ರಾಜ್ಯದ ಅಭಿವೃದ್ಧಿಗೆ ಮೈತ್ರಿ ಅನಿವಾರ್ಯ: ಶಾಸಕ

| Published : Apr 04 2024, 01:00 AM IST

ರಾಜ್ಯದ ಅಭಿವೃದ್ಧಿಗೆ ಮೈತ್ರಿ ಅನಿವಾರ್ಯ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್‌ ಬಾಬುರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿ ಕೊಳ್ಳುವುದಾಗಿ ವೆಂಕಟಶಿವಾರೆಡ್ಡಿ ತಿಳಿಸಿದರು.

ಶ್ರೀನಿವಾಸಪುರ: ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಶಾಸಕ ವೆಂಕಟ ಶಿವಾರೆಡ್ಡಿ ಹೇಳಿದರು. ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೋ, ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವವೂ ಅಗತ್ಯವಾಗಿದೆ.ಇದಕ್ಕಾಗಿ ರಾಜ್ಯದಲ್ಲಿ ಎನ್ ಡಿಎ ಮೈತ್ರಿ ಕೂಟ ಕೂಡಿದೆ. ಕೋಲಾರ ಲೋಕಸಭಾ ಮೀಸಲು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ ಎಂದರು. ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್‌ ಬಾಬುರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿ ಕೊಳ್ಳುವುದಾಗಿ ತಿಳಿಸಿದರು. ಕಳೆದ ನಾಲ್ಕು ದಶಕಗಳಿಂದ ನನ್ನೊಂದಿಗೆ ರಾಜಕೀಯ ಪ್ರಯಾಣ ಮಾಡಿಕೊಂಡು ಬರುತ್ತಿರುವ ಅಲ್ಪಸಂಖ್ಯಾತ ಬಂಧುಗಳು ಮೈತ್ರಿ ರಾಜಕೀಯದಿಂದ ಯಾವುದೇ ಅನುಮಾನ ಅಥವಾ ಆತಂಕಕ್ಕೊಳಗಾಗುವುದು ಬೇಡ, ಎಲ್ಲಾ ಸಂದರ್ಭಗಳಲ್ಲೂ ನಾನು ನಿಮ್ಮೊಂದಿಗೆ ಇರುತ್ತೇನೆ, ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿ ಕೈಬಲಪಡಿಸೋಣ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ರೈತ ಮೊರ್ಚಾ ಮುಖಂಡ ಚಿರುವನಹಳ್ಳಿ ಲಕ್ಷ್ಮಣಗೌಡ, ರೋಣೂರು ಚಂದ್ರು, ನಲ್ಲಪಲ್ಲಿ ರೆಡ್ಡಪ್ಪ , ಗಾಯಿತ್ರಿ ಮುತ್ತಪ್ಪ, ಪಂಚಾಯಿತಿ ಸದಸ್ಯ ಅಮ್ಜಾದ್ ಖಾನ್, ಪೂಲು ಶಿವಾರೆಡ್ಡಿ, ಗಣೇಶ್, ಲಕ್ಷ್ಮೀಪುರ ಶೇಕ್ ಇಸ್ಮಾಯಿಲ್, ತೂಪಲ್ಲಿ ಮಧುಸೂಧನರೆಡ್ಡಿ, ಕೊಂಡಸಂದ್ರ ನಾಗರಾಜ್, ಬಾರ್ ನಾರಯಣಸ್ವಾಮಿ, ಕೊಂಡಸಂದ್ರ ಶ್ರೀನಿವಾಸರೆಡ್ಡಿ ಇದ್ದರು.