ಸಾರಾಂಶ
ಮಧ್ಯಮ ವರ್ಗದವರ ಆರ್ಥಿಕ ಸ್ಥಿರತೆಗೆ ಮತ್ತು ಕೊಂಡುಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ. ಈಗಾಗಲೇ ತಾಲೂಕಿನ ಎಲ್ಲ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ಮುಟ್ಟಿವೆ. ಈ ಯೋಜನೆಗಳಿಂದ ವಂಚಿತರಾದವರು ನಮ್ಮ ಗಮನಕ್ಕೆ ತನ್ನಿ ಎಂದು ಕಾಗವಾಡ ತಹಸೀಲ್ದಾರ ಸಂಜಯ ಇಂಗಳೆ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಮಧ್ಯಮ ವರ್ಗದವರ ಆರ್ಥಿಕ ಸ್ಥಿರತೆಗೆ ಮತ್ತು ಕೊಂಡುಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ. ಈಗಾಗಲೇ ತಾಲೂಕಿನ ಎಲ್ಲ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ಮುಟ್ಟಿವೆ. ಈ ಯೋಜನೆಗಳಿಂದ ವಂಚಿತರಾದವರು ನಮ್ಮ ಗಮನಕ್ಕೆ ತನ್ನಿ ಎಂದು ಕಾಗವಾಡ ತಹಸೀಲ್ದಾರ ಸಂಜಯ ಇಂಗಳೆ ಹೇಳಿದರು.ತಾಲೂಕಿನ ಐನಾಪೂರ ಪಟ್ಟಣದ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕು ಆಡಳಿತ ಕಾಗವಾಡ ಹಾಗೂ ತಾಲೂಕು ಪಂಚಾಯತ, ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ ಮತ್ತು ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಸಾಕಷ್ಟು ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.ರಾಜ್ಯ ಸರ್ಕಾರ ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೆ ಮಾಡಿದೆ. ಇನ್ನೂ ಈ ಯೋಜನೆಯಿಂದ ವಂಚಿತರಾದವರು ನಮ್ಮ ಗಮನಕ್ಕೆ ತನ್ನಿ. ನಾವು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಈ ವೇಳೆ ಕಾಗವಾಡ ಸಿಡಿಪಿಒ ಸಂಜೀವ ಕುಮಾರ ಸದಲಗಿ, ತಾ.ಪಂ. ಇಒ ಪ್ರವೀಣ ಪಾಟೀಲ, ಬಿಇಒ ಎಂ.ಆರ್. ಮುಂಜೆ, ಐನಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ, ಕಾಗವಾಡ ಪಟ್ಟಣ ಪಂಚಾಯಿತಿ ಅಧಿಕಾರಿ ಕೆ.ಕೆ. ಗಾವಡೆ, ಉಗಾರ ಖುರ್ದ ಪುರಸಭೆ ಅಧಿಕಾರಿ ಟಿ.ಎಂ. ಯಶೋಧಾ, ಹೆಸ್ಕಾಂ ಅಧಿಕಾರಿ ಡಿ.ಎಸ್. ಮಾಳಿ, ಐನಾಪೂರ ಪ.ಪಂ ಸದಸ್ಯ ಅರುಣ ಗಾಣಿಗೇರ, ಸಂಜಯ ಭಿರಡಿ, ಕುಮಾರ ಜಯಕರ, ವೃತ್ತ ನಿರೀಕ್ಷಕ ಶಫೀಕ ಮುಲ್ಲಾ, ಹಿರಿಯ ಮೇಲ್ವಿಚಾರಕಿ ಸುಜಾತಾ ಪಾಟೀಲ್, ಆಹಾರ ಇಲಾಖೆಯ ಅಧಿಕಾರಿ ಸಂತೋಷ ಬುಡರ ಸೇರಿದಂತೆ ಕಚೇರಿಯ ಎಲ್ಲ ಮೇಲ್ವಿಚಾರಕಿಯರು, ಪ.ಪಂ. ಸಿಬ್ಬಂದಿ ವರ್ಗದವರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಮಹಿಳೆಯರಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.