ಎಲ್ಲಾ ವೀರಶೈವ ಲಿಂಗಾಯತರು ಸದಸ್ಯತ್ವ ಪಡೆಯಿರಿ: ಈಶ್ವರ ಖಂಡ್ರೆ

| Published : Sep 01 2025, 01:03 AM IST

ಸಾರಾಂಶ

ಗೋಕುಲ ಬಡಾವಣೆಯಲ್ಲಿ ಭಾನುವಾರ ಮಹಾಸಭಾದ ಜಿಲ್ಲಾ ಯುವ ಘಟಕ ಅಧ್ಯಕ್ಷ ಡಾ.ಕೆ.ಎಲ್. ದರ್ಶನ್‌ ಅವರ ನಿವಾಸದಲ್ಲಿ ಸಭಾದ ಮನೆಮನೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವರು.

ಕನ್ನಡಪ್ರಭ ವಾರ್ತೆ ತುಮಕೂರು

ವೀರಶೈವ ಲಿಂಗಾಯತರು ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರನ್ನಾಗಿ ಮಾಡಿ, ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.ನಗರದ ಗೋಕುಲ ಬಡಾವಣೆಯಲ್ಲಿ ಭಾನುವಾರ ಮಹಾಸಭಾದ ಜಿಲ್ಲಾ ಯುವ ಘಟಕ ಅಧ್ಯಕ್ಷ ಡಾ.ಕೆ.ಎಲ್. ದರ್ಶನ್‌ ಅವರ ನಿವಾಸದಲ್ಲಿ ಸಭಾದ ಮನೆಮನೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವರು, ಹರಿದು ಹಂಚಿ ಹೋಗುತ್ತಿದ್ದ ವೀರಶೈವ ಲಿಂಗಾಯತರನ್ನುಒಂದೇ ವೇದಿಕೆಯಲ್ಲಿತಂದು ಸಂಘಟನೆ ಮಾಡಬೇಕು ಎಂದು ಹಾನಗಲ್‌ಕುಮಾರ ಸ್ವಾಮಿಯವರು ಶತಮಾನದ ಹಿಂದೆ ಸಭಾ ಸ್ಥಾಪನೆ ಮಾಡಿದರು.

ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳೂ ಸಭಾದ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಿದ್ದರು. ಇಂತಹ ಮಹನೀಯರು ಕಟ್ಟಿ ಬೆಳೆಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಸದೃಢವಾಗಿ ಸಂಘಟಿಸಬೇಕು ಎಂದು ಕರೆ ನೀಡಿದರು.ಸಂಘಟಿತರಾಗಿ ನಮ್ಮ ಸಮುದಾಯದ ಆಗು ಹೋಗುಗಳ ಚರ್ಚೆ ಮಾಡಿ, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸಬೇಕು.ಮಹಾಸಭಾದ ಮೂಲಕ ನಮ್ಮ ಸಮಾಜವನ್ನು ಸಂಘಟನೆ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆ ಶಕ್ತಿಯುತವಾಗಿ ಬೆಳವಣಿಗೆಯಾಗಲು ನೆರವಾಗುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ಹೇಳಿದರು.ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಉಪಾಧ್ಯಕ್ಷ ಶಶಿ ಹುಲಿಕುಂಟೇಮಠ್, ಗೀತಾ ರುದ್ರೇಶ್, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಯುವಘಟಕ ಜಿಲ್ಲಾಧ್ಯಕ್ಷ ಡಾ.ಕೆ.ಎಲ್.ದರ್ಶನ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಮಮತಾ, ಮಹಾಸಭಾದ ನಗರ ಅಧ್ಯಕ್ಷ ಉಮಾಮಹೇಶ್, ಕಾರ್ಯದರ್ಶಿ ತರಕಾರಿ ಮಹೇಶ್, ಉಪಾಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಕೆ.ಟಿ.ಮಂಜುನಾಥ್, ಶ್ರೀಧರ್, ಸತ್ಯಮಂಗಲ ಜಗದೀಶ್ ಮೊದಲಾದವರು ಭಾಗವಹಿಸಿದ್ದರು.ಕ್ಯಾಪ್ಶನ್.......ತುಮಕೂರಿನ ಗೋಕುಲ ಬಡಾವಣೆಯಲ್ಲಿ ಸಭಾದ ಮನೆ ಮನೆ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಈಶ್ವರ ಖಂಡ್ರೆ