ಜನಪದ ವಿವೇಕದ ಜತೆಗೆ ಜೀವನ ಉತ್ಸಾಹವನ್ನು ನೀಡಲಿದೆ: ಕೊಳಲೆ ರುದ್ರಪ್ಪ

| Published : Oct 07 2024, 01:45 AM IST

ಜನಪದ ವಿವೇಕದ ಜತೆಗೆ ಜೀವನ ಉತ್ಸಾಹವನ್ನು ನೀಡಲಿದೆ: ಕೊಳಲೆ ರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದಲ್ಲಿ ನಡೆದ ಜನಪದ ಕಾರ್ಯಕ್ರಮಕ್ಕೆ ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜನಪದ ಲೋಕ ವಿವೇಕದ ಜೊತೆಗೆ ಜೀವನ ಉತ್ಸಾಹ ನೀಡಲಿದೆ ಎಂದು ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಜನಪದ ಗೀತೆಗಳ ವೃಂದ ಗಾಯನ ಸ್ಪರ್ಧೆ ಮತ್ತು ಗಾದೆ, ಒಗಟುಗಳನ್ನು ವಾಚಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು ಎನ್ನುವ ಗಾದೆಯಂತೆ ಜನಪದ ಜೀವನ ಉತ್ಸಾಹದ ಜೊತೆಯಲ್ಲಿ ನಮ್ಮ ಭಾಷೆಯನ್ನು ಸಮೃದ್ಧವಾಗಿ ಬೆಳೆಸಿಕೊಂಡು ಬಂದಿದೆ. ಜನಪದರು ಅಭಿವ್ಯಕ್ತಿಯ ಮಾಧ್ಯಮವಾಗಿ ಗಾದೆ, ಒಗಟು, ಹಾಡು, ಕುಣಿತ ಎಲ್ಲವನ್ನೂ ಒಳಗೊಂಡಿದೆ ಎಂದು ಹೇಳಿದರು.

ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಅವರು ಕೊಳಲೆ ರುದ್ರಪ್ಪಗೌಡರ ಅಭಿನಂದನಾ ಗ್ರಂಥ ನಿರ್ಮಾಣದಲ್ಲಿ ಸಹಕರಿಸಿದ ಮೋಹನ್ ಮತ್ತು ಹರ್ಷಾ ಅವರನ್ನು ಅಭಿನಂದಿಸಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಪ್ರತಿ ವರ್ಷ ಜನಪದ ಗೀತೆಗಳ ಗಾಯನ ಸ್ಪರ್ಧೆ ಮತ್ತು ಒಗಟು, ಗಾದೆ ಹೇಳುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಹಬ್ಬಗಳಿಗೂ ಜನಪದಕ್ಕೂ ಇರುವ ಸಂಬಂಧ ನೆನಪು ಮಾಡುತ್ತಲೆ ಹೊಸ ತಲೆಮಾರಿಗೆ ಅದರ ಸೊಗಡನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವೇದಿಕೆಯಲ್ಲಿ ಸಾಹಿತಿ ಎಂ.ನವೀನ್ ಕುಮಾರ್, ಸೋಮಿನಿಕಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗಾಯಕಿ ನಳಿನಾಕ್ಷಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ಸ್ವಾಗತಿಸಿ, ಕಸಾಪ ತಾಲೂಕು ಅಧ್ಯಕ್ಷೆ ಮಹಾದೇವಿ ನಿರೂಪಿಸಿ, ಕಜಾಪ ಉಪಾಧ್ಯಕ್ಷ ಧರ್ಮೋಜಿರಾವ್ ವಂದಿಸಿದರು.