ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯ

| Published : Sep 02 2024, 02:00 AM IST / Updated: Sep 02 2024, 02:01 AM IST

ಸಾರಾಂಶ

ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಬೆಳಗಾವಿ ವಿಭಾಗದ ಸಹ ಮಂತ್ರಿ ಹಾಗೂ ಪ್ರಾಂತ ಗೋ ರಕ್ಷಾ ಸಹ ಪ್ರಮುಖರಾದ ವಿಠ್ಠಲಜೀ ಮಾಳಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಬೆಳಗಾವಿ ವಿಭಾಗದ ಸಹ ಮಂತ್ರಿ ಹಾಗೂ ಪ್ರಾಂತ ಗೋ ರಕ್ಷಾ ಸಹ ಪ್ರಮುಖರಾದ ವಿಠ್ಠಲಜೀ ಮಾಳಿ ಹೇಳಿದರು.

ಅವರು ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ವಿಶ್ವ ಹಿಂದೂಪರಿಷತ್ ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪೂರ ಇವರು ಹಮ್ಮಿಕೊಂಡ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತಿನ ಎಲ್ಲ ಸಂಸ್ಕೃತಿಗಳು ನಾಶವಾದರೂ ಹಿಂದೂ ಸಂಸ್ಕೃತಿ ನಾಶವಾಗಿಲ್ಲ. ಅದಕ್ಕೆ ನಮ್ಮ ಪೂರ್ವಜರಿಗೆ ಧನ್ಯವಾದ ಸಲ್ಲಿಸಬೇಕು. ಜಾತಿ ಬೇಧಗಳನ್ನ ಬದಿಗಿಟ್ಟು ನಾವೆಲ್ಲಾ ಹಿಂದೂ ಎನ್ನುವ ಭಾವನೆಗಳು ಗಟ್ಟಿಗೊಳ್ಳಬೇಕಿದೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಲೋಕಾಪುರ ಹಿರೇಮಠದ ಡಾ.ಚಂದ್ರಶೇಖರ ಸ್ವಾಮಿಗಳು, ಅಧ್ಯಕ್ಷತೆಯನ್ನು ರಬಕವಿಯ ಅರವಳಿಕೆ ತಜ್ಞ ಡಾ.ಸಂಗಮೇಶ ಹತಪಾಕಿ, ಮುಖ್ಯ ಅತಿಥಿಯಾಗಿ ಹಿರಿಯ ನ್ಯಾಯವಾದಿ ಸುಜಾತಾ ನಿಡೋಣಿ, ಬಸವರಾಜ ಹತರೊಟ್ಟಿ, ಮಹಾನಿಂಗಪ್ಪ ಕಂಕಣವಾಡಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ವಿರೂಪಾಕ್ಷಯ್ಯ ಮಠದ, ಎಂ.ಎಂ.ಹೊಸಮನಿ, ಶಿವಾನಂದ ಗಾಯಕವಾಡ, ಈರಣ್ಣ ಚಿಂಚಖಂಡಿ, ಶ್ರೀಶೈಲ ಬೀಳಗಿ, ರಮೇಶ ಸೋನಾವನೆ, ಸ೦ಜಯ ರಾವಳ, ಅಶೋಕ ರಾವಳ, ಸ೦ಜಯ ತೆಗ್ಗಿ, ಗೌರಿ ಮಿಳ್ಳಿ, ಆನಂದ ಕ೦ಪು, ಸೇರಿದಂತೆ ಅನೇಕ ಹಿ೦ದು ಮುಖಂಡರು ಇದ್ದರು.