ಸಾರಾಂಶ
ಯಾವುದೇ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ವೈದ್ಯರ ಜೊತೆಗೆ ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ ಎಂದು ಸಿಮ್ಸ್ ಬೋಧನಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಎಂ. ಮಹೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯಾವುದೇ ಆಸ್ಪತ್ರೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ವೈದ್ಯರ ಜೊತೆಗೆ ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ತರವಾಗಿದೆ ಎಂದು ಸಿಮ್ಸ್ ಬೋಧನಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಎಂ. ಮಹೇಶ್ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರ ದಿನ-೨೦೨೫ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರೋಗಿಯ ರಕ್ಷಣೆಯಲ್ಲಿ ಅರಿವಳಿಕೆ ಮತ್ತು ಆಪರೇಷನ್ ಥೀಯೇಟರ್ ತಂತ್ರಜ್ಞರ ಪಾತ್ರ ಮಹತ್ತರವಾಗಿದೆ, ಸದಾ ಒತ್ತಡದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಬೇಕಾದ ಆಪರೇಷನ್ ಥಿಯೇಟರ್ ತಂತ್ರಜ್ಞರು ಸಮಚಿತ್ತದಿಂದ ಇರಬೇಕಾದದ್ದು ಮುಖ್ಯ ಎಂದರು.ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಮತ್ತು ರೋಗಿಯ ಆರೈಕೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ, ಅರಿವಳಿಕೆ ತಂತ್ರಜ್ಞರು ರೋಗಿಯ ಅರಿವಳಿಕೆ ಮತ್ತು ನೋವು ನಿರ್ವಹಣೆಯಲ್ಲಿ ಸಹಾಯ ಮಾಡುವುದರ ಜೊತೆ ಇವರ ಜವಾಬ್ದಾರಿ ಹೆಚ್ಚು. ರೋಗಿಗಳ ಸಂಪರ್ಕ ವೈದ್ಯರಿಗೆ ನಿರಂತರವಾಗಿರುತ್ತದೆ .ಆದರೆ ಆಪರೇಷನ್ ಥಿಯೇಟರ್‌ಗೆ ಬರುವವರು ಜೀವನದಲ್ಲಿ ಒಂದು ಅಥವಾ ಎರಡು ಬಾರಿ ಇದು ಅವರ ಜೀವನದಲ್ಲಿ ಸದಾ ನೆನಪಿರುತ್ತದೆ. ಆದ್ದರಿಂದ ಬಹಳ ಜವಾವ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಿಮ್ಸ್ ಬೋಧನಾ ಆಸ್ಪತ್ರೆಯ ಅನಸ್ತೇಶಿಯಾ ವಿಭಾಗದ ಪ್ರಭಾರ ಮುಖ್ಯಸ್ಧ ಡಾ. ದರ್ಶನ್ ಎಂ ಎಸ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ನಗರದ ಜೆಎಸ್‌ಎಸ್ ಸ್ಕೂಲ್ ಆಫ್ ನಸಿಂಗ್ ಕಾಲೇಜಿನ ಪ್ರಾಂಶುಪಾಲ ವಿನಯ್ ಕುಮಾರ್ ಜಿ. ಅದ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಆಸ್ಪತ್ರೆಯ ಡಾ. ವಿನಯ್ ಕುಮಾರ್, ವಿಕಾಸ್ ನಂದಿ, ಶಿವನಾಕಾರಪ್ಪ ಉಪಸ್ಥಿತರಿದ್ದರು.