ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ: ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾಗುವುದರ ಜೊತೆಗೆ ದೇಶದ ಉನ್ನತಿಗೂ ಕಾರಣವಾಗುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ:
ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾಗುವುದರ ಜೊತೆಗೆ ದೇಶದ ಉನ್ನತಿಗೂ ಕಾರಣವಾಗುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಯಂಕಂಚಿ ಗ್ರಾಮದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿ, ಪಂಚಾಯತ್ ರಾಜ್ ಇಂಡಿ ಉಪ ವಿಭಾಗ ಸಿಂದಗಿ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಗ್ರಾಮದ ವಾರ್ಡ್ 4ರಲ್ಲಿ ₹ 40 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಹಾಗೂ 2023-24 ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆಯಡಿಯಲ್ಲಿ ಜಟ್ಟಿಂಗರಾಯ ದೇವಸ್ಥಾನದ ಹತ್ತಿರ ₹ 4 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಈ ದೇಶ ಹಳ್ಳಿಗಳಿಂದ ಕೂಡಿದ ದೇಶ. ಮತ ಕ್ಷೇತ್ರದ ಪ್ರತಿ ಹಳ್ಳಿಗಳು ಎಲ್ಲ ಮೂಲಭೂತ ಸೌಕರ್ಯಗಳಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ರಸ್ತೆ, ಬೀದಿ ದೀಪ ಮತ್ತು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಅಳ್ಳಗಿ, ಜಗದೀಶ ಹೂನಳ್ಳಿ, ಶರಣು ತಳಗೇರಿ, ರಮೇಶ ತಳಗೇರಿ, ಕರೆಪ್ಪ ತಳಗೇರಿ, ಗುರಪ್ಪ ನಾಯ್ಕೋಡಿ, ವೈ.ಪಿ.ನಾಯ್ಕೋಡಿ, ಹಣಮಂತ ತೆನ್ನಳ್ಳಿ, ಶಂಕರಗೌಡ ಬಿರಾದಾರ, ನಿಂಗನಗೌಡ ಬಿರಾದಾರ, ಚಂದ್ರಕಾಂತ ಕುಲಕರ್ಣಿ, ರಾಜಾಸಾಬ ಡೋಣುರ, ಪರುಶುರಾಮ ನಾಯ್ಕೋಡಿ, ಪ್ರಕಾಶ ಮುಜಾವರ, ಷಣ್ಮುಖಯ್ಯ ಹಿರೇಮಠ, ಚೇತನಗೌಡ ಪಾಟೀಲ, ರುದ್ರಗೌಡ ಪಾಟೀಲ, ಯಮುನಪ್ಪ ಸುಂಬಡ, ಮಲ್ಲು ನಾಯ್ಕೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.