ಸಹಕಾರ-ಸಹಬಾಳ್ವೆಯಿಂದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ

| Published : Aug 29 2025, 01:00 AM IST

ಸಾರಾಂಶ

ಸಹಕಾರ-ಸಹಬಾಳ್ವೆಯಿಂದ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ದಿಗೆ ಶ್ರಮಿಸಲಿ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸಹಕಾರ-ಸಹಬಾಳ್ವೆಯಿಂದ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ದಿಗೆ ಶ್ರಮಿಸಲಿ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕಲ್ಪತರು ವೀರಶೈವ ಲಿಂಗಾಯತ ಸೌಹಾರ್ದ ಪತ್ತಿನ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ೬ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಹುಟ್ಟುತ್ತಲೆ ಸಂಘ ಜೀವಿ ಹಾಗೂ ಸಮಾಜ ಜೀವಿಯಾಗಿದ್ದು ಸೌಹಾರ್ದತೆಯಿಂದ ಕೂಡಿದ ಸಂಬಂಧಗಳೇ ಅವರ ಜೀವನಾಡಿಗಳಾಗಿವೆ. ಪರಸ್ಪರರು ನಂಬಿಕೆ, ವಿಶ್ವಾಸದಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಿಂದಿನಕಾಲದಿಂದಲೂ ಸಹಕಾರ ಎಂಬುದು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ. ತಮ್ಮ ಆರ್ಥಿಕ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಪಡೆಯುವ ಸಾಲವನ್ನು ಮತ್ತೊಬ್ಬ ಸದಸ್ಯನಿಗೆ ಸಾಲ ಸಿಗುವ ಜೊತೆಗೆ ಸಂಘದ ಅಭಿವೃದ್ಧಿಯೂ ಮುಖ್ಯವಾಗಿದೆ. ಈ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದು ಸಹಕಾರಿಯ ಸದಸ್ಯರಿಗೆ ಮತ್ತಷ್ಟು ಸೇವೆ ಸಲ್ಲಿಸುವ ಮೂಲಕ ಮುಂದೆಯೂ ಇದೇ ರೀತಿ ನಡೆದುಕೊಂಡು ಹೋಗಲಿ. ಮುಂದಿನ ದಿನಗಳಲ್ಲಿ ಈ ಸಂಘದಿಂದ ಆರ್ಥಿಕಾಭಿವೃದ್ಧಿಯ ಜೊತೆಗೆ ಸಾಮಾಜಿಕ ಕಾರ್ಯಗಳು ನಡೆದು ಆ ಮೂಲಕ ಎಲ್ಲರಿಗೂ ಸೌಲಭ್ಯಗಳು ಸಿಗುವಂತಾಗಲಿ. ಈ ಬಗ್ಗೆ ಸಂಘದ ಜವಾಬ್ದಾರಿ ಹೊತ್ತವರು ಆಲೋಚನೆ ಮಾಡಿ ಸಂಘವನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮುಂದುವರೆಯಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಅಧ್ಯಕ್ಷರಾದ ಲಿಂಗದೇವರು ಮಾತನಾಡಿ, ನಮ್ಮ ಸಹಕಾರಿಯು ಸಾಮಾನ್ಯವರ್ಗದ ಸೇವ ಮನೋಭಾವನೆ ಇಟ್ಟುಕೊಂಡು ಬೆಳೆಯುತ್ತಿದೆ. ಸಂಘದ ವತಿಯಿಂದ ಸಹಕಾರ ಪಡೆದವರು ಅಭಿವೃದ್ದಿ ಪಥದತ್ತ ಹೆಜ್ಜೆ ಹಾಕಿದ್ದು ಇದು ಸಂಘದ ಸಾರ್ಥಕತೆಗೆ ಸಾಕ್ಷಿಯಾಗಿದೆ. ಸಂಘದ ಅಭಿವೃದ್ದಿಗೆ ಪ್ರತ್ಯಕ್ಷ ಪರೋಕ್ಷವಾಗಿ ಶ್ರಮಿಸುತ್ತಿರುವವರ ಪರಿಶ್ರಮದಿಂದ ಸಂಘ ಬೆಳೆಯುತ್ತಿದೆ. ಸಹಕಾರಿ ಸಂಘದ ಸಂಪೂರ್ಣ ಬೆಳವಣಿಗೆಗೆ ಸರ್ವಸದಸ್ಯರ ಸಹಕಾರ ಬಹುಮುಖ್ಯವಾಗಿದೆ. ಅವರೆಲ್ಲರ ನೆರವಿನಿಂದ ದಿನೇ ದಿನೇ ನಮ್ಮ ಸಂಘವೂ ಅಭಿವೃದ್ಧಿಯಾಗುತ್ತಾ ಬಂದಿದೆ. ಇದರಿಂದಾಗಿ ಅವಶ್ಯವಿರುವವರಿಗೆ ಆರ್ಥಿಕ ಸಹಾಯವನ್ನು ಪಡೆದುಕೊಂಡು ಸುಸ್ತಿರ ಜೀವನ ನಡೆಸಲು ಅನುಕೂಲವಾಗಿದೆ ಎಂದರು. ಈ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್, ರಾಜ್ಯ ಸಹಕಾರಿ ನಿಯಮಿತ ನಿರ್ದೇಶಕ ವಿಜಯ್, ಸಹಕಾರಿ ಉಪಾಧ್ಯಕ್ಷ ಕೆ.ಸಿ. ಜಗದೀಶಪ್ಪ, ನಿರ್ದೇಶಕರುಗಳಾದ ತೇಜಮೂರ್ತಿ, ನಿಜಗುಣ, ಎಂ. ನಿಜಗುಣ, ಮರುಳಸಿದ್ದಸ್ವಾಮಿ, ತೋಂಟಾರಾಧ್ಯ, ವೀರಭದ್ರಸ್ವಾಮಿ, ತೇಜಮೂರ್ತಿ, ನೀಲಕಂಠಸ್ವಾಮಿ, ಬೋರೇಗೌಡ, ವೀಣಾ, ಕಾವ್ಯಶ್ರಿ, ಶಶಿಧ್, ರಾಜು, ಅಪ್ಪೇಗೌಡಸ್ವಾಮಿ, ಚಿದಾನಂದಸ್ವಾಮಿ, ಎಸ್. ಜಗದೀಶ್, ಸೋಮಶೇಖರಪ್ಪ, ಶಿವಸ್ವಾಮಿ ಮತ್ತಿತರರಿದ್ದರು.