‘ದಾನೆ ಎಂಚ ಉಲ್ಲರ್, ಮಾತ ಸೌಖ್ಯನ.. ಇಲ್ಲಗ್ ಪೋದು ಬರ್ಪೆ, ಗಂಗಸರ ಪರ್ಕನ’ (ಏನು ಹೇಗಿದ್ದೀರಿ, ಎಲ್ಲ ಸೌಖ್ಯವೇ, ಮನೆಗೆ ಹೋಗಿ ಬರುತ್ತೇನೆ). ಹೀಗೆ ನಿರರ್ಗಳವಾಗಿ ತುಳುವಿನಲ್ಲಿ ಮಾತನಾಡಿ ತುಳುವರ ಮನ ಗೆದ್ದಿದ್ದರು ನಾನಾ ಪಾಟೇಕರ್.
ಮಂಗಳೂರು: ‘ದಾನೆ ಎಂಚ ಉಲ್ಲರ್, ಮಾತ ಸೌಖ್ಯನ.. ಇಲ್ಲಗ್ ಪೋದು ಬರ್ಪೆ, ಗಂಗಸರ ಪರ್ಕನ’ (ಏನು ಹೇಗಿದ್ದೀರಿ, ಎಲ್ಲ ಸೌಖ್ಯವೇ, ಮನೆಗೆ ಹೋಗಿ ಬರುತ್ತೇನೆ). ಹೀಗೆ ನಿರರ್ಗಳವಾಗಿ ತುಳುವಿನಲ್ಲಿ ಮಾತನಾಡಿ ತುಳುವರ ಮನ ಗೆದ್ದಿದ್ದರು ನಾನಾ ಪಾಟೇಕರ್.ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿರ್ದಿಂಗತ ಸಂಸ್ಥೆಯಿಂದ 2024 ಮಾ.20 ರಂದು ನಡೆದ ‘ನೇಹದ ನೇಯ್ಗೆ ರಂಗೋತ್ಸವ’ದಲ್ಲಿ ಪಾಲ್ಗೊಂಡು ಅವರು ತುಳುವಿನಲ್ಲಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತನ್ನ ನೇರ ಹೇಳಿಕೆಗಳಿಗೂ ಹೆಸರುವಾಸಿಯಾಗಿರುವ ನಾನಾ ಪಾಟೇಕರ್, ಜನರು ತಮ್ಮ ನಂಬಿಕೆಗಳ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ನಮ್ಮ ಮತ ನಮ್ಮ ಗುರುತು. ನಮಗೆ ಐದು ವರ್ಷಗಳಿಗೊಮ್ಮೆ ಈ ಅವಕಾಶ ಸಿಗುತ್ತದೆ ಮತ್ತು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಅವಕಾಶವನ್ನು ಬಳಸದೆ ಮತ್ತು ಮತ ಚಲಾಯಿಸದವರನ್ನು ದೇಶಕ್ಕೆ ನಿಜವಾದ ದ್ರೋಹಿಗಳೆಂದು ಪರಿಗಣಿಸಬಹುದು ಎಂದಿದ್ದರು.೨೦೦೭ರಲ್ಲಿ ಬಿಡುಗಡೆಯಾದ ಹಿಂದಿಯ ‘ವೆಲ್ಕಮ್’ ಸಿನಿಮಾದಲ್ಲಿ ನಾನಾ ಪಾಟೇಕರ್ ಅವರು ‘ಉದಯ್ ಶೆಟ್ಟಿ’ ಎಂಬ ಭೂಗತ ಪಾತಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದ ಹೆಸರು ಕನ್ನಡದ್ದಾಗಿರುವುದು ವಿಶೇಷ.