ಆರ್ಥಿಕ ಮುಗ್ಗಟ್ಟು ಮರೆಮಾಚಲು ಕೇಂದ್ರದ ಮೇಲೆ ಆರೋಪ

| Published : Feb 06 2024, 01:30 AM IST

ಸಾರಾಂಶ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಟೆಂಡರ್ ಪ್ರಕ್ರಿಯೆ ಆಗುತ್ತಿಲ್ಲ, ಕಾಂಗ್ರೆಸ್ಸಿನವರಿಗೆ ಬರೀ ಗ್ಯಾರಂಟಿ ಕೊಡುವ ಅನಿವಾರ್ಯತೆ ಇದೆ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ: ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅದನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳ ಟೆಂಡರ್ ಪ್ರಕ್ರಿಯೆ ಆಗುತ್ತಿಲ್ಲ, ಕಾಂಗ್ರೆಸ್ಸಿನವರಿಗೆ ಬರೀ ಗ್ಯಾರಂಟಿ ಕೊಡುವ ಅನಿವಾರ್ಯತೆ ಇದೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಸಚಿವರೊಂದಿಗೆ ಮಾತನಾಡಬೇಕು. ಚುನಾವಣೆ ಬಂದಾಗ ಅಷ್ಟೇ ಪಕ್ಷ, ಆ ಬಳಿಕ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ಸಿನವರು ಎಲ್ಲಿ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ ಎಂಬ ಭಾವನೆಯಲ್ಲಿ ಮಾತನಾಡಲು ಸಿದ್ಧವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುತ್ತದೆ ಎಂಬ ಭಯ ಅವರಿಗಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಾರದ ವಿಷಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈ ಹಿಂದೆ ಯುಪಿಎ ಸರ್ಕಾರವಿದ್ದ ವೇಳೆ ಬಿಡುಗಡೆ ಆದ ಹಣ ಹಾಗೂ ಎನ್‌ಡಿಎ ಸರ್ಕಾರ ಬಂದ ನಂತರ ಬಿಡುಗಡೆ ಮಾಡಲಾದ ಹಣದ ಅಂಕಿ-ಅಂಶಗಳು ಕಣ್ಣಮುಂದೆ ಇವೆ. ಅವುಗಳನ್ನು ಇಟ್ಟುಕೊಂಡು ಚರ್ಚೆಗೆ ಬರಲು ರಾಜ್ಯ ಸರ್ಕಾರ ಸಿದ್ಧವಾಗಲಿ ಎಂದು ಸವಾಲ್ ಹಾಕಿದರು.

ಕೇಂದ್ರದ ಮಧ್ಯಂತರ ಬಜೆಟ್ ಚುನಾವಣೆ ಬಜೆಟ್ ಆಗಲಿದೆ ಎಂದು ಕಾಂಗ್ರೆಸ್ ತಿಳಿದಿತ್ತು, ಆದರೆ, ಅಭಿವೃದ್ಧಿ ಪೂರಕವಾಗಿದೆ. ಹೀಗಾಗಿ ಕೇಂದ್ರದ ಅಭಿವೃದ್ಧಿಯನ್ನು ಮರೆಮಾಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.ಹುಬ್ಬಳ್ಳಿ:

ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅದನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಲಾಗುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳ ಟೆಂಡರ್ ಪ್ರಕ್ರಿಯೆ ಆಗುತ್ತಿಲ್ಲ, ಕಾಂಗ್ರೆಸ್ಸಿನವರಿಗೆ ಬರೀ ಗ್ಯಾರಂಟಿ ಕೊಡುವ ಅನಿವಾರ್ಯತೆ ಇದೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಸಚಿವರೊಂದಿಗೆ ಮಾತನಾಡಬೇಕು. ಚುನಾವಣೆ ಬಂದಾಗ ಅಷ್ಟೇ ಪಕ್ಷ, ಆ ಬಳಿಕ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ಸಿನವರು ಎಲ್ಲಿ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ ಎಂಬ ಭಾವನೆಯಲ್ಲಿ ಮಾತನಾಡಲು ಸಿದ್ಧವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುತ್ತದೆ ಎಂಬ ಭಯ ಅವರಿಗಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಾರದ ವಿಷಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈ ಹಿಂದೆ ಯುಪಿಎ ಸರ್ಕಾರವಿದ್ದ ವೇಳೆ ಬಿಡುಗಡೆ ಆದ ಹಣ ಹಾಗೂ ಎನ್‌ಡಿಎ ಸರ್ಕಾರ ಬಂದ ನಂತರ ಬಿಡುಗಡೆ ಮಾಡಲಾದ ಹಣದ ಅಂಕಿ-ಅಂಶಗಳು ಕಣ್ಣಮುಂದೆ ಇವೆ. ಅವುಗಳನ್ನು ಇಟ್ಟುಕೊಂಡು ಚರ್ಚೆಗೆ ಬರಲು ರಾಜ್ಯ ಸರ್ಕಾರ ಸಿದ್ಧವಾಗಲಿ ಎಂದು ಸವಾಲ್ ಹಾಕಿದರು.

ಕೇಂದ್ರದ ಮಧ್ಯಂತರ ಬಜೆಟ್ ಚುನಾವಣೆ ಬಜೆಟ್ ಆಗಲಿದೆ ಎಂದು ಕಾಂಗ್ರೆಸ್ ತಿಳಿದಿತ್ತು, ಆದರೆ, ಅಭಿವೃದ್ಧಿ ಪೂರಕವಾಗಿದೆ. ಹೀಗಾಗಿ ಕೇಂದ್ರದ ಅಭಿವೃದ್ಧಿಯನ್ನು ಮರೆಮಾಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.