ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಕೆ ಮಾಡುವ ರೈತರಿಗೆ, ಕಬ್ಬು ಕಟಾವು ಮಾಡುವ ಕಾರ್ಮಿಕರು ಮತ್ತು ಸಾಗಾಣಿಕೆದಾರರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅಲೆದು ತೊಂದರೆಯಾಗುವುದನ್ನು ತಪ್ಪಿಸಲು ಹಾಗೂ ಶೀಘ್ರ ವಹಿವಾಟು ಮಾಡಲು ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಶಾಖೆಯನ್ನು ಕಾರ್ಖಾನೆಯ ಆವರಣದಲ್ಲಿ ಆರಂಭಿಸಿಲಾಗಿದೆ ಸಂಘದ ಸಂಸ್ಥಾಪಕ ಅಧ್ಯಕ್ಷ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.ತಾಲೂಕಿನ ಉದಪುಡಿಯ ಗುಡಗುಂಟಿ (ಶಿವಸಾಗರ) ಸಕ್ಕರೆ ಕಾರ್ಖಾನೆ ಆವರಣದಲ್ಲಿ ಪ್ರಭುಲಿಂಗೇಶ್ವರ ಸಂಘದ 13ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಂಬಂಧಿತ ಸಾಲ ಸೌಲಭ್ಯದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಸೌಹಾರ್ದ ಸಹಕಾರಿ ನೀಡಲಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಕೋರಿದರು.ಎಂ.ಚಂದರಗಿ ಗುರುಗಡದೇಶ್ವರ ಹಿರೇಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಬನ್ನೂರ ಚಿಕ್ಕಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಾಗೋಜಿಕೊಪ್ಪ ಶಿವಯೋಗೇಶ್ವರ ಹಿರೇಮಠದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ಚೌಕಿಮಠದ ಶ್ರೀಸಚ್ಚಿದಾನಂದ ಸ್ವಾಮೀಜಿ, ಚಿಪ್ಪಲಕಟ್ಟಿ ಬ್ರಹನ್ಮಠದ ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹರ್ಲಾಪೂರ ಢವಳೇಶ್ವರ ಮಠದ ಶ್ರೀರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಲೋಕಾಪೂರದ ಶ್ರೀಚಂದ್ರಶೇಖರ ಹಿರೇಮಠ ಸ್ವಾಮೀಜಿ ಹಾಗೂ ಬಿಡಕಿ ಗ್ರಾಮದ ಶ್ರೀಗಂಗಾಧರ ಶಿವಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ರಾಮದುರ್ಗ ಬಿಜೆಪಿ ಮಂಡಳ ಅಧ್ಯಕ್ಷ ಡಾ.ಕೆ.ವಿ.ಪಾಟೀಲ, ಮುಖಂಡ ವೈ.ಎಚ್.ಪಾಟೀಲ, ಉದ್ಯಮಿ ರಮೇಶ ಪಂಚಕಟ್ಟಿಮಠ, ಮುರಗಯ್ಯ ವಿರಕ್ತಮಠ, ಭೀಮಪ್ಪ ಬಸಿಡೋಣಿ, ಟಿ.ಎನ್.ರಡ್ಡಿ, ಟಿ.ಪಿ.ಮುನ್ನೋಳ್ಳಿ, ರಾಜು ಮರಲಿಂಗನವರ, ಗೋಪಾಲ ಲಕ್ಷಾಣಿ, ಮಾರುತಿ ಕೊಪ್ಪದ, ಜನಕರಡ್ಡಿ ಹಕಾಟಿ, ನೇಮಣ್ಣ ಜಮಖಂಡಿ, ವಿರುಪಾಕ್ಷಯ್ಯ ಗುಡಗುಂಟಿ ಸೇರಿದಂತೆ ಇತರರಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಹೇಶ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.