ಅರಸೀಕೆರೆ ಪುರಸಭೆಯಿಂದ ಬಡವರಿಗೆ ಸೈಟ್‌ ಹಂಚಿಕೆ

| Published : Dec 26 2024, 01:05 AM IST

ಸಾರಾಂಶ

ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಪಟ್ಟಣದ ದೇವಸ್ಥಾನ ರಸ್ತೆಯ ಶ್ರೀ ರಾಮ ಹಾಲ್ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಂಘದಲ್ಲಿ ಸದಸ್ಯರು ತೀರ ಕಷ್ಟದಲ್ಲಿದ್ದಾರೆ ಅವರಿಗೆ ಪುರಸಭೆಯ ಸಹಾಯಧನವನ್ನು ಕೊಡಿಸುತ್ತೇವೆ. ಸಂಘಕ್ಕೆ ಒಂದು ನಿವೇಶನವನ್ನು ಮಾಡಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಅದರಂತೆ ನಮ್ಮ ಲೇಔಟ್ ಒಳಗಡೆ ಸಿ ಎ ಸೈಟ್ ಎಂಬುದನ್ನು ಕೊಡಲು ಅವಕಾಶವಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಪಟ್ಟಣದ ದೇವಸ್ಥಾನ ರಸ್ತೆಯ ಶ್ರೀ ರಾಮ ಹಾಲ್ ಸಭಾಂಗಣದಲ್ಲಿ ನಡೆಸಲಾಯಿತು.

ಕ್ಯಾಲೆಂಡರ್ ಉದ್ಘಾಟನೆ ನಡೆಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್, ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘ ಉತ್ತಮವಾದ ಕೆಲಸವನ್ನು ನಿರ್ವಹಣೆ ಮಾಡಿದೆ. ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ದೊಡ್ಡ ದೊಡ್ಡ ಇಂಡಸ್ಟ್ರಿ ಉಳ್ಳವರು ಕೇವಲ ಹೆಸರು ಮಾಡಲು ಮಾತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ನೀವು ಕಷ್ಟಪಟ್ಟು ಮೇಲೆ ಬಂದು ಈ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಚಾರ. ಪುರಸಭಾ ಅಧ್ಯಕ್ಷನಾಗಿ ನಾನು ಹಾಗೂ ಶಾಸಕರು ಸೈಟ್ ಹಂಚಿಕೆಯನ್ನು ಮಾಡಬೇಕೆಂದು ತೀರ್ಮಾನಿಸಿದ್ದು ಅದು ಇನ್ನೇನು ಹತ್ತಿರಕ್ಕೆ ಬಂದಿದ್ದು ನಿಮ್ಮ ಸಂಘದಲ್ಲಿ ಅತಿ ಬಡವರು ಯಾರಾದರೂ ಇದ್ದರೆ ನಮಗೆ ಕೂಡಲೇ ತಿಳಿಸಿ ಅಂಥವರಿಗೆ ಪುರಸಭೆಯಿಂದ ಒಂದು ಸೈಟನ್ನು ಕೊಡುತ್ತೇವೆ. ಈ ಸಂಘದಲ್ಲಿ ಸದಸ್ಯರು ತೀರ ಕಷ್ಟದಲ್ಲಿದ್ದಾರೆ ಅವರಿಗೆ ಪುರಸಭೆಯದ ಸಹಾಯಧನವನ್ನು ಕೊಡಿಸುತ್ತೇವೆ. ಸಂಘಕ್ಕೆ ಒಂದು ನಿವೇಶನವನ್ನು ಮಾಡಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಅದರಂತೆ ನಮ್ಮ ಲೇಔಟ್ ಒಳಗಡೆ ಸಿ ಎ ಸೈಟ್ ಎಂಬುದನ್ನು ಕೊಡಲು ಅವಕಾಶವಿದ್ದು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಸ್ತಾವಿಕ ನುಡಿ ಮಾತನಾಡಿದ ಸಂಘದ ಉಪಾಧ್ಯಕ್ಷ ಬಾಬುರಾವ್ ನಮ್ಮ ಸಂಘವು ಪ್ರಾರಂಭವಾಗಿ ಸುಮಾರು 15 ವರ್ಷ ಕಳೆದಿದ್ದು ಮಧ್ಯದಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡು ಮತ್ತೆ ಎರಡು ವರ್ಷಗಳಿಂದ ಪುನಃ ಪ್ರಾರಂಭಗೊಂಡು ಸಂಘವನ್ನು ಪುನಃ ನೋಂದಣಿ ಮಾಡಿಸಿ ಸಂಘದ ಸದಸ್ಯರು ಆರ್ಥಿಕ ಚಟುವಟಿಕೆಗೆ ತಮ್ಮ ಕೈಲಾದ ಸಹಾಯವನ್ನು ನೀಡಿ ಈಗ ಸುಮಾರು ಬ್ಯಾಂಕಿನಲ್ಲಿ 80,000 ಹಣವನ್ನು ಠೇವಣಿ ಮಾಡಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಕಳೆದ ವರ್ಷ ವಾರ್ಷಿಕ ಮಹಾಸಭೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ನಮ್ಮ ಸಂಘದ ಕಾರ್ಯ ಚಟುವಟಿಕೆಗಳಿಗೆ ಒಂದು ಸಣ್ಣ ಕಚೇರಿಯನ್ನು ಬೇಲೂರು ಪಟ್ಟಣದಲ್ಲಿ ಎಲ್ಲಾದರೂ ನೀಡಬೇಕೆಂದು ಪುರಸಭೆಯ ಅಧ್ಯಕ್ಷರಲ್ಲಿ ಮನವಿ ಮಾಡಿದರು. ನಮ್ಮ ಸಂಘದ ಉತ್ತಮವಾದ ಕಾರ್ಯ ಚಟುವಟಿಕೆಯನ್ನು ನೋಡಿ ಇನ್ನು ಹೆಚ್ಚಿನ ಸದಸ್ಯರು ಸೇರ್ಪಡೆಗೊಳ್ಳಲು ಉತ್ಸುಕರಾಗಿದ್ದಾರೆ. ಈಗ ಸಂಘಕ್ಕೆ ಸೇರ್ಪಡೆಯಾದ ಸದಸ್ಯರಿಗೆ ಗುರುತಿನ ಚೀಟಿಯನ್ನು ನೀಡಿದ್ದೇವೆ ಎಂದು ತಿಳಿಸಿದರು.

ಪುರಸಭೆ ಸದಸ್ಯ ಜಗದೀಶ್ ಮಾತನಾಡಿ, ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘವು ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ವಿಶೇಷ ಸಂಗತಿಯಾಗಿದ್ದು, ಸಮಾಜದ ಕೆಲವು ಮುಖ್ಹ ಗಣ್ಯರು ಸಮಾಜ ಸೇವಕರು ತಮ್ಮ ಪ್ರಚಾರಕ್ಕಾಗಿ ಕ್ಯಾಲೆಂಡರ್‌ಗಳನ್ನು ಕೆಲವು ಸಮಯಗಳಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ಈ ಸಂಘವು ಒಂದು ವಿಭಿನ್ನ ಪ್ರಯತ್ನದೊಂದಿಗೆ ವಿಶೇಷವಾದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ. ಪುರಸಭೆ ವತಿಯಿಂದ ಏನಾದರೂ ಸಹಾಯ ಬೇಕು ಅಂದರೆ ಅಗತ್ಯವಾಗಿ ಮಾಡಿಕೊಡುತ್ತೇವೆ ಎಂದರು.

ಪುರಸಭೆ ಉಪಾಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಸಂಘದಲ್ಲಿ ಒಗ್ಗಟ್ಟು ಮುಖ್ಯ. ಇದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ನೀವುಗಳು ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಈ ಸಂಘದಲ್ಲಿ ನಿಮ್ಮ ಮುಂದಿನ ಯೋಜನೆ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ಈ ವೇಳೆ ಹೊಯ್ಸಳ ವಿದ್ಯುತ್ ರಿಪೇರಿದಾರರ ಕಾರ್ಮಿಕ ಸಂಘದ ಅಧ್ಯಕ್ಷ ಕೇಬಲ್ ವಿಜಯ ಕುಮಾರ್, ಹಾಸನದ ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನ ರಮೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಕನ್ನಯ್ಯ ಲಾಲ್, ರಮೇಶ್ ಚಂದ್, ಜಿಲ್ಲಾ ಎಲೆಕ್ಟ್ರಾನಿಕ್ ಸಂಘದ ಅಧ್ಯಕ್ಷ ಪವನ್ ಕುಮಾರ್, ಅಚ್ಯುತ್ ರಾವ್, ಸಂಘದ ಖಜಾಂಜಿ ಸುಬ್ರಹ್ಮಣ್ಯ, ಕಾರ್ಯದರ್ಶಿ ಸಮೀರ್, ಸುಧೀಂದ್ರ, ಸುರೇಶ್, ಮಧುಮಾಲತಿ ರುದ್ರೇಶ್ ಹಾಗೂ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಹಾಜರಿದ್ದರು.

=====

ಫೋಟೋ:

ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.