ರೈತಸಂಘದ ನಾರಾಯಣಗೌಡರ ಮೇಲಿನ ಆರೋಪ ಸತ್ಯಕ್ಕೆ ದೂರ: ಯಲುವಳ್ಳಿ ಪ್ರಭಾಕರ್ ಸ್ಪಷ್ಟನೆ

| Published : May 15 2025, 01:52 AM IST

ರೈತಸಂಘದ ನಾರಾಯಣಗೌಡರ ಮೇಲಿನ ಆರೋಪ ಸತ್ಯಕ್ಕೆ ದೂರ: ಯಲುವಳ್ಳಿ ಪ್ರಭಾಕರ್ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿ.ನಂಬರ್ ದುರಸ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ಸಾವಿರಾರು ಕೋಟಿ ರು. ಬೆಲೆ ಬಾಳುವ ನೂರಾರು ಎಕರೆ ಕಲ್ಲುಬಂಡೆಗಳು, ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ವಿರುದ್ಧ, ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ರೈತಸಂಘದ ಮೇಲೆ ಆರೋಪ ಮಾಡಿ ಆತ್ಮಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ದುರದೃಷ್ಟಕರ.

ಮುಳಬಾಗಿಲು: ರೈತಸಂಘದ ನಾರಾಯಣಗೌಡರ ಮೇಲೆ ದಲಿತ ಸಂಘರ್ಷ ಸಮಿತಿಯ ಮೆಕ್ಯಾನಿಕ್ ಶ್ರೀನಿವಾಸ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಸ್ಪಷ್ಟಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾರಾಯಣಗೌಡರು ಸ್ಥಳೀಯ ರೈತ ನಾಯಕರನ್ನು ಕಡೆಗಣಿಸಿದ್ದಾರೆ. ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮೆಕ್ಯಾನಿಕ್ ಶ್ರೀನಿವಾಸ್ ಆರೋಪಿಸಿ, ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು, ನಾವು ಸಿದ್ಧರಿದ್ದೇವೆ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು ಮಾತನಾಡಿ, ಪಿ.ನಂಬರ್ ದುರಸ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ದೇವರಾಯಸಮುದ್ರ ಕಂದಾಯ ವ್ಯಾಪ್ತಿಯ ಸಾವಿರಾರು ಕೋಟಿ ರು. ಬೆಲೆ ಬಾಳುವ ನೂರಾರು ಎಕರೆ ಕಲ್ಲುಬಂಡೆಗಳು, ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ವಿರುದ್ಧ, ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ರೈತಸಂಘದ ಮೇಲೆ ಆರೋಪ ಮಾಡಿ ಆತ್ಮಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

ನಾರಾಯಣಗೌಡರ ನೇತೃತ್ವದಲ್ಲಿ ಜಿಲ್ಲಾದ್ಯಂತ ಅದರಲ್ಲೂ ಗಡಿಭಾಗದ ಮುಳಬಾಗಿಲು ತಾಲೂಕಿನ ಟಿ.ಕುರುಬರಹಳ್ಳಿಯಲ್ಲಿ ಕುರಿಗಾಹಿಗಳಿಗೆ ೬೫ ಎಕರೆ ಗೋಮಾಳ ಉಳಿಸುವ ಜೊತೆಗೆ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಮಿ ಕಳೆದುಕೊಂಡಿದ್ದ ಚುಕ್ಕನಹಳ್ಳಿ, ಏತರನಹಳ್ಳಿ ರೈತರಿಗೆ ೧೦ ಕೋಟಿ ರು. ಪರಿಹಾರ, ನಕಲಿ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರಗಳ ಹಾವಳಿಯಿಂದ ನಷ್ಟವಾಗಿದ್ದ ರೈತರಿಗೆ ಪರಿಹಾರ ಕೊಡಿಸುವಲ್ಲಿ ರೈತಸಂಘ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಹೋರಾಟದ ಯಶಸ್ಸನ್ನು ಸಹಿಸದೆ ಈ ರೀತಿ ತಪ್ಪು ಸಂದೇಶ ಜನರಿಗೆ ನೀಡುವುದು ಹಿರಿಯ ಹೋರಾಟಗಾರರಾದ ಮೆಕ್ಯಾನಿಕ್ ಶ್ರೀನಿವಾಸ್ ಅವರಿಗೆ ಶೋಭೆಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಈ ಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಬಂಗಾರಿ ಮಂಜು, ಸುನಿಲ್‌ ಕುಮಾರ್, ಭಾಸ್ಕರ್, ಜುಬೇರ್ ಪಾಷ, ಅಂಬ್ಲಿಕಲ್ ಮಂಜುನಾಥ, ಧರ್ಮ, ನಾಗೇಶ್, ಗಿರೀಶ್, ಪುತ್ತೇರಿ ರಾಜು, ವೇಣು, ಕೇಶವ, ರಾಮಕೃಷ್ಣಪ್ಪ ಇದ್ದರು.