ನಿರಂತರ ಸೇವೆಗೆಗಾಗಿ ಮತ್ತೊಮ್ಮೆ ಅವಕಾಶ ಕಲ್ಪಿಸಿ

| Published : Apr 25 2024, 01:08 AM IST

ನಿರಂತರ ಸೇವೆಗೆಗಾಗಿ ಮತ್ತೊಮ್ಮೆ ಅವಕಾಶ ಕಲ್ಪಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದ ಯೋಜನೆಗಳಾದ ಕಿಸಾನ್‌ ಸಮ್ಮಾನ ಯೋಜನೆಯಿಂದ ರೈತರ ಖಾತೆಗೆ ನೇರವಾಗಿ ₹6 ಸಾವಿರಗಳ ಜಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಮನದಲ್ಲಿಟ್ಟು ಮತ್ತೊಮ್ಮೆ ಅವಕಾಶ ಕಲ್ಪಿಸಿ ಎಂದು ಚಿಕ್ಕೋಡಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿಕೇಂದ್ರದ ಯೋಜನೆಗಳಾದ ಕಿಸಾನ್‌ ಸಮ್ಮಾನ ಯೋಜನೆಯಿಂದ ರೈತರ ಖಾತೆಗೆ ನೇರವಾಗಿ ₹6 ಸಾವಿರಗಳ ಜಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಮನದಲ್ಲಿಟ್ಟು ಮತ್ತೊಮ್ಮೆ ಅವಕಾಶ ಕಲ್ಪಿಸಿ ಎಂದು ಚಿಕ್ಕೋಡಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದರು.

ಸದಲಗಾ ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ಮೋದಿಯವರು 3ನೇ ಬಾರಿಗೆ ಪ್ರಧಾನಯಾಗಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಮುಂದಿನ 5 ವರ್ಷದಲ್ಲಿ ನಿರಂತರ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ನಮಗಾಗಿ ಅಲ್ಲ, ನಿಮಗಾಗಿ ಅಲ್ಲ ಈ ದೇಶದ ಮಕ್ಕಳ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು, ಎಲ್ಲರೂ ಬಿಜೆಪಿಗೆ ಮತ ಚಲಾಯಿಸಬೇಕು. ಕಲಿಯುಗದ ಅಧರ್ಮವನ್ನು ಅಂತ್ಯಗೊಳಿಸಲು ಶ್ರೀ ಕೃಷ್ಣನ ವಾಣಿಯಂತೆ ಅವತಾರ ಪುರುಷ ಶ್ರೀರಾಮಚಂದ್ರನ ರೂಪದಲ್ಲಿ ನರೇಂದ್ರ ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದು, ಮೋದಿ ಆಡಳಿತಕ್ಕೆ ಬೆಂಬಲ ಸೂಚಿಸುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಬೆಳಗಾವಿ ಮಾಜಿ ಶಾಸಕ ಹಾಗೂ ಚಿಕ್ಕೋಡಿ ಲೋಕಸಭೆ ಚುನಾವಣೆ ಉಸ್ತುವಾರಿ ಸಂಜಯ ಪಾಟೀಲ ಮಾತನಾಡಿ, ದೇಶದಲ್ಲಿ ಹಿಂದುತ್ವ, ಸನಾತನ ಸಂಸ್ಕೃತಿ ಉಳಿವಿಗಾಗಿ ಪ್ರತಿಯೊಬ್ಬರು ಬಿಜೆಪಿ ಬೆಂಬಲಿಸಬೇಕು. ಜೊತೆಗೆ ದೇಶದ ಸುರಕ್ಷತೆ ಹಾಗೂ ಸಮೃದ್ಧಿಗೆ ಬಿಜೆಪಿ ಆಯ್ಕೆ ನಿಮ್ಮದಾಗಲಿ. ರಾಜ್ಯದಲ್ಲಿ ಬಿಜೆಪಿ ಗೆದ್ದರೇ ಭಾರತ ಮಾತಾಕಿ ಜೈ ಎನ್ನುತ್ತದೆ. ಆದರೆ, ಕಾಂಗ್ರೆಸ್ ಪಾಕಿಸ್ತಾನ ಜಿಂದಾಬಾದ ಎನ್ನುವ ಮನಸ್ಥಿತಿಯಲ್ಲಿದೆ ಎಂದು ದೂರಿದರು.

ದೇಶವೇ ತನ್ನ ಪರಿವಾರ ಎಂದುಕೊಂಡವರು ಮೋದಿಜೀ, ಅವರ ಒಂದು ಫೋನ್ ಕರೆಗೆ 2 ದೇಶಗಳ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಶಕ್ತಿ ಇದೆ. ಸಮಾನ ನಾಗರಿಕ, ಪಿಒಕೆ ನಮ್ಮದಾಗಿಸಬೇಕಾದರೇ ಮೋದಿಯವರಿಗೆ ಮತ ನೀಡಿ ಎಂದು ಜೊಲ್ಲೆಯವರ ಪರವಾಗಿ ಮತಯಾಚಿಸಿದರು.

ಚಿಕ್ಕೋಡಿ ಲೋಕಸಭೆ ಪ್ರಭಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್ ಪೂಜಾರ ಮಾತನಾಡಿ, ನರೇಂದ್ರ ಮೋದಿಯವರು ಮತ್ತೋಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ತಿಳಿಸಿದರು.

ನ್ಯಾಯವಾದಿ ಎಂ.ಬಿ.ಝಿರಲೆ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಜ್ಜೆ ಇಡುತ್ತಿರುವದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡದರೇ ಅದು ಮೋದಿಯವರಿಗೆ ನೀಡಿದಂತೆ ಎಂದರು.

ಸತೀಶ ಅಪ್ಪಾಜಿಗೋಳ, ಬಾಳಾಸಾಹೇಬ ವಡ್ಡರ, ಚಂದ್ರಶೇಖರ ಕವಟಗಿ, ರಮೇಶ ದೇಶಪಾಂಡೆ, ಜ್ಯೋತಿ ಚಿಂಚಣಿಕರ, ಡಾ.ರಾಜೇಶ ನೇರ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಜಯಕುಮಾರ ಖೋತ, ಶಾಂಭವಿ ಅಶ್ವಥಪುರ, ಸಂಜಯ ಪಾಟೀಲ, ಅಪ್ಪಾಸಾಹೇಬ ಚೌಗಲಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸೈಕಲ್ ರ್‍ಯಾಲಿಗೆ ಚಾಲನೆ: ಚಿಕ್ಕೋಡಿ ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಮತಕ್ಷೇತ್ರದ ಸದಲಗಾ ಪಟ್ಟಣದಲ್ಲಿ ಸೈಕಲ್ ರ್‍ಯಾಲಿಗೆ ಚಾಲನೆ ನೀಡಿದರು. ಸದಲಗಾ ಪಟ್ಟಣದ ಹನುಮಾನ ಮಂದಿರದಿಂದ ಪುರಸಭೆ ಮೂಲಕ ಗಾಂಧಿ ಚೌಕ್‌, ಹಳೆ ಬಸ್ ನಿಲ್ದಾಣ, ಮಡ್ಡಿ ಗಲ್ಲಿ, ಹೊಸ್ ಬಸ್ ನಿಲ್ದಾಣ, ಅರಣ್ಯಸಿದ್ದ ಮಂದಿರವರೆಗೆ ಸೈಕಲ್ ರ್‍ಯಾಲಿ ಮಾಡಿದರು. ಪುರಸಭೆ ಸದಸ್ಯರು ಹಾಗೂ ನೂರಾರು ಯುವಕರು ಜೊಲ್ಲೆಯವರಿಗೆ ಸಾಥ್ ನೀಡಿದರು.

ಕೇಂದ್ರದ ಮುಖಂಡರು ನನಗೆ ಚಿಕ್ಕೋಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು 2ನೇ ಬಾರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ಸಲವು ಹಿಂದಿನ ಲೀಡ್ ಹೆಚ್ಚಿಗೆಯಾಗಲಿದೆ.

-ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಅಭ್ಯರ್ಥಿ.ಕೇವಲ ಒಂದೇ ಮತದಿಂದ ಸೋಲು ಕಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋಲಿನಿಂದ ದೇಶದ ಅಭಿವೃದ್ಧಿ ವೇಗ ನಿಂತು ಹೋಗಿತ್ತು. ಆ ತಪ್ಪು ಯಾರೂ ಮಾಡಬಾರದು. ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕುಚಲಾಯಿಸಿ ಅಣ್ಣಾ ಸಾಹೇಬ ಜೊಲ್ಲೆ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆಗೊಳಿಸಬೇಕು.

- ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ.