ಎಲ್ಲ ಧರ್ಮಗಳು ಶಾಂತಿ ಬಯಸುತ್ತವೆ: ಪರಂ

| Published : Jul 22 2024, 01:23 AM IST

ಸಾರಾಂಶ

ಮೇಲು ಕೀಳು ಎನ್ನುವ ಭಾವನೆ ಮನುಷ್ಯರಲ್ಲಿ ಬರಬಾರದು ಎಲ್ಲರೂ ಶಾಂತಿ ನೆಮ್ಮದಿಯಿಂದ ಬಾಳಬೇಕು

ಕನ್ನಡಪ್ರಭ ಕೊರಟಗೆರೆ

ಕುರಾನ್ ಗ್ರಂಥದಲ್ಲಿನ ಸಾರಂಶದಂತೆ ಪ್ರಪಂಚದಲ್ಲಿ ಎಲ್ಲರೂ ಸಮಾನರು. ಮೇಲು ಕೀಳು ಎನ್ನುವ ಭಾವನೆ ಮನುಷ್ಯರಲ್ಲಿ ಬರಬಾರದು ಎಲ್ಲರೂ ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂಬುದು ಅಲ್ಲಾ ದೇವರ ಸಂದೇಶವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಮದ ಹಜರತ್ ಹುಸೇನ್ ಶಾ ವಲ್ಲಿ ದರ್ಗಾದಲ್ಲಿ ನಡೆದ ಉರುಸ್ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲಾ ಧರ್ಮಗಳು ಮಾನವತ್ವದ ಬದುಕನ್ನು ಸಾರುತ್ತವೆ. ಅದೇ ರೀತಿ ಉರಸ್ ಆಚರಣೆಯು ಸಹ ಸಹೋದತೆಯ ನೀತಿಯನ್ನು ಸಾರುತ್ತದೆ. ಭಾರತದಲ್ಲೂ ಸಹ ಸಾಕಷ್ಠು ಜನಸಂಖ್ಯೆಯಲ್ಲಿ ಹಿಂದುಗಳೊಂದಿಗೆ ಮುಸಲ್ಮಾನರು ವಾಸಿಸುತ್ತಿದ್ದು ಅದೇ ರೀತಿಯಾಗಿ ಕ್ರೈಸ್ತರು, ಬೌದ್ದರು, ಸಿಕ್ಕರು ಸೇರಿದಂತೆ ಹಲವು ಧರ್ಮದವರು ನಮ್ಮ ದೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬಾಬಾ ಸಾಹೇಬ್ ಅಬೇಂಡ್ಕರ್ ರವರ ಸಂವಿಧಾನದ ಆಶಯದಂತೆ ಎಲ್ಲಾ ಧರ್ಮದವರು ಅವರವರ ಧರ್ಮದ ಆಚರಣೆಯನ್ನು ಸ್ವತಂತ್ರವಾಗಿ ನೆಮ್ಮದಿಯಾಗಿ ಆಚರಿಸಬಹುದಾಗಿದೆ, ಅದೇ ರೀತಿ ಎಲ್ಲಾ ಧರ್ಮಗಳ ಸಂದೇಶ ಮನುಷ್ಯರು ಶಾಂತಿ ನಮ್ಮೆದಿಯಿಂದ ಬದುಕಬೇಕು ಎಂಬುದಾಗಿದೆ ಎಂದರು. ಅಕ್ಕಿರಾಂಪುರದ ಹಜರತ್ ಹುಸೇನ್ ಶಾ ವಲ್ಲಿ ದರ್ಗಾದ ಉರಸ್ ಆಚರಣೆಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ಆಚರಣೆಯಲ್ಲಿ ಹಿಂದುಗಳು ಸಹ ಭಾಗವಹಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ, ಈ ದೇಶದ ಜನರಲ್ಲಿ ಶಾಂತಿ ಸೌಹಾದತೆ, ಸಮಾನತೆಯ ಮನಸ್ಧಿತಿಗಳು ಎಲ್ಲಾ ಧರ್ಮಿಯರಿಗೂ ಬರಬೇಕಿದೆ. ಈ ಕ್ಷೇತ್ರದ ಶಾಸಕನಾಗಿ ರಾಜ್ಯ ಸರ್ಕಾರದ ಗೃಹ ಸಚಿವರಾಗಿ ನಾನು ಜನರ ಶಾಂತಿ ನೆಮ್ಮದಿ ಬದುಕಿಗೆ ಕಾರ್ಯನಿರ್ವಹಿಸಲಿದ್ದು ಜನರು ಸಹ ಭಾವೈಕ್ಯತೆಯಿಂದ ಬದುಕಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ನದೀಮ್, ಫಯೂ, ನಾಜೀರ್, ಫಯಾಜ್, ಚಾಂದ್, ಮುಸಾಮೀರ್, ಕರೀಂ, ಅಕ್ರಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಧನಾರಾಯಣ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿನಯ್‌ಕುಮಾರ್, ಅರವಿಂದ್, ಕವಿತಾ ಸೇರಿದಂತೆ ಇನ್ನಿತರರು ಹಾಜರಿದ್ದರು.