ಸಾರಾಂಶ
ಚಿತ್ರದುರ್ಗ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರುಪಾಯಿ ಅವ್ಯವಹಾರಕ್ಕೆಸಂಬಂಧಿಸಿದಂತೆ ಮಾಜಿ ಕಾರ್ಯದರ್ಶಿ ಬಿ. ಚಿತ್ರಲಿಂಗಪ್ಪ, ಮಾಜಿ ಉಪಾಧ್ಯಕ್ಷ ಎಂ.ಎ. ಸೇತೂರಾಂ, ಮಾಜಿ ಖಜಾಂಚಿ ಅಜಿತ್ ಕುಮಾರ್ ಜೈನ್ ಮೇಲೆ ನಗರಠಾಣೆ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಮಾಜಿ ನಿರ್ದೇಶಕ ಡಿ.ವಿ.ಟಿ ಕರಿಯಪ್ಪ ನೀಡಿದ ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್ ನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರುಪಾಯಿ ಅವ್ಯವಹಾರಕ್ಕೆಸಂಬಂಧಿಸಿದಂತೆ ಮಾಜಿ ಕಾರ್ಯದರ್ಶಿ ಬಿ. ಚಿತ್ರಲಿಂಗಪ್ಪ, ಮಾಜಿ ಉಪಾಧ್ಯಕ್ಷ ಎಂ.ಎ. ಸೇತೂರಾಂ, ಮಾಜಿ ಖಜಾಂಚಿ ಅಜಿತ್ ಕುಮಾರ್ ಜೈನ್ ಮೇಲೆ ನಗರಠಾಣೆ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಮಾಜಿ ನಿರ್ದೇಶಕ ಡಿ.ವಿ.ಟಿ ಕರಿಯಪ್ಪ ನೀಡಿದ ದೂರಿನನ್ವಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.ಕಳೆದ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಎ.ಸೇತೂರಾಂ, ಕಾರ್ಯದರ್ಶಿ ಬಿ. ಚಿತ್ರಲಿಂಗಪ್ಪ, ಖಜಾಂಚಿ ಅಜಿತ್ ಕುಮಾರ್ ಜೈನ್ ಅವರು ಸಂಸ್ಥೆ ಬೈಲಾ ಉಲ್ಲಂಘಿಸಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಿದ್ದಾರೆ. ಸಂಸ್ಥೆಯ ಸದಸ್ಯರಿಗೆ ನೀಡಲು ಒಂದು ಸಾವಿರ ಸೂಟ್ ಕೇಸ್ ಖರೀದಿಸಲಾಗಿದ್ದು ಟೆಂಡರ್ ಕರೆಯಲಾಗಿಲ್ಲ ಎಂದು ಮಾಜಿ ನಿರ್ದೇಶಕ ಡಿ.ವಿ.ಟಿ ಕರಿಯಪ್ಪ ಆರೋಪಿಸಿದ್ದಾರೆಸಂಸ್ಥೆಯ 2020-2021 ಮತ್ತು 2021-22 ನೇ ಸಾಲಿನ ವಾರ್ಷಿಕ ಮಹಾ ಸಭೆ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಉಪ ನಿಬಂಧಕರ ಕಚೇರಿಗೆ ಲೆಕ್ಕ ಪತ್ರ ನೀಡಿ ಸಂಸ್ಥೆ ನವೀಕರಣ ಮಾಡಲಾಗಿದೆ ಎಂದು ವಿವಿಧ ಅಂಶಗಳನ್ನೊಳಗೊಂಡ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಆ ಆಗ್ರಹಿಸಿದ್ದರು.ದೂರು ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ಕಲಂ 409, 465,471,468, 420 ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.