ಅಳ್ನಾವರ:

ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದವು.

ಪಟ್ಟಣದ ಕೆರೆ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ನಮಗೆ ಒದಗಿಸಲಾದ ಹಕ್ಕು ಮತ್ತು ಕರ್ತವ್ಯ ಅರಿತು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಅಳ್ನಾವರ ತಾಲೂಕು ಕೇಂದ್ರವಾಗಿ ಬದಲಾವಣೆಯಾದ ನಂತರ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪಟ್ಟಣಕ್ಕೆ ಕಾಳಿ ನದಿಯಿಂದ ನೀರು ಪೂರೈಕೆ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿದೆ. ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಿಸಲು ಎಲ್ಲ ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಪರಿಸರ ರಕ್ಷಿಸುವ ಜತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಕಡೆಗೆ ಪ್ರತಿಯೊಬ್ಬರು ಗಮನ ನೀಡುವುದು ಅಗತ್ಯವಿದ್ದು ಶೈಕ್ಷಣಿಕ ಮತ್ತು ಆರ್ಥಿಕವಾಗಿ ತಾಲೂಕು ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಲು ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು.


ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತಾಪಂ ಇಒ ಪ್ರಶಾಂತ ತುರಕಾಣಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ವಿನಾಯಕ ಕುರುಬರ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ತಾಪಂ ಎಡಿ ಸಂತೋಷ ತುರಕಾಣಿ, ಕಸಾಪ ಅಧ್ಯಕ್ಷ ಗುರುರಾಜ ಸಬನೀಸ, ಭೂ ನ್ಯಾಯ ಮಂಡಳಿ ಸದಸ್ಯ ಪರಶುರಾಮ ಬೇಕನೇಕರ ಇದ್ದರು. ಮಾಂತೇಶ ಬೆಂತೂರ ಸ್ವಾಗತಿಸಿದರು. ಪುಂಡಲೀಕ ಪಾರ್ಧಿ ನಿರೂಪಿಸಿದರು.ಪ್ರಭಯ್ಯ ವಿರಕ್ತಮಠ ವಂದಿಸಿದರು.ವಿವಿಧೆಡೆ ಆಚರಣೆ:ಅಳ್ನಾವರದ ಬಸ್ ನಿಲ್ದಾಣದಲ್ಲಿ ಸುರೇಶ ಕಲ್ಲವಡ್ಡರ, ಆಟೋ ನಿಲ್ದಾಣದಲ್ಲಿ ರಾಮದಾಸ ಕೋಲೆಕಾರ, ಕಡಬಗಟ್ಟಿ ಗ್ರಾಪಂದಲ್ಲಿ ಪಿಡಿಒ ಆನಂದ ಪಾಟೀಲ, ಅಳ್ನಾವರ ತಾಪಂದಲ್ಲಿ ಇಒ ಪ್ರಶಾಂತ ತುರಕಾಣಿ, ಬೆಣಚಿ ಗ್ರಾಪಂದಲ್ಲಿ ಪ್ರಕಾಶ ಹಾಲಮತ, ಮಿಲ್ಲತ್ ಬ್ಯಾಂಕ್‌ನಲ್ಲಿ ಅಧ್ಯಕ್ಷ ಎಂ.ಕೆ. ಬಾಗಬಾನ, ಅಂಬೇಡ್ಕರ್‌ ಭವನದಲ್ಲಿ ಶಾಹು ಶಿಂಧೆ ಧ್ವಜಾರೋಹಣ ನೆರವೇರಿಸಿದರು.