ಸಾರಾಂಶ
ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾರ್ವಜನಿಕವಾಗಿ ವಸತಿ ಸೌಲಭ್ಯವು ಸಿಗುತ್ತಿಲ್ಲ, ಅಕ್ಕ ಪಕ್ಕದವರಿಂದ ಕಿರುಕುಳ ಅನುಭವಿಸಬೇಕಾಗುತ್ತಿದೆ. ಹಾಗಾಗಿ ನಮಗೆ ಪ್ರತ್ಯೇಕವಾದ ಪ್ರದೇಶದಲ್ಲಿ ವಸತಿ ಸೌಲಭ್ಯನೀಡಬೇಕು, ಲಿಂಗತ್ವ ಅಲ್ಪಸಂಖ್ಯಾತರು ಉದ್ಯಮ ಶೀಲತೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರು. ಆರ್ಥಿಕ ನೆರವು ನೀಡಲಿ
ಕೋಲಾರ : ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ೨೦೦ ಕೋಟಿ ರು. ಹಣವನ್ನು ಮೀಸಲಿಡುವುದಾಗಿ ಈ ಹಿಂದೆ ಸರ್ಕಾರ ನೀಡಿದ ಭರವಸೆ ಈಡೇರಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ವಸತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸಂಘಟನೆಯ ರಾಜ್ಯ ಸಹ ಸಂಚಾಲಕಿ ಕಾಂತದೇವಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ೨ ವರ್ಷಗಳ ಹಿಂದೆ ತನ್ನ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ವಾರ್ಷಿಕವಾಗಿ ಹಣ ಮೀಸಲಿಡುವುದಾಗಿ ಘೋಷಿಸಿತ್ತು ಎಂದು ಹೇಳಿದರು.ಭರವಸೆ ಈಡೇರಿಸುವಲ್ಲಿ ವಿಫಲ
ಆದರೆ ಈವರೆಗೆ ಜಾರಿಗೆ ತರುವಲ್ಲಿ ವಿಫಲವಾಗಿದೆ, ಮಾರ್ಚ್ ಮಾಹೆ ಬಜೆಟ್‌ನಲ್ಲಿ ೨೦೦ ಕೋಟಿ ಮೀಸಲಿಡಬೇಕು, ಲಿಂಗತ್ವ ಪರಿವರ್ತನೆಯಾಗುವವರಿಗೆ ಶಸ್ತ್ರ ಚಿಕಿತ್ಸೆಗಳಿಗೆ ಆರ್ಥಿಕ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವವರು ಅವರಿಗೆ ಅರ್ಥಿಕ ನೆರವು ಉಂಟು ಮಾಡುವ ದಿಸೆಯಲ್ಲಿ ಬಜೆಟ್‌ನಲ್ಲಿ ಘೋಷಿಸಬೇಕು ಎಂದರು.ಪ್ರತ್ಯೇಕ ವಸತಿ ಪ್ರದೇಶ
ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾರ್ವಜನಿಕವಾಗಿ ವಸತಿ ಸೌಲಭ್ಯವು ಸಿಗುತ್ತಿಲ್ಲ, ಅಕ್ಕ ಪಕ್ಕದವರಿಂದ ಕಿರುಕುಳ ಅನುಭವಿಸಬೇಕಾಗುತ್ತಿದೆ. ಹಾಗಾಗಿ ನಮಗೆ ಪ್ರತ್ಯೇಕವಾದ ಪ್ರದೇಶದಲ್ಲಿ ವಸತಿ ಸೌಲಭ್ಯನೀಡಬೇಕು, ಲಿಂಗತ್ವ ಅಲ್ಪಸಂಖ್ಯಾತರು ಉದ್ಯಮ ಶೀಲತೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿ ಲಿಂಗತ್ವ ಅಲ್ಪಸಂಖ್ಯಾತರಿಗೆ ೨ ಲಕ್ಷ ರು. ಆರ್ಥಿಕ ನೆರವು ನೀಡಲು ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಒತ್ತಾಯಿಸಿದರು.ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ಪದಾಧಿಕಾರಿ ಮಲ್ಲಿಕಾ, ಸಾಧೀಕ್ ಪಾಷ, ಗೀತಾ ಇದ್ದರು.