ಎಲ್ಲರೂ ಮದರ್‌ ಥೆರೇಸಾ ಸೇವಾ ಗುಣ ಬೆಳೆಸಿಕೊಳ್ಳಿ

| Published : May 16 2024, 12:49 AM IST

ಸಾರಾಂಶ

ಜಗತ್ತಿನಲ್ಲಿ ನರ್ಸಿಂಗ್ ವೃತ್ತಿ ಅತ್ಯುತ್ತಮ ಪಾವಿತ್ರತೆಯಿಂದ ಕೂಡಿದೆ. ನರ್ಸಿಂಗ್ ವಿಭಾಗದಲ್ಲಿ ಮದರ್‌ ಥೆರೇಸಾ ಅವರ ಸೇವಾ ಗುಣಗಳನ್ನು ದಾದಿಯರು ಬೆಳೆಸಿಕೊಳ್ಳಬೇಕು ಎಂದು ಸಾಹೆ ವಿವಿಯ ಉಪ ಕುಲಪತಿ ಡಾ. ಬಿ.ಕೆ. ಲಿಂಗೇಗೌಡ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಗತ್ತಿನಲ್ಲಿ ನರ್ಸಿಂಗ್ ವೃತ್ತಿ ಅತ್ಯುತ್ತಮ ಪಾವಿತ್ರತೆಯಿಂದ ಕೂಡಿದೆ. ನರ್ಸಿಂಗ್ ವಿಭಾಗದಲ್ಲಿ ಮದರ್‌ ಥೆರೇಸಾ ಅವರ ಸೇವಾ ಗುಣಗಳನ್ನು ದಾದಿಯರು ಬೆಳೆಸಿಕೊಳ್ಳಬೇಕು ಎಂದು ಸಾಹೆ ವಿವಿಯ ಉಪ ಕುಲಪತಿ ಡಾ. ಬಿ.ಕೆ. ಲಿಂಗೇಗೌಡ ಕರೆ ನೀಡಿದರು.ನಗರದ ಅಗಳಕೋಟೆಯ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ನಾಗಾರ್ಜುನ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೇವಲ ಆಸ್ಪತ್ರೆ ಮಾತ್ರ ಅಲ್ಲದೆ ಮನೆಗಳ ಅಕ್ಕ ಪಕ್ಕ ಕೂಡ ದಾದೀಯರು ಸೇವೆ ಮಾಡಿ ಜಾಗೃತಿ ಮೂಡಿಸಿದಾಗ ಮಾತ್ರ ಕಾಯಿಲೆಗ ತಡೆಗಟ್ಟಲು ಸಾಧ್ಯ. ನೀವು ತೊಡುವ ಶುಭ್ರ ಬಟ್ಟೆಯ ರೀತಿಯಲ್ಲೇ ನಿಮ್ಮ ಸೇವೆ ಕೂಡ ಶುಭ್ರವಾಗಿರಬೇಕು. ರೋಗಿಗಳ ಸೇವೆ ಮಾಡುವಾಗ ಯಾವುದು ಮುಜುಗರ ಪಡದೆ ಸೇವೆ ಸಲ್ಲಿಸಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದಾಗ ಮಾತ್ರ ರೋಗಿಗಳ ಸೇವೆ ಮಾಡಲು ಸಾಧ್ಯ. ಒಂದು ಆಸ್ಪತ್ರೆಯ ಬೆಳವಣಿಗೆ ಹಾಗೂ ಸಾಧನೆಗೆ ದಾದಿಯರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸಿದ್ದಾರ್ಥ ವೈದ್ಯಕೀಯ ಅಸ್ಪತ್ರೆ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ. ಸಾಣಿಕೊಪ್ಪ ಮಾತನಾಡಿ, ದಾದಿಯರ ಸೇವೆ ಅಗಾಧವಾದುದು, ಆಸ್ಪತ್ರೆಯ ಯಾವುದೇ ವಿಭಾಗದಲ್ಲಿ ಅವರು ಇಲ್ಲಾ ಎಂದರೆ ಕಷ್ಟ. ದಾದಿಯರನ್ನು ರೋಗಿಗಳ ಮೊದಲ ವೈದ್ಯ ಎಂದರೆ ಯಾವುದೇ ತಪ್ಪಾಗುವುದಿಲ್ಲ. ಬೆಳಗ್ಗೆ ರಾತ್ರಿ ಎನ್ನದೆ ರೋಗಿಗಳ ಸೇವೆಗೆ ಸಿದ್ಧರಾಗಿರುತ್ತಾರೆ. ಕರೋನ ಸಮಯದಲ್ಲಂತೂ ಅವರ ಸೇವೆ ಅಪಾರ. ವೈದ್ಯರು ಕೂಡ ಕರೋನ ಸೋಂಕಿತ ರೋಗಿಗಳನ್ನ ಚಿಕಿತ್ಸೆ ಮಾಡಲು ಹೆದರುತ್ತಿದ್ದ ವೇಳೆಯಲ್ಲಿ ದಾದಿಯರು ಭಯ ಪಡದೆ ರೋಗಿಗಳ ಸೇವೆ ಮಾಡಿ ಕರೋನ ತಡೆಗಟ್ಟುವಲ್ಲಿ ಶ್ರಮಿಸಿದ್ದಾರೆ ಎಂದರು.ರೋಗಿಗಳ ಸೇವೆಯಲ್ಲಿ ವೈದ್ಯರ ಪಾತ್ರ ಎಷ್ಟಿರುತ್ತದೇ ಅದಕ್ಕಿಂತ ಹೆಚ್ಚಿನ ಪಾತ್ರ ಶುಶ್ರೂಷಕರದ್ದಾಗಿರುತ್ತದೆ. ಒಬ್ಬ ರೋಗಿ ಆಸ್ಪತ್ರೆಯಿಂದ ಗುಣಮುಖವಾಗಿ ಹೊರಹೋಗುವಾಗ ನಿಮ್ಮನ್ನ ನೆನಪು ಮಾಡಿಕೊಂಡು ಕೈ ಮುಗಿದು ಹೋಗುತ್ತಾರೆ. ಇಂತಹ ಅದೆಷ್ಟೋ ಉದಾಹರಣೆಗಳು ಕಾಣಿಸುತ್ತವೆ. ಮದರ್‌ ಥೆರೆಸಾ, ನೈಟಿಂಗಲ್‌ರಂತಹ ಆದರ್ಶಗಳನ್ನು ನೀವು ಕೂಡ ಅಳವಡಿಸಿಕೊಂಡು ಸೇವೆ ಮಾಡಿ ಎಂದು ಕಿವಿಮಾತು ಹೇಳಿದರು. ಸಾಹೆ ವಿವಿಯ ಪರೀಕ್ಷಾ ಮೇಲ್ವಿಚಾರಕ ಡಾ.ಗುರುಶಂಕರ್, ಉಪ ಪ್ರಾಂಶುಪಾಲ ಡಾ.ಜಿ.ಎನ್ ಪ್ರಭಾಕರ್, ವೈದ್ಯಕೀಯ ಅಧೀಕ್ಷಕ ಡಾ.ಎನ್.ಎಸ್ ವೆಂಕಟೇಶ್, ಸಿಇಓ ಡಾ.ಕಿರಣ್‌ಕುಮಾರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುಜಾತ, ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ನಾಗರತ್ನಮ್ಮ ಮತ್ತು ನರ್ಸಿಂಗ್ ಸಿಬ್ಬಂದಿಗಳು ಹಾಜರಿದ್ದರು.