ಸಾರಾಂಶ
ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯ ಅಕ್ರಮ ಆಸ್ತಿ ಗಳಿಕೆ ಕಂಡುಬಂದಿತ್ತು. ಪರಿಶೀಲನಾ ಅವಧಿಯಲ್ಲಿ ಹರ್ಷ ಅವರು ೧.೪೦ ಕೋಟಿ ರು. ಆದಾಯ ಹೊಂದಿದ್ದು, ೧.೨೫ ಕೋಟಿ ರು. ಖರ್ಚು ಹಾಗೂ ೧೪.೫೦ ಕೋಟಿ ರು. ಉಳಿತಾಯ ಹೊಂದಿರುತ್ತಾರೆ. ಆದರೆ, ತನಿಖೆ ವೇಳೆ ೩.೩೩ ಕೋಟಿ ರು. ಆಸ್ತಿಯಲ್ಲಿ ೩.೧೯ ಕೋಟಿ ಅಂದರೆ, ಆದಾಯಕ್ಕಿಂತ ಶೇ.೨೨೭.೪೧೬ ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಎಚ್.ಆರ್.ಹರ್ಷ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಎಚ್.ಆರ್.ಹರ್ಷ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವ ಲೋಕಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುರುಳೀಧರ್ ತಳ್ಳೀಕೆರೆ ಅವರು ಇಲಾಖೆ ವಿಚಾರಣೆ ಬಾಕಿ ಇರಿಸಿ ಆದೇಶಿಸಿದ್ದಾರೆ.ಹರ್ಷ ಅವರು ತಮ್ಮ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಕೋಟ್ಯಂತರ ರು.ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿಬಂದಿತ್ತು. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಲೋಕಾಯುಕ್ತ ಅಧಿಕಾರಿಗಳು ಹರ್ಷ ಅವರ ನಿವಾಸ, ಕಚೇರಿ, ಮಾವನ ಮನೆ ಸೇರಿದಂತೆ ಇತರೆಡೆ ದಾಳಿ ನಡೆಸಿದ್ದರು.ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯ ಅಕ್ರಮ ಆಸ್ತಿ ಗಳಿಕೆ ಕಂಡುಬಂದಿತ್ತು. ಪರಿಶೀಲನಾ ಅವಧಿಯಲ್ಲಿ ಹರ್ಷ ಅವರು ೧.೪೦ ಕೋಟಿ ರು. ಆದಾಯ ಹೊಂದಿದ್ದು, ೧.೨೫ ಕೋಟಿ ರು. ಖರ್ಚು ಹಾಗೂ ೧೪.೫೦ ಕೋಟಿ ರು. ಉಳಿತಾಯ ಹೊಂದಿರುತ್ತಾರೆ. ಆದರೆ, ತನಿಖೆ ವೇಳೆ ೩.೩೩ ಕೋಟಿ ರು. ಆಸ್ತಿಯಲ್ಲಿ ೩.೧೯ ಕೋಟಿ ಅಂದರೆ, ಆದಾಯಕ್ಕಿಂತ ಶೇ.೨೨೭.೪೧೬ ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಧಿಕಾರಿ ಎಚ್.ಆರ್.ಹರ್ಷ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖೆ ವಿಚಾರಣೆ ಕಾಯ್ದಿರಿಸಲಾಗಿದೆ.ಅಗಸನಪುರ ಗ್ರಾಪಂ ಸಹಾಯಕನ ಮನೆ ಮೇಲೆ ಲೋಕಾಯುಕ್ತ ದಾಳಿಕನ್ನಡಪ್ರಭ ವಾರ್ತೆ ಮಂಡ್ಯಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಗ್ರಾಪಂ ಸಹಾಯಕನ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಮಳವಳ್ಳಿ ತಾಲೂಕು ಅಗಸನಪುರ ಗ್ರಾಪಂ ಸಹಾಯಕ ಕೃಷ್ಣೇಗೌಡ ದಾಳಿಗೊಳಗಾದವರು. ಕೃಷ್ಣೇಗೌಡರಿಗೆ ಸಂಬಂಧಿಸಿದ ಅಗಸನಪುರ, ತುರುಗನಹಳ್ಳಿ, ಚೀರನಹಳ್ಳಿ, ಕೊಡಿಯಾಲ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಸಮಯದಲ್ಲಿ ೨ ಲಕ್ಷ ರು. ನಗದು, ೫೦೦ ಗ್ರಾಂ ಚಿನ್ನ, ೨ ಕೆಜಿ ಬೆಳ್ಳಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು ನೇತೃತ್ವದಲ್ಲಿ ಆಸ್ತಿ ಮತ್ತಿತರ ದಾಖಲೆಗಳ ಪರಿಶೀಲನೆ ನಡೆಸಲಾಯಿತು.