ಜಲ ರಕ್ಷಣೆ ಜೊತೆಗೆ ಉತ್ತಮ ಪರಿಸರ ಕಾಪಾಡಬೇಕು: ನ್ಯಾ.ಎಚ್.ಮಹದೇವಪ್ಪ

| Published : Mar 23 2025, 01:30 AM IST

ಜಲ ರಕ್ಷಣೆ ಜೊತೆಗೆ ಉತ್ತಮ ಪರಿಸರ ಕಾಪಾಡಬೇಕು: ನ್ಯಾ.ಎಚ್.ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಗಿಡಗಳನ್ನು ನಾವು ಬೆಳಸುವುದರಿಂದ ಮಳೆ, ಗಾಳಿ ಚನ್ನಾಗಿರುತ್ತದೆ. ಅದರಂತೆ ಕಾಡುಗಳು ಬೆಳೆದರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ. ಜರಿಗಳಲ್ಲಿ ನೀರು ಕುಡಿದು ಜಲಚರಗಳ ತಿಂದು ಪ್ರಾಣಿಗಳಿಗೆ ಅಹಾರ, ನೀರು ಸಿಗುತ್ತದೆ. ಆದರೆ, ಮನುಷ್ಯ ಇವತ್ತಿನ ದಿನದಲ್ಲಿ ಅತಿಯಾದ ಆಸೆಯಿಂದ ವಿನಾಶದ ಅಂಚಿನಲ್ಲಿದ್ದಾನೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಮನುಷ್ಯ ಹಾಗೂ ಪ್ರಾಣಿ ಸಂಕುಲ ಬದುಕಲು ಮುಖ್ಯವಾಗಿ ಜಲ ರಕ್ಷಣೆ ಜೊತೆಗೆ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಮಹದೇವಪ್ಪ ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ರಕ್ಷಣೆ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ಗಿಡ ನೆಟ್ಟು ಪರಿಸರ ಉಳಿಸಲು ಘೋಷಣೆ ಮಾಡುವ ಮೂಲಕ ಮನುಷ್ಯ ವಾಸಿಸಲು ಒಳ್ಳೆಯ ವಾತಾವರಣಬೇಕು. ಉಸಿರಾಡಲು ಒಳ್ಳೆಯ ಗಾಳಿ, ಕುಡಿಯಲು ನೀರು, ತಿನ್ನಲು ಆಹಾರ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛಯಾಗಿಟ್ಟುಕೊಳ್ಳಬೇಕು ಎಂದರು.

ಗಿಡಗಳನ್ನು ನಾವು ಬೆಳಸುವುದರಿಂದ ಮಳೆ, ಗಾಳಿ ಚನ್ನಾಗಿರುತ್ತದೆ. ಅದರಂತೆ ಕಾಡುಗಳು ಬೆಳೆದರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ. ಜರಿಗಳಲ್ಲಿ ನೀರು ಕುಡಿದು ಜಲಚರಗಳ ತಿಂದು ಪ್ರಾಣಿಗಳಿಗೆ ಅಹಾರ, ನೀರು ಸಿಗುತ್ತದೆ. ಆದರೆ, ಮನುಷ್ಯ ಇವತ್ತಿನ ದಿನದಲ್ಲಿ ಅತಿಯಾದ ಆಸೆಯಿಂದ ವಿನಾಶದ ಅಂಚಿನಲ್ಲಿದ್ದಾನೆ ಎಂದು ವಿಷಾದಿಸಿದರು.

ಬೆಳೆದು ನಿಂತಿರುವ ಮರ-ಗಿಡ ಕಡಿದು ಇರುವ ಜಲವನ್ನು ಕಸ-ತ್ಯಾಜ್ಯಗಳ ಸುರಿದು ನೀರನ್ನು ಕಲುಷಿತ ಗೊಳಿಸಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದ ಮುಂದೆ ಮನುಕುಲ ಹಾಗೂ ಪ್ರಾಣಿ ಸಂಕುಲಕ್ಕೆ ಸಂಚಕಾರ ಬರಬಹುದು. ಈಗಲಾದರೂ ಎಚ್ಚೆತ್ತುಕೊಂಡು ಜಲ ಸಂರಕ್ಷಣೆ ಮಾಡಿ ಪರಿಸರವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಕಿದೆ ಎಂದರು.

ನಂತರ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಹರೀಶ್ ಕುಮಾರ್ ಮಾತನಾಡಿ, ಇಂದಿನಿಂದಲೆ ಜಲರಕ್ಷಣೆ ಮಾಡಬೇಕು. ಪರಿಸರ ಉಳಿಸಲು ಪಣ ತೊಟ್ಟು ಎಲ್ಲರಲ್ಲೂ ಪರಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್‌ಗೌಡ, ವಲಯ ಅರಣ್ಯಾಧಿಕಾರಿ ವಿನೋದ್ ಗೌಡ, ಉಪಸ್ಥಿತಿಯಲ್ಲಿ ವಕೀಲ ಸಿ.ಕೆ. ಸೋಮು ಸೇರಿದಂತೆ ಇತರರು ಇದ್ದರು.