ಸಾರಾಂಶ
ಬ್ಯಾಡಗಿ: ಉತ್ತಮ ಆರೋಗ್ಯಕ್ಕೆ ದೈಹಿಕ ಸದೃಢತೆ ಜೊತೆಯಲ್ಲಿ ಮಾನಸಿಕ ಆರೋಗ್ಯವೂ ಸಹ ಅತ್ಯಂತ ಪ್ರಮುಖವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡೆ ಹೇಳಿದರು.
ತಾಲೂಕು ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಆರೋಗ್ಯ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉತ್ತಮ ಹಾಗೂ ಸದೃಢ ಶರೀರ ಹೊಂದಲು ಮಾನಸಿಕವಾಗಿ ಸದೃಢವಾಗಿರಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗೂ ಜೀವನ ಶೈಲಿಯ ಬದಲಾವಣೆಯಿಂದ ಯವ ಜನತೆ ಮಾನಸಿಕ ಖಿನ್ನತೆಗೆ ಜಾರುತ್ತಿದ್ದು, ಚಿಕ್ಕಚಿಕ್ಕ ಕಾರಣಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಣಾಯಾಮ, ಯೋಗ, ಲವಲವಿಕೆ ಯುಕ್ತ ಜೀವನಶೈಲಿ ರೂಪಿಸಿ ಕೊಂಡಲ್ಲಿ ಇದರಿಂದ ಹೊರಬಹುದಾಗಿದೆ ಎಂದರು. ಮನೋರೋಗ ತಜ್ಞ, ಡಾ. ವಿಜಯಕುಮಾರ ಬಳಿಗಾರ ಉಪನ್ಯಾಸ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ವಹಿಸಿದ್ದರು.ಕಾರ‍್ಯಕ್ರಮದಲ್ಲಿ ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಎಂ.ಎನ್. ಪ್ರಶಾಂತ್ ಡಾ.ಸಂತೋಷ ಹಾಲುಂಡಿ, ವಿ. ಮಮತಾ, ನ್ಯಾಯವಾದಿಗಳಾದ ಎಂ.ಪಿ.ಹಂಜಿಗಿ, ಪಿ.ಸಿ. ಶೀಗಿಹಳ್ಳಿ, ಬಿ.ಎಸ್. ಚೂರಿ, ಎಫ್.ಎಂ.ಮುಳಗುಂದ, ಆರ್.ವಿ. ಬೆಳಕೇರಿಮಠ, ಎಂ.ಜೆ. ಮುಲ್ಲಾ, ಭಾರತಿ ಕುಲ್ಕರ್ಣಿ, ಹೆಚ್.ಜಿ.ಮುಳಗುಂದ ನ್ಯಾಯಾಂಗ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.