ರೈತರಿಗೆ ಸಾಲದ ಬಡ್ಡಿ ಕಟ್ಟಲು ಕಾಲಾವಕಾಶ ಕಲ್ಪಿಸಿಕೊಡಿ

| Published : Apr 11 2024, 12:45 AM IST

ರೈತರಿಗೆ ಸಾಲದ ಬಡ್ಡಿ ಕಟ್ಟಲು ಕಾಲಾವಕಾಶ ಕಲ್ಪಿಸಿಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ತಹಸೀಲ್ದಾರ್ ಕೂಡಲೇ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದು ರೈತರಿಗೆ ಕೊಟ್ಟಿರುವ ಟ್ರ್ಯಾಕ್ಟರ್ ಸಾಲ ಹಾಗೂ ಚಿನ್ನಾಭರಣ ಸಾಲದ ಬಗ್ಗೆ ಬರಗಾಲ ಮುಗಿಯುವವರೆಗೂ ರೈತರಿಂದ ಬಡ್ಡಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಆತಂಕ ವ್ಯಕ್ತಪಡಿಸಿದ್ದರು.

ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂದೆ ರೈತ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ಈ ವರ್ಷ ಬರಗಾಲ ತೀವ್ರವಾಗಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಕೃಷಿ ಬೆಳೆಗಾಗಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದು, ಈಗ ಒಡವೆ ಬಡ್ಡಿ ಕಟ್ಟದಿದ್ದರೆ ನಿಮ್ಮ ಒಡವೆ ಮಾರಾಟ ಮಾಡುತ್ತೇವೆ ಎಂದು ಫೈನಾನ್ಸ್ ಅಧಿಕಾರಿಗಳು ಕರೆ ಮಾಡುತ್ತಿದ್ದಾರೆ. ಆದ್ದರಿಂದ ತಹಸೀಲ್ದಾರ್ ಶರತ್ ಕುಮಾರ್ ಅವರು ಫೈನಾನ್ಸ್ ಕಂಪನಿಗಳ ಜೊತೆ ಮಾತನಾಡಿ, ರೈತರಿಗೆ ಕಾಲಾವಕಾಶ ಕೊಡಿಸಬೇಕಿದೆ. ಜೊತೆಗೆ ಐತಿಹಾಸಿಕ ದನಗಳ ಜಾತ್ರೆ ಹಲವು ವರ್ಷಗಳಿಂದ ನಿಲ್ಲಿಸಲಾಗಿದ್ದು, ಕೂಡಲೇ ತಾಲೂಕು ಆಡಳಿತ ರಾಸುಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಬರಗಾಲ ಹೆಚ್ಚಾಗಿರುವುದರಿಂದ ರೈತರು ಬೋರ್ವೆಲ್‌ಗಳಿಗೆ ಹೆಚ್ಚುವರಿ ಪೈಪುಗಳನ್ನು ಬಿಡುವುದು ಅನಿವಾರ್ಯ. ಹೆಚ್ಚುವರಿ ಹಣ ವಸೂಲಿ ಪ್ರಕ್ರಿಯೆಯಿಂದ ರೈತರಿಗೆ ಸಾಕಷ್ಟು ಮೋಸವಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಬೋರ್ ವೇಲ್ ಪ್ರಕ್ರಿಯೆಗೆ ನಿಗದಿತ ದರ ಪ್ರಕಟಿಸಿ ರೈತರು ಮೋಸ ಹೋಗುವುದನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.ಈ ವೇಳೆ ರೈತ ಮುಖಂಡರಾದ ಶಿವಲಿಂಗಣ್ಣ, ಬುಡನ್ ಸಾಬು, ರಂಗಪ್ಪ, ರವಿಕುಮಾರ್, ಸಲೀಮ್ ಉಲ್ಲಾ, ಚಂದ್ರಾಯಪ್ಪ, ನಾರಾಯಣಪ್ಪ, ಗಿರೀಶ್, ಚಿಕ್ಕಣ್ಣ ಸೇರಿ ಇತರರು ಭಾಗವಹಿಸಿದ್ದರು.

ಫೋಟೊ 8ಮಾಗಡಿ1 :

ಮಾಗಡಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂದೆ ರೈತ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.