ಜಿ.ಲೋಕೇಶ್, ಪಾರ್ವತಮ್ಮ, ಅದಿಲ್ ಪಾಷ, ಉಪವಿಭಾಗಾಧಿಕಾರಿ ಎನ್.ವಿ.ನಟೇಶ್, ತಹಶೀಲ್ದಾರ್ ವಿಶ್ವಜಿತ್ ಮೇಹತ, ಸಿ.ಡಿ.ಪಿ.ಒ.ಚರಣ್ ಮತ್ತಿತರರು ಇದ್ದಾರೆ. -------------- .