ಸಾರಾಂಶ
ಇತ್ತೀಚೆಗೆ ಜಮಖಂಡಿ ಅರ್ಬನ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯ ಮತದಾನ ಸಂದರ್ಭ ಅವ್ಯವಹಾರ ನಡೆದಿದೆ ಎಂದು ಸಂಗಮೇಶ ಹಲವಾಯಿ ದೂರಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇತ್ತೀಚೆಗೆ ಜಮಖಂಡಿ ಅರ್ಬನ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯ ಮತದಾನ ಸಂದರ್ಭ ಅವ್ಯವಹಾರ ನಡೆದಿದೆ ಎಂದು ಸಂಗಮೇಶ ಹಲವಾಯಿ ದೂರಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾಧಿಕಾರಿಗೆ ಅವ್ಯವಹಾರದ ಬಗ್ಗೆ ಗಮನಕ್ಕೆ ಬಂದಿದ್ದರೂ ಮೌನಕ್ಕೆ ಶರಣರಾಗಿರುವುದು ಸಂಶಯಕ್ಕೆಡೆ ಮಾಡಿದೆ. ಸ್ವತಂತ್ರ ಸಂಸ್ಥೆಯಾಗಿ ನಡೆಸಬೇಕಿರುವ ಇಂತಹ ಚುನಾವಣೆಯು ಪ್ರಜಾಪ್ರಭುತ್ವ ಎಲ್ಲಿಗೆ ಹೋಗುತ್ತಿದೆ ಎಂಬ ಅನುಮಾನ ಮಾಡುತ್ತಿದೆ ಎಂದು ವಿಷಾದಿಸಿದರು.
ಇತ್ತೀಚಿಗೆ ಸಹಕಾರಿ ಸಂಸ್ಥೆಗೆ ಬರುವವರ ಸಂಖ್ಯೆ ಪೈಪೋಟಿಯಿಂದ ಕೂಡುತ್ತಿದೆ. ಭ್ರಷ್ಟರು ಬರುತ್ತಿರುವುದು ನೋಡಿದರೆ ಸಹಕಾರಿ ಸಂಸ್ಥೆಗಳಲ್ಲಿರುವ ಸಂಪಾದನೆ ರಾಜಕೀಯದಷ್ಟೇ ಪ್ರಬಲವೆಂದು ಬಿಂಬಿತವಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆಗಳು ಅಗತ್ಯವಾಗಿದೆ ಎಂದರು.ಜಮಖಂಡಿ ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಶೇ.೭೪.೯೫ ರಷ್ಟು ಮತದಾನವಾಗಿದೆ. ೧೭ ಜನರ ಆಯ್ಕೆಗೆ ೫೧ ಮತಗಟ್ಟೆಗಳನ್ನು ಸ್ಥಾಪಿಸಿದ್ದರೂ ಮತದಾರರು ಮತದಾನ ಮಾಡುವಲ್ಲಿ ಹರಸಾಹಸ ಪಡುವಂತಾಗಿದೆ.
ಸಹಿ ಸಂಗ್ರಹ:ಮತದಾನ ವೇಳೆ ಅವ್ಯವಹಾರ ನಡೆದಿರುವ ಬಗ್ಗೆ ಶೇರುದಾರ ಸದಸ್ಯರಿಂದ ಸಹಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಮರು ಮತದಾನಕ್ಕೆ ನ್ಯಾಯಾಲಯ ಮೊರೆ ಹೋಗುವ ಸಂಬಂಧ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ಸಂಗಮೇಶ ಹಲವಾಯಿ ತಿಳಿಸಿದರು.