ಸಾರಾಂಶ
ದೇವತಾ ಉತ್ಸವಗಳನ್ನು ಗ್ರಾಮಸ್ಥರೆಲ್ಲರೂ ಒಗ್ಗೂಡಿ ನೆರವೇರಿಸಿದಾಗ ಶ್ರೀ ಏಳು ಮಂದಕ್ಕ ದೇವಿಯ ಕೃಪಾಶೀರ್ವಾದ ಎಲ್ಲರಿಗೂ ಲಭಿಸಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ದೇವತಾ ಉತ್ಸವಗಳನ್ನು ಗ್ರಾಮಸ್ಥರೆಲ್ಲರೂ ಒಗ್ಗೂಡಿ ನೆರವೇರಿಸಿದಾಗ ಶ್ರೀ ಏಳು ಮಂದಕ್ಕ ದೇವಿಯ ಕೃಪಾಶೀರ್ವಾದ ಎಲ್ಲರಿಗೂ ಲಭಿಸಲಿದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ತೊಗರಗುಂಟೆ ಶ್ರೀ ಏಳು ಮಂದಕ್ಕ (ಅಮ್ಮಾಜಮ್ಮ), ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವರುಗಳ 19ನೇ ವರ್ಷದ ಉತ್ಸವ ಅಂಗವಾಗಿ ನಡೆದ ಕಲ್ಲು ಗಾಲಿ ರಥೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಾದ ನೀಡಿ ಮಾತನಾಡಿದರು. ಎಲ್ಲರಿಗೂ ಒಳ್ಳೆಯದನ್ನು ಬಯಸುವ ಮುಗ್ಧ ಮನಸ್ಸಿನ ಆರಾಧನೆ ಭಗವಂತನಿಗೆ ಇಷ್ಟವಾಗಲಿದ್ದು, ಶ್ರೀ ಅಮ್ಮಾಜಮ್ಮ ದೇವಿ ಸಂತೃಪ್ತಳಾದರೆ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾಳೆ. ಶ್ರೀ ಅಮ್ಮಾಜಮ್ಮ ದೇವಿ ರಥೋತ್ಸವವು ಸರಾಗವಾಗಿ ಹರಿದ ರೀತಿ ಎಲ್ಲರ ಜೀವನದಲ್ಲಿರುವ ಕಷ್ಟ- ಕಾರ್ಪಣ್ಯಗಳು ದೂರವಾಗಿ ಆರೋಗ್ಯ ,ಐಶ್ವರ್ಯ, ಪ್ರಗತಿ ಎಲ್ಲರ ಜೀವನದಲ್ಲಿ ಮೂಡಲಿ. ದೈವಿಕ ಶಕ್ತಿ ಹೆಚ್ಚು ಹೊಂದಿರುವ ಶ್ರೀ ಅಮ್ಮಾಜಮ್ಮ ದೇವಿಯ ಕೃಪೆಯಿಂದ ನಾಡಿನ ಅನ್ನದಾತರು ಮತ್ತು ಜನಸಾಮಾನ್ಯರಿಗೆ ಸುಭೀಕ್ಷೆ ದೊರಕಲಿ ಎಂದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಕೃಷಿ ಅಧಿಕಾರಿ ಮನೋಹರ್ ಅನ್ನದಾಸೋಹ ಏರ್ಪಡಿಸಿದ್ದರು.
ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಹನುಮಂತ ರಾಯಪ್ಪ, ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ನಿರ್ದೇಶಕ ಟಿ.ಡಿ. ನರಸಿಂಹಮೂರ್ತಿ, ಖಜಾಂಚಿ ಡಿ. ನರಸಿಂಹಮೂರ್ತಿ, ಸಣ್ಣಹನುಮಂತರಾಯಪ್ಪ, ಉಗ್ರ ನರಸಿಂಹಯ್ಯ , ನಾಗರಾಜಪ್ಪ, ರವಿ ಗೌಡ, ಮೇಕೆರಹಳ್ಳಿ ಮಲ್ಲಪ್ಪ, ಸಿದ್ದನಹಳ್ಳಿ ಗುರುಲಿಂಗಪ್ಪ ,ದಿವಂಗತ ದೊಡ್ಡಯ್ಯ ಪತಿ ಪಾರ್ವತಮ್ಮ ಕುಟುಂಬಸ್ಥರು, ಮೇಲ್ಕುಂಟೆ ಶಿವಕುಮಾರ್, ಬಿಕೆ ರಮೇಶ್, ಶ್ರೀಧರ್, ಟಿ.ಎಚ್. ರಾಜಣ್ಣ, ಭೂತಜ್ಜಿರ ನರಸಿಂಹಣ್ಣ, ಪ್ರಧಾನ ಅರ್ಚಕ ಜೆ.ಎಸ್. ಹುಲಿಕುಂಟೆ ರಾವ್, ಕೋಲ್ ಕಾರ ನರಸಿಂಹಯ್ಯ ಸೇರಿದಂತೆ ಕುಂಚಿಟಿಗ, ಗೋಣಿನವರ ಗೋತ್ರದ ಅಣ್ಣ- ತಮ್ಮಂದಿರು ಹಾಗೂ ಜಿಲ್ಲೆಯ ನಾನಾ ಭಾಗದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.