ಸಾರಾಂಶ
ಸರ್ವ ಧರ್ಮಿಯರನ್ನು ಆತ್ಮೀಯತೆಯಿಂದ ಕಾಣಬೇಕು. ಎಲ್ಲ ಧರ್ಮಿಯರನ್ನು ಪ್ರೀತಿಸುವುದರ ಜೊತೆಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಸರ್ವ ಧರ್ಮಿಯರನ್ನು ಆತ್ಮೀಯತೆಯಿಂದ ಕಾಣಬೇಕು. ಎಲ್ಲ ಧರ್ಮಿಯರನ್ನು ಪ್ರೀತಿಸುವುದರ ಜೊತೆಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಸ್ಥಳೀಯ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಹಬ್ಬದ ನಿಮಿತ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿ, ಅಲ್ಲಾಹ ಸರ್ವರಿಗೂ ಜಗತ್ತಿನಲ್ಲಿ ಸುಖ, ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಅಂಜುಮನ್-ಏ-ಇಸ್ಲಾಂ ಕಮಿಟಿ ಸದಸ್ಯರು ಹಾಗೂ ಹಿರಿಯ ವಕೀಲ ಐ.ಎಚ್. ಅಂಬಿ, ಮಾತನಾಡಿ, ತ್ಯಾಗ, ಬಲಿದಾನದ ಬಕ್ರೀದ್ ಹಬ್ಬವನ್ನು ನಾವೆಲ್ಲರೂ ಭಕ್ತಿಯಿಂದ ಆಚರಿಸೋಣ, ಸಜ್ಜನ, ತಾಳ್ಮೆಯ ಪ್ರತಿರೂಪವಾಗಿದ್ದ ಪ್ರವಾದಿ ಮಹಮ್ಮದ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಜೀವನ ಸಾಗಿಸಿದರೆ ಜಗತ್ತಿನಲ್ಲಿ ಮತ್ತು ಮರಣಾ ನಂತರ ಜೀವನದಲ್ಲಿ ಯಶಸ್ವಿ ಆಗುತ್ತೇವೆ ಎಂದು ಹೇಳಿದರು.ಇದಕ್ಕೂ ಮುನ್ನ ಬೆಳಗ್ಗೆ 8 ಗಂಟೆಗೆ ನಗರದ ಗಾಂಧಿ ಸರ್ಕಲ್ ನ ಶಾಹಿ ಮಸೀದಿಯಿಂದ ಮೇನ್ ಬಜಾರ್ ಮಾರ್ಗವಾಗಿ ಮುಸ್ಲಿಮರು ಬೃಹತ್ ಮೆರವಣಿಗೆ ಮೂಲಕ ಹೊರವಲಯದ ಈದ್ದಾ ಮೈದಾನಕ್ಕೆ ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು, ಮೌಲಾನಾಗಳಾದ ಇಕ್ಬಾಲ್ ನಗಾರ್ಚಿ, ಜಮೀರ ಇನಾಮದಾರ, ಪ್ರಾರ್ಥನೆ ನೇತೃತ್ವ ವಹಿಸಿದ್ದರು.
ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಆರೀಫ್ ಮೋಮಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಂಗ್ರೆಸ್ ಮುಖಂಡ ಸದುಗೌಡ ಪಾಟೀಲ, ಮುಸ್ಲಿಂ ಸಮಾಜದ ಮುಖಂಡರಾದ ಎನ್.ಬಿ. ಹುಬಳ್ಕೀರ್, ಬಾಷಾ ರಾಮದುರ್ಗ, ನಬಿ ಉಸ್ತಾದ್, ಯುನೂಸ್ ಹುಲಕುಂದ, ಯುಸೂಫ್ ಜಮಾದಾರ, ರಾಜು ಬಾಗವಾನ, ಯುಸೂಫ್ ಚಾಂದ, ಭಾಷಾ ಕೌಜಲಗಿ, ನಬಿ ಜಾಗಿರದಾರ, ನಜೀರ್ ಪಠಾಣ, ಇಬ್ರಾಹಿಂ ಸಾರವಾನ, ಸೈದು ಹುಬ್ಬಳ್ಳಿ, ಬಿ.ಎಚ್. ಬಿಳಗಿ, ಆರೀಫ್ ಪಠಾಣ, ಖಾಜಾಮೀನ ಬಾಗವಾನ, ಶಿರಾಜ ಹೊರಟ್ಟಿ, ಸಾಹೇಬಲಾಲ ನದಾಫ್, ಶಫೀಕ್ ಬೇಪಾರಿ, ರಫೀಕ್ ಪಠಾಣ, ರಾಜು ಜಮಾದಾರ, ಮೈನೋದ್ದಿನ್ ಅಂಬಿ, ಶಫೀಕ್ ಪಠಾಣ, ಮಹಿಬೂಬ ಅಮ್ಮಲಜೇರಿ, ಹಬೀಬ್ ಗಲಗಲಿ ಸೇರಿದಂತೆ ಮುಧೋಳ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.