ಸಾರಾಂಶ
ಧಾರವಾಡ:
ಬಿರು ಬಿಸಿಲಿನ ಮಧ್ಯೆಯೂ ಲೋಕಸಭಾ ಚುನಾವಣೆಯ ಪ್ರಚಾರ ಕ್ಷೇತ್ರದಲ್ಲಿ ಜೋರಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಆಯೋಗದ ನಿಯಮಗಳ ಅನ್ವಯ ಚಿಹ್ನೆಗಳನ್ನು ಸಹ ಹಂಚಿಕೆ ಮಾಡಿದ್ದಾರೆ.ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಕಮಲ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಕೈ ಚಿಹ್ನೆ ನೀಡಲಾಗಿದೆ. ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ನಾಕಿ ಭಾರತೀಯ ಏಕತಾ ಪಾರ್ಟಿಯ ಅಭ್ಯರ್ಥಿ ಜಾವೀದ್ ಆಹ್ಮದ್ ಬೆಳಗಾವಂಕರಗೆ ಸೀಟಿ (ವ್ಹಿಸಿಲ್), ಪ್ರಹಾರ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಟಾಕಪ್ಪ ಯಲ್ಲಪ್ಪ ಕಲಾಲಗೆ ಕಬ್ಬು ರೈತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ನಾಗರಾಜ ಕರೆಣ್ಣವರಗೆ ಬ್ಯಾಟರಿ ಟಾರ್ಚ್, ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಬುಗಡಿ ಬಸವಲಿಂಗಪ್ಪ ಈರಪ್ಪ ಅವರಿಗೆ ಆಟೋರಿಕ್ಷಾ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ಮಹ್ಮಮದ್ ಇಸ್ಮಾಯಿಲ್ ಮುಕ್ತಿ ಅವರಿಗೆ ಬ್ಯಾಟ್, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದ ಅಭ್ಯರ್ಥಿ ವಿನೋದ ದಶರಥ ಘೋಡಕೆ ಅವರಿಗೆ ಹಡಗು, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಪುಲೆ) ಪಕ್ಷದ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಎಚ್, ಅವರಿಗೆ ಪೆಟ್ಟಿಗೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಅವರಿಗೆ ಗಾಜಿನ ಲೋಟ, ಟಿಪು ಸುಲ್ತಾನ ಪಾರ್ಟಿಯ ಅಭ್ಯರ್ಥಿ ಬಂಕಾಪೂರ ಶೌಖತಅಲಿ ಅವರಿಗೆ ಇಟ್ಟಿಗೆಯ ಚಿಹ್ನೆ ನೀಡಲಾಗಿದೆ.
ಇನ್ನು, ಪಕ್ಷೇತರ ಅಭ್ಯರ್ಥಿಗಳಾದ ಡಾ. ಗುರಪ್ಪ ಇಮ್ರಾಪೂರಗೆ ಹಲಸಿನ ಹಣ್ಣು, ಪ್ರವೀಣ್ ಹತ್ತೆನವರಗೆ ಸಿತಾರ್, ಬಾಳನಗೌಡ್ರ ಮಲ್ಲಿಕಾರ್ಜುನಗೌಡರಿಗೆ ಟಿಲ್ಲರ್, ರಾಜು ಅನಂತಸಾ ನಾಯಕವಾಡಿ ಅವರಿಗೆ ಕೈಗಾಡಿ, ಶಕೀಲ್ ಅಹ್ಮದ ಡಿ ಮುಲ್ಲಾ ಅವರಿಗೆ ಹಣ್ಣುಗಳು ಇರುವ ಬ್ಯಾಸ್ಕೆಟ್, ಎಸ್.ಎಸ್. ಪಾಟಿಲ್ ಅವರಿಗೆ ಏಳು ಕಿರಣಗಳು ಇರುವ ಪೆನ್ನಿನ ನಿಬ್ ಚಿಹ್ನೆ ಹಂಚಲಾಗಿದ್ದು, ಈ ಚಿಹ್ನೆ ಬಳಸಿಕೊಂಡು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))