ಸಾರಾಂಶ
ಪ್ರಸಕ್ತ ಬಜೆಟ್ ನಲ್ಲಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಬೇಕು, ಮುಳಗಡೆಯಾಗಿರುವ ಬಾಗಲಕೋಟೆ ನಗರದ ವ್ಯಾಪಾರ ಉತ್ತೇಜನಕ್ಕೆ 200 ಎಕರೆ ಮೀಸಲಿರಿದ್ದು, ವಿಶಾಲವಾದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹200 ಕೋಟಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ. ಮೇಟಿ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಬಜೆಟ್ ನಲ್ಲಿ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಬೇಕು, ಮುಳಗಡೆಯಾಗಿರುವ ಬಾಗಲಕೋಟೆ ನಗರದ ವ್ಯಾಪಾರ ಉತ್ತೇಜನಕ್ಕೆ 200 ಎಕರೆ ಮೀಸಲಿರಿದ್ದು, ವಿಶಾಲವಾದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹200 ಕೋಟಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ. ಮೇಟಿ ಮನವಿ ಮಾಡಿದ್ದಾರೆ.ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಎಚ್.ವೈ. ಮೇಟಿ ಪ್ರಮುಖ ಬೇಡಿಕೆಗಳ ಪಟ್ಟಿಮಾಡಿಕೊಂಡು ಪತ್ಯೇಕವಾಗಿ ಸಲ್ಲಿಸಿ ಮನವಿ ಮಾಡಿದರು. ಬಾಗಲಕೋಟೆ ನಗರಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಘಟಕ ಘೋಷಣೆ ಮಾಡಬೇಕು,
2015-2016 ಸಾಲಿನಲ್ಲಿ ಘೋಷಣೆ ಮಾಡಿದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುದಾನ ಮಂಜೂರು ಮಾಡಬೇಕು. ಮುಳಗಡೆಯಾಗಿರುವ ಬಾಗಲಕೋಟೆ ನಗರದ ವ್ಯಾಪಾರವು ಸಂಪೂರ್ಣ ಕುಸಿದು ಹೋಗಿದ್ದು, ವ್ಯಾಪಾರ ವಹಿವಾಟು ಉತ್ತೇಜನಗೊಳಿಸಲು ಬಿಡಿಟಿಎನಿಂದ ನವನಗರ ಯೂನಿಟ್ -3ರಲ್ಲಿ ಕಾಯ್ದಿರಿಸಿದ 200 ಎಕರೆ ಜಮೀನಿನಲ್ಲಿ ಬೃಹತ್ ವಾಣಿಜ್ಯ ಸಂಕಿರ್ಣ ನಿರ್ಮಿಸಲು ₹2 ಕೋಟಿ ಮೀಸಲಿಟ್ಟು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.