ಮಂಡ್ಯ ನಗರದಲ್ಲಿ ಹೊಸ ಬದಲಾವಣೆ ತರಲು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. 3ನೇ ವಾರ್ಡ್‌ನಲ್ಲಿ ಮಳೆ ಬಂದರೆ ಭಾರೀ ಸಮಸ್ಯೆಯಾಗುತ್ತಿತ್ತು. 100 ವರ್ಷಕ್ಕಾಗುವಷ್ಟು ಮಳೆ ಬಂದರೂ ಈಗ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರವನ್ನು ಮಾದರಿಯಾಗಿ ರೂಪಿಸಲು 200 ಕೋಟಿ ರು. ಅನುದಾನ ವಿನಿಯೋಗಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.ನಗರದ ಹೊಸಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಶ್ರೀಕಾಂತ್ (ಜೆಕೆ) ಮತ್ತು ಗೆಳೆಯರು ಆಯೋಜಿಸಿದ್ದ ಶಾಸಕರ ಹುಟ್ಟುಹಬ್ಬ ಪ್ರಯುಕ್ತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಕ್ಷೇತ್ರ ವ್ಯಾಪ್ತಿ ಸರ್ಕಾರಿ ಶಾಲಾ ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಮಂಡ್ಯ ನಗರದಲ್ಲಿ ಹೊಸ ಬದಲಾವಣೆ ತರಲು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. 3ನೇ ವಾರ್ಡ್‌ನಲ್ಲಿ ಮಳೆ ಬಂದರೆ ಭಾರೀ ಸಮಸ್ಯೆಯಾಗುತ್ತಿತ್ತು. 100 ವರ್ಷಕ್ಕಾಗುವಷ್ಟು ಮಳೆ ಬಂದರೂ ಈಗ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದರು.ಹೊಸಹಳ್ಳಿ ವೃತ್ತವನ್ನು ವಿದೇಶಿ ಮಾದರಿಯ ವೃತ್ತದ ರೀತಿ ಮಾಡಲು ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಆಟೋ ನಿಲ್ದಾಣದವರು ಬೋರ್ಡ್ ಹಾಕಿಕೊಂಡಿದ್ದಾರೆ. ಅದನ್ನು ತೆಗೆಯುವಂತೆ ಸೂಚನೆ ನೀಡಿದ್ದೇನೆ ಎಂದರು.
ಸಾರ್ವಜನಿಕ ಜೀವನದಲ್ಲಿರುವ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಜುಗರವಾಗುತ್ತದೆ. ಹೀಗಾಗಿ ಸಮಾಜಮುಖಿಯಾಗಿ ಹುಟ್ಟುಹಬ್ಬ ಆಚರಿಸುವರಿಗೆ ಮಾತ್ರ ಡೇಟ್ ಕೊಡುತ್ತೇನೆ. 1 ಕೋಟಿ ರು.ಖರ್ಚು ಮಾಡಿ ಅಭಿಮಾನಿಗಳು ಪ್ಲೇಕ್ಸ್, ಬಂಟಿಂಗ್ಸ್, ವಿವಿಧ ಸೇವಾ ಚಟುವಟಿಕೆ ಮಾಡಿದ್ದಾರೆ. ಅವರ ಪ್ರೀತಿಗೆ ಅಭಿಮಾನಕ್ಕೆ ಆಭಾರಿಯಾಗಿದ್ದೇನೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಶಾಸಕರಿಗೆ ಬೆಲ್ಲದಾರತಿಯೊಂದಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಶೋಭಾರಾಣಿ, ಮನ್ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಶ್ರೀಕಾಂತ್(ಜೆಕೆ), ನಗರಸಭಾ ಮಾಜಿ ಸದಸ್ಯರಾದ ಪವಿತ್ರ ಬೋರೇಗೌಡ, ಮಂಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್, ಬಿಇಒ ಮಹದೇವು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್ ಇತರರು ಇದ್ದರು. ಜೆಡಿಎಸ್ ಮುಖಂಡ ಬಿ.ಎಸ್.ತಿಲಕ್ ಕುಮಾರ್ ಹುಟ್ಟುಹಬ್ಬ ಪಕ್ಷಾತೀತ ಆಚರಣೆ
ಶ್ರೀರಂಗಪಟ್ಟಣ:ಯುವ ಮುಖಂಡ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಎಸ್.ತಿಲಕ್ ಕುಮಾರ್ ಹುಟ್ಟುಹಬ್ಬವನ್ನು ಪಕ್ಷಾತೀತವಾಗಿ ಅವರ ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ ಬೃಹತ್ ಗಾತ್ರದ ಹಾರ ಹಾಕುವ ಮೂಲಕ ಆಚರಿಸಿದರು.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿ ಬಿ.ಎಸ್.ತಿಲಕ್ ಕುಮಾರ್ ಅವರಿಗೆ ಶುಭ ಕೋರಿದರು.ನಂತರ ಬಿ.ಎಸ್.ತಿಲಕ್ ಕುಮಾರ್ ಮಾತನಾಡಿ, ಸ್ನೇಹಿತರು, ಹಿತೈಷಿಗಳು ಪಕ್ಷಾತೀತವಾಗಿ ಆಗಮಿಸಿ ನನ್ನ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಸಾರ್ವಜನಿಕ ಸೇವೆಗೆ ನನ್ನನ್ನು ಮತ್ತಷ್ಟು ತೊಡಗಿಸಿಕೊಳ್ಳುವಂತೆ ಮಾಡಿದೆ. ಅವರ ಈ ಪ್ರಿತಿ, ಸ್ನೇಹಕ್ಕೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದರು.
ಈ ವೇಳೆ ಜೆಡಿಎಸ್ ಮುಖಂಡ ದಯಾನಂದ್ ನೆಲಮನೆ, ಗಾಪಂ ಮಾಜಿ ಅಧ್ಯಕ್ಷ ಬಾಬುರಾಯನಕೊಪ್ಪಲು ಬಿ.ಸಿ.ಸತ್ಯನಾರಾಯಣ, ಎಲ್‌ಐಸಿ ಆರ್.ಶ್ರೀದರ್, ದರಸಗುಪ್ಪೆ ಸೊಸೈಟಿ ಸದಸ್ಯ ದಿಲೀಪ್, ಜೆಡಿಎಸ್ ಮುಖಂಡರಾದ ಸತೀಶ್, ಮಹಂತೇಶ್, ಕಾಂಗ್ರೆಸ್ ಮುಖಂಡರಾದ ರಾಮಚಂದ್ರು ಸೇರಿದಂತೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.