ಸಾರಾಂಶ
ಬೆಲೇನಹಳ್ಳಿ ಸೋಮಶೇಖರ್ ಅಭಿಮತ । ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶಿವದಾರವನ್ನು ಧರಿಸಿದವರೆಲ್ಲರೂ ವೀರಶೈವ ಲಿಂಗಾಯಿತರೇ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬೆಲೇನಹಳ್ಳಿ ಸೋಮಶೇಖರ್ ಹೇಳಿದರು.
ಶನಿವಾರ ಪಟ್ಟಣದಲ್ಲಿ ನಡೆದ ಅಖಲಿ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ತಾಲೂಕು ಘಟಕ ಸ್ಥಾಪನೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ವೀರಶೈವ, ಲಿಂಗಾಯಿತರು ಎಂದು ಜಾತಿ, ಧರ್ಮಗಳನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಯಾರೂ ಕಿವಿಕೊಡಬಾರದು. ವೀರಶೈವವೂ ಒಂದೇ, ಲಿಂಗಾಯಿತರೂ ಒಂದೇ. ನಾವೆಲ್ಲರೂ ವೀರ ಶೈವಲಿಂಗಾಯಿತರೇ. ನಾವು ಸಂಘಟಿತರಾದರೆ ನಮ್ಮ ಜಾತಿ, ಧರ್ಮ ರಕ್ಷಿಸಿಕೊಳ್ಳಬಹುದು ಎಂದರು.ನಮ್ಮ ಸಮುದಾಯದ ಯಾರಿಗೇ ತೊಂದರೆ, ಅನ್ಯಾಯವಾದರೆ ಈ ಭಾಗದಲ್ಲಿ ಅಲ್ಪ ಸಂಖ್ಯಾತರಾದ ನಮಗೆ ಅಖಿಲ ಭಾರತ ವೀರಶೈವ ಮಹಾ ಸಭಾ ಬೆಂಬಲ ನೀಡುತ್ತದೆ. ನ್ಯಾಯ ಕೊಡಿಸುವವರೆಗೂ ಹೋರಾಟ ಮಾಡಲಿದೆ. ಪ್ರತೀ ವರ್ಷ ಮಹಾ ಸಭಾದಿಂದ ವೀರಶೈವ ಲಿಂಗಾಯಿತ ಕುಟುಂಬದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ₹2 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮಹಾಸಭಾದ ಸದಸ್ಯರಾಗುವುದರಿಂದ ಮಹಾಸಭಾ ನಿರ್ದೇಶಕರು, ಅಧ್ಯಕ್ಷರು ಚುನಾವಣೆ ಸಂದರ್ಭದಲ್ಲಿ ಮತದಾನ ಹಾಗೂ ಉಮೇದುವಾರಿಕೆ ಸಲ್ಲಿಸುವ ಹಕ್ಕು ದೊರಕುತ್ತದೆ. ಈಗಾಗಲೇ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ, ಕಡೂರು ತಾಲೂಕುಗಳಲ್ಲಿ ಘಟಕಗಳನ್ನು ಸ್ಥಾಪಿಸ ಲಾಗಿದೆ ಎಂದರು.ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಜಿಲ್ಲಾ ಮಹಾಸಭಾ ಕೋಶಾಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಕಾರ್ಯದರ್ಶಿ ಡಿ.ಬಾರ್ಗೇಶಪ್ಪ, ಸಮುದಾಯದ ಪ್ರಮುಖರಾದ ಉಷಾ ರವಿಶಂಕರ್ ಎಚ್.ಎನ್.ರವಿಶಂಕರ್, ವೈ.ಎನ್. ಇಂದು ಶೇಖರ್, ವೈ.ಎಸ್.ರವಿ, ಎನ್.ಎಂ.ಕಾರ್ತಿಕ್, ಜಯಣ್ಣ, ಎಂ.ಸಿ.ಗುರುಶಾಂತಪ್ಪ, ಶಿವಪ್ರಸಾದ್, ರಾಕೇಶ್ ಕೌದಿ, ದರ್ಶನ್ ಇದ್ದರು.