ಸಾರಾಂಶ
ಅಳ್ನಾವರ:
ಇಲ್ಲಿನ ದಿ. ಅಳ್ನಾವರ ಅರ್ಬನ ಕೋ ಆಫ್ ಬ್ಯಾಂಕಿನ ೨೦೨೪-೨೫ರಿಂದ ೨೦೨೯-೩೦ನೇ ಸಾಲಿನ ವರೆಗಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಪ್ರಗತಿ ಸಹಕಾರ ಗುಂಪಿನ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.೧೫ ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ ೯ ಸಾಮಾನ್ಯ ಸ್ಥಾನಗಳಿಗೆ ೧೨ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ ಹಿಂದಿನ ಆಡಳಿತ ಮಂಡಳಿಯವರೆ ಪುನರಾಯ್ಕೆಗೊಂಡಿದ್ದು ಕುತೂಹಲಕ್ಕೆ ತೆರೆ ಬಿದ್ದಿದೆ. ಬೆಳಗ್ಗೆ ೯ರಿಂದ ಸಂಜೆ ೪ರ ವರೆಗೆ ನಡೆದ ಮತದಾನದ ಬಳಿಕ ರಾತ್ರಿ ವರೆಗೂ ಮತ ಎಣಿಕೆ ನಡೆದು ರಿಟರ್ನಿಂಗ್ ಅಧಿಕಾರಿ ಸಹಕಾರ ಇಲಾಖೆಯ ಗಾಯತ್ರಿ ರಾಠೋಡ ಫಲಿತಾಂಶ ಪ್ರಕಟಿಸಿದರು. ೨೮೬೪ ಸದಸ್ಯ ಮತದಾರರ ಪೈಕಿ ೨೦೭೨ ಜನರು ಮತದಾನ ಮಾಡಿದ್ದಾರೆ.
ಫಲಿತಾಂಶ:ಉಡುಪಿ ಅನಂತರಾಮ ವೆಂಕಟಮಣಾಚಾರ್ಯ, ತೇಗೂರ ಮಲ್ಲಿಕಾರ್ಜುನ ಬಸವಣ್ಣೆಪ್ಪ, ಅಷ್ಟೇಕರ ರಾಜು ಅರ್ಜುನ, ಜಕಾತಿ ಶಿವಲಿಂಗಪ್ಪ ಗಂಗಾಧರ, ಗಾಣಗೇರ ಮಲ್ಲಪ್ಪ ರಂಗಪ್ಪ, ಗುಂದಕಲ್ ರೂಪೇಶ ಮನೋಹರ, ಹೊಸಕೇರಿ ಪ್ರಶಾಂತ ಶಿವಾನಂದ, ಬಡಸ್ಕರ ಮಧು ಕೃಷ್ಣಾಜಿ, ಪೋಕಾರ (ಪಟೇಲ) ಛಗನಲಾಲ ಕೇಶವಲಾಲ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆಯಾದವರು:ಹಿಂದಿನ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ನಾಗರಾಜ ಪರಮೇಶ್ವರಪ್ಪ ಹಂಜಗಿ (ಪರಿಶಿಷ್ಟ ಜಾತಿ), ಫಕ್ಕೀರಪ್ಪ ಶಂಕರ ಮೇದಾರ (ಪರಿಶಿಷ್ಟ ಪಂಗಡ),
ಜಾವಿದ್‌ಅನ್ವರ ರೆಹಮತುಲ್ಲಾ ತೊಲಗಿ (ಹಿಂದುಳಿದ ಅ-ವರ್ಗ), ಉದಯ ನಾರಾಯಣ ಗಡಕರ (ಹಿಂದುಳಿದ ಬ-ವರ್ಗ) ಹಾಗೂ ಎರಡು ಮಹಿಳಾ ಸ್ಥಾನಕ್ಕೆಸಂಧ್ಯಾ ಶಶಿಧರ ಅಂಬಡಗಟ್ಟಿ, ವರ್ಷಾ ಬಸವರಾಜ ತೇಗೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.