ಸಾರಾಂಶ
ಕೋಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ನನ್ನ ಬಳಿ ಎಲ್ಲ ದಾಖಲೆಗಳು ಇವೆ, ಯಾವುದೇ ಅಧಿಕಾರಿಗಳಾಗಲಿ, ಸಚಿವರಾಗಲಿ ಅಥವಾ ಮಾಧ್ಯಮಗಳ , ಮುಂದೆ ಮುಖಾಮುಖಿ ಕುಳಿತು ಅಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ವಿವರಿಸುವೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಬಂಗಾರಪೇಟೆ : ಕೋಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ನನ್ನ ಬಳಿ ಎಲ್ಲ ದಾಖಲೆಗಳು ಇವೆ, ಯಾವುದೇ ಅಧಿಕಾರಿಗಳಾಗಲಿ, ಸಚಿವರಾಗಲಿ ಅಥವಾ ಮಾಧ್ಯಮಗಳ , ಮುಂದೆ ಮುಖಾಮುಖಿ ಕುಳಿತು ಅಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ವಿವರಿಸುವೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಗೌರವಾನ್ವಿತ ಜೋಡಿದಾರ ಕುಟುಂಬದವರಾಗಿರುವ ಶಾಸಕರು ಹಾಗೂ ಕೋಚಿಮೂಲ್ ಮಾಜಿ ಅಧ್ಯಕ್ಷ ಕೆ ವೈ ನಂಜೇಗೌಡ ಮಾಧ್ಯಮಗಳ ಮುಖಾಂತರ ಕೋಮುಲ್‌ನಲ್ಲಿ ಯಾವುದೇ ಅವ್ಯವಹಾರ ನಡದೇ ಇಲ್ಲ ಎಂಬಂತೆ ಹೇಳಿದ್ದಾರೆ. ಆದರೆ ತಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದರು.
ಆಪಾದನೆಗೆ ದಾಖಲೆ ಇವೆನಾನು ಈಗಾಗಲೇ ಮಾಡಿರುವಂತಹ ಆಪಾದನೆಗಳು ಎಲ್ಲವೂ ಸತ್ಯ, ಭ್ರಷ್ಟಾಚಾರಕ್ಕೆ ಸಂಬಂಧಿಸಿರುವುದು. ಇದಕ್ಕೆ ನನ್ನ ಬಳಿ ಎಲ್ಲಾ ದಾಖಲೆಗಳು ಇವೆ, ರೈತರಿಗೆ ಎಲ್ಲೆಲ್ಲಿ ಮೋಸವಾಗಿದೆ. ರೈತರ ಸಂಸ್ಥೆಯನ್ನು ಯಾವ ರೀತಿ ಹಾಳು ಮಾಡಿದ್ದಾರೆ. ಹಾಗೂ ಅನಗತ್ಯವಾಗಿ ನೂರಾರು ಕೋಟಿ ರು.ಗಳನ್ನು ಖರ್ಚು ಮಾಡಿದ್ದಾರೆ. ಹಣವನ್ನು ವ್ಯರ್ಥ ಮಾಡಿರುವುದು, ಎಲ್ಲವೂ ಸಹ ಅಂಕಿ ಅಂಶಗಳ ಸಮೇತ ನೀಡುತ್ತೇನೆ ಎಂದು ಹೇಳಿದರು. ಒಂದು ವೇಳೆ ತಾವು ನೀಡುವ ಮಾಹಿತಿಯಲ್ಲಿ ಸತ್ಯಾಂಶ ಇಲ್ಲದಿದ್ದರೆ ಯಾರು ಬೇಕಾದರೂ ಕಾನೂನು ಕ್ರಮ ಕೈಗೊಳ್ಳಬಹುದು. ಜಮೀನಿನ ಮಂಜೂರಾತಿ ವಿಷಯದಲ್ಲಿ, ಗೋಲ್ಡನ್ ಡೇರಿ ವಿಚಾರ, ಅಪಾಟ್ಮೆರ್ಂಟ್ ವಿಚಾರ, ಗೋಲ್ಡ್ ಕಾಯಿನ್ ಖರೀದಿ ಮಾಡಿ ಸದ್ಯಸರಿಗೆ ಹಂಚಿರುವ ವಿಚಾರವಾಗಲಿ, ಯಾರ ಮೇಲೋ ಇಡಿ ಕೇಸ್ ದಾಖಲು ಮಾಡಿದಾಗ ಆ ಪ್ರಕರಣಕ್ಕಾಗಿ ಸಂಸ್ಥೆಯಿಂದ ವಕೀಲರಿಗೆ ಹಣ ನೀಡಿರುವುದು, ಇಂತಹ ಹಲವಾರು ವಿಚಾರಗಳ ಬಗ್ಗೆ ಈಗಾಗಲೇ ನಾನು ಚರ್ಚೆ ಮಾಡಿದ್ದೇನೆ ಎಂದರು.
ಯಾವ ಮೇಲೂ ದ್ವೇಷ ಇಲ್ಲ
ಮತ್ತೊಬ್ಬ ಗೌರವಾನ್ವಿತ ಸಮ್ಮಿತ್ರ ಶಾಸಕ ಕೋಲಾರದಲ್ಲಿ ಮಾತನಾಡಿದ್ದಾರೆ. ಮಂತ್ರಿಗಳು ಬಂದಾಗ ತಬ್ಬಿಕೊಳ್ಳುತ್ತಾರೆ . ಈಗ ಅವರ ಮೇಲೆ ಆಪಾದನೆಗಳನ್ನು ಮಾಡುತ್ತಾರೆ ಎಂದಿದ್ದಾರೆ. ಹೌದು ನಮ್ಮ ಸರ್ಕಾರದ ಮಂತ್ರಿಗಳು ಅವರ ಬಂದಾಗ ತಬ್ಬಿಕೊಳ್ಳುತ್ತೇವೆ, ಪ್ರೀತಿ ಮಾಡುತ್ತೇವೆ, ಹೊಂದಿಕೊಂಡು ಹೋಗುತ್ತೇವೆ, ವೈಯಕ್ತಿಕವಾಗಿ ಅವರ ಮೇಲೆ ಯಾವುದೇ ದ್ವೇಷವಿಲ್ಲ, ನಾನು ಕೋಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳ ಸಮೇತ ನೀಡಿದರೂ ಯಾರೂ ನನಗೆ ಸಹಕಾರ ನೀಡಿಲ್ಲ ಎಂಬ ಬೇಸರ ಬಿಟ್ಟರೆ ಬೇರೇನೂ ಇಲ್ಲ ಎಂದರು.
ಬಲಗೈ ಸಮುದಾಯ ಹೆಚ್ಚಾಗಿದ್ದಾರೆ
ಕೋಲಾರ ಜಿಲ್ಲೆಯಲ್ಲಿ ಬಲಗೈ ಸಮುದಾಯದ ಒಬ್ಬೇ ಒಬ್ಬ ಶಾಸಕನಾಗಿ ನಾನಿದ್ದೇನೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಬಲಗೈ ಸಮುದಾಯದವರು ಇದ್ದಾರೆ. ಹಾಗೂ ಅತಿ ಹೆಚ್ಚು ಮತಗಳು ಸಹ ಇವೆ. ಬಲಗೈ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿದೆ. ನನ್ನನ್ನೂ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಎಲ್ಲರೂ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಅಹಿಂದ ವರ್ಗದವರು ನಾವೆಲ್ಲರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲವಾಗಿ ಇದ್ದೇವೆ ಎಂದರು.
ಆದರೆ ಯಾರೋ ಒಬ್ಬರು ಇಬ್ಬರು ಬೇರೆ ಕಡೆ ಇರಬಹುದು. ಇನ್ನೂ ಎಷ್ಟು ವರ್ಷಗಳು ದಬ್ಬಾಳಿಕೆ ದೌರ್ಜನ್ಯ ಸಹಸಿಕೊಳ್ಳಲು ಸಾಧ್ಯ. ಹಾಗಾಗಿ ಈ ಜಿಲ್ಲೆಯ ಕೋಚಿಮೂಲ್ ನಡೆದಿರುವಂತಹ ಅಕ್ರಮಗಳ ಬಗ್ಗೆ ಧ್ವನಿಯೆತ್ತಿದ್ದೇನೆ. ನಾವು ಯಾರ ಮೇಲೆಯೂ ಸಹ ವ್ಯಕ್ತಿಗತವಾಗಿ ಆಪಾದನೆ ಮಾಡುತ್ತಿಲ್ಲ, ರೈತರಿಗೆ ಮೋಸವಾಗಿರೋದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇನೆ, ಈಗಲೂ ಮಾಡುತ್ತೇನೆ ಮುಂದಿನ ಸಹ ಮಾಡುತ್ತೇನೆ ನನಗೆ ಎಷ್ಟೇ ತೊಂದರೆ ನೀಡಿದರು ಸಹ ಬಿಡುವುದಿಲ್ಲ ಎಂದು ಹೇಳಿದರು.