ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಧಾರ್ಮಿಕ ಆಚರಣೆಗಳ ಜತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಿ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.ಸಂಗಮೇಶ್ವರ ಭಜನಾ ಮಂಡಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಭಾನುವಾರ ತಾಲೂಕಿನ ಹಿರೇಪಡಸಲಗಿ ಗ್ರಾಮದ ಹಟ್ಟಿವಸ್ತಿ ತೋಟದ ಸಂಗಮೇಶ್ವರ ಮಹಾರಾಜರ ದೇವಸ್ಥಾನದಲ್ಲಿ ಏರ್ಪಡಿಸಿದ್ದ 73ನೇ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಕೆಟ್ಟ ಚಟಗಳ ದಾಸರಾಗುತ್ತಿದ್ದು, ಅವರಿಗೆ ಸಂಸ್ಕಾರ ಕಲಿಸಿಕೊಡಬೇಕಿದೆ ಎಂದರು. ಮನೆಯಲ್ಲಿ ಹಿರಿಯರು ಮಕ್ಕಳಎದುರು ಚಟಗಳನ್ನು ಮಾಡುವುದರಿಂದ ಮಕ್ಕಳು ಅನುಕರಣೆ ಮಾಡುತ್ತಾರೆ. ಹಿರಿಯರಾದವರು ತಮ್ಮ ನಡುವಳಿಕೆ ಹಾಗೂ ಜೀವನದ ಕ್ರಮವನ್ನು ಬದಲಾಯಿಸಿಕೊಂಡು ಮಕ್ಕಳಿಗೆ ಸರಿಯಾದ ಮಾರ್ಗದರ್ಶಕರಾಗಬೇಕು. ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸು ಶಾಂತವಾಗುತ್ತದೆ. ಭಜನೆ, ಧ್ಯಾನ, ಪ್ರವಚನಗಳಿಂದ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.ಬೆಂಗಳೂರು ಬಿದ್ರಳ್ಳಿಯ ಡಾ.ಮುತ್ತುರಾಜ ಯತ್ನಾಳ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಯೋಗಪ್ಪ ಸವದಿ, ಮಹಾದೇವ ಕಾತ್ರಾಳ, ಮೋಹನ ಜಾಧವ, ಉಪ ನೋಂದಣಿ ಅಧಿಕಾರಿ ಸುರೇಶ, ಜನಪದ ಪರಿಷತ್‌ನ ಅಸ್ಕಿ, ಗ್ರಾಪಂನ ಅಧ್ಯಕ್ಷರು, ಸದಸ್ಯರು, ಪಿಕೆಪಿಎಸ್‌ನ ಸದಸ್ಯರು ಅಧ್ಯಕ್ಷರು ಮತ್ತು ಮುಖಂಡರಾದ ಮಲ್ಲಪ್ಪ ಚೌಹಾಣ, ಶಂಭಣ್ಣ ಹಟ್ಟಿ, ದರೆಪ್ಪ ಕುಂಬಾರ, ನಾಗರಾಜ ಯತ್ನಾಳ, ಗಣಪತಿ ಕಂಕಣವಾಡಿ, ಸದಾಶಿವ ಯತ್ನಾಳ ಸಿದ್ದಾಪೂರ ಸಿದ್ದು, ವಿಷ್ಣು ಕಂಕಣವಾಡಿ, ಲಕ್ಷ್ಮಣ ದತ್ತುಬಾಗೋಳ, ಶಂಕರ ಕುಂಬಾರ ಮುಂತಾದವರಿದ್ದರು.