ಸಾರಾಂಶ
ದತ್ತಪೀಠದಲ್ಲಿ ಮುಸ್ಲಿಮರಿಗೆ ಉರುಸ್ ಮಾಡಲು, ನಮಾಜ್ ಮಾಡಲು ಅವಕಾಶ ನೀಡಿದರೆ ಅದು ಸೌಹಾರ್ದವಾಗುವುದಿಲ್ಲ. ಬದಲಿಗೆ ಸಂಘರ್ಷವಾಗುತ್ತದೆ. ಇದರ ಬದಲಾಗಿ ಮುಸ್ಲಿಮರ ಮಸೀದಿ ಹಾಗೂ ಕ್ರಿಶ್ಚಿಯನರ ಚರ್ಚ್ ಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ಮಾಡಲು ಅವಕಾಶ ನೀಡಿದರೆ ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಮುತಾಲಿಕ್ ಆಗ್ರಹ
ಚಿಕ್ಕಮಗಳೂರು: ದತ್ತಪೀಠದಲ್ಲಿ ಮುಸ್ಲಿಮರಿಗೆ ಉರುಸ್ ಮಾಡಲು, ನಮಾಜ್ ಮಾಡಲು ಅವಕಾಶ ನೀಡಿದರೆ ಅದು ಸೌಹಾರ್ದವಾಗುವುದಿಲ್ಲ. ಬದಲಿಗೆ ಸಂಘರ್ಷವಾಗುತ್ತದೆ. ಇದರ ಬದಲಾಗಿ ಮುಸ್ಲಿಮರ ಮಸೀದಿ ಹಾಗೂ ಕ್ರಿಶ್ಚಿಯನರ ಚರ್ಚ್ ಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನ ಮಾಡಲು ಅವಕಾಶ ನೀಡಿದರೆ ಸೌಹಾರ್ಧಕ್ಕೆ ಅರ್ಥ ಬರುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.ದತ್ತಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಹಿಂದುಗಳ ಮೇಲೆ ಸೌಹಾರ್ದದ ಕೈ ಇಡುವ ಪ್ರಕ್ರಿಯೆ ಇನ್ನು ಮುಂದೆ ನಡೆಯುವುದಿಲ್ಲ. ಪ್ರತಿವಾರ ದತ್ತಪೀಠದಲ್ಲಿ ನಡೆಯುವ ನಮಾಜನ್ನು ನಾಗೇನಹಳ್ಳಿ ಯಲ್ಲಿರುವ ದರ್ಗಾಕ್ಕೆ ಶಿಫ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ದತ್ತಪೀಠದಲ್ಲಿ ತುಳಸಿ ಕಟ್ಟೆ, ಹೋಮಕುಂಡ, ಧ್ವಜಸ್ತಂಬ ಹೀಗೆ ಅನೇಕ ಕುರುಹುಗಳಿದ್ದವು. ಆದರೆ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ನೀತಿಯಿಂದಾಗಿ ಇಲ್ಲಿನ ಮುಸ್ಲಿಮರು ಹಿಂದೂ ಕುರುಹುಗಳನ್ನು ನಾಶ ಮಾಡಿರುವುದು ಸತ್ಯ. ಇದಲ್ಲದೆ ದತ್ತಪೀಠ ಭಾಗದಲ್ಲಿ ಮಸೀದಿ ಕಟ್ಟಿ, ಮೈಕ್ ಹಾಕಿ, ಗೋಮಾಂಸ ಭಕ್ಷಣೆ ಮಾಡುತ್ತಿದ್ದರು. ಹೋರಾಟದ ಮೂಲಕವೇ ಈ ಎಲ್ಲವನ್ನು ನಿಲ್ಲಿಸಿದ್ದೇವೆ. ಮುಸ್ಲಿಮರ ಮೂಲ ಮಾನಸಿಕತೆಯೇ ಅತಿಕ್ರಮಣ. ದೇಶದ ಎಲ್ಲೆಡೆಯೂ ಹಿಂದುಗಳ ಧಾರ್ಮಿಕ ಕ್ಷೇತ್ರಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.