ಸಾಹಿತಿಗಳು ಮರೆಯಾದರೂ ಸಾಹಿತ್ಯದಿಂದ ಜೀವಂತ: ಎಚ್.ಆರ್.ಅರವಿಂದ್

| Published : Jun 10 2024, 12:48 AM IST

ಸಾಹಿತಿಗಳು ಮರೆಯಾದರೂ ಸಾಹಿತ್ಯದಿಂದ ಜೀವಂತ: ಎಚ್.ಆರ್.ಅರವಿಂದ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಹೊರಬರಬೇಕಿದೆ. ಸಮಾಜ ತಿದ್ದುವ, ರಾಜಕಾರಣಿಗಳು, ದುಷ್ಟತನ ಮನಸಿಗರನ್ನು ಎಚ್ಚರಿಸಿ ಕಾವ್ಯ, ಕವಿತೆ, ಕವನಗಳು ಅತ್ಯಗತ್ಯವಿದೆ. ಕನ್ನಡಭಾಷೆ ಬೆಳೆವಣಿಗೆಗೆ ಸಾಹಿತ್ಯ ಮತ್ತು ಸಾಹಿತಿಗಳ ಕೊಡುಗೆ ಅಪಾರ. ಗೋಕಾಕ್ ಚಳವಳಿಯಿಂದ ಕನ್ನಡ ಭಾಷೆಗೆ ಮತ್ತಷ್ಟು ಶಕ್ತಿ ಮತ್ತು ಸಾಮರ್ಥ್ಯದ ಅರಿವು ಹೆಚ್ಚಾಯಿತು. ಭಾಷೆ ವೃದ್ದಿಗೆ ಗಣ್ಯವ್ಯಕ್ತಿಗಳ ಮಾತುಗಾರಿಗೆಯೂ ಪ್ರಭಾವ ಬೀರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಹಿತಿಗಳು ಮರೆಯಾದರೂ ಸಮಾಜಕ್ಕೆ ಅವರು ನೀಡಿರುವ ಅತ್ಯುತ್ತಮ ಸಾಹಿತ್ಯದಿಂದ ಜೀವಂತವಾಗಿರುತ್ತಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಹಿಂದಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ಮಟ್ಟದ ಕವಲುದಾರಿ ಕವನ ಸಂಕಲನ ಬಿಡುಗಡೆ ಹಾಗೂ 31ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳ, ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಹೊರಬರಬೇಕಿದೆ. ಸಮಾಜ ತಿದ್ದುವ, ರಾಜಕಾರಣಿಗಳು, ದುಷ್ಟತನ ಮನಸಿಗರನ್ನು ಎಚ್ಚರಿಸಿ ಕಾವ್ಯ, ಕವಿತೆ, ಕವನಗಳು ಅತ್ಯಗತ್ಯವಿದೆ ಎಂದರು.

ಸಾಹಿತಿ ಆರ್.ಎಸ್.ಚಂದ್ರಶೇಖರ್ ಮಾತನಾಡಿ, ಕನ್ನಡಭಾಷೆ ಬೆಳೆವಣಿಗೆಗೆ ಸಾಹಿತ್ಯ ಮತ್ತು ಸಾಹಿತಿಗಳ ಕೊಡುಗೆ ಅಪಾರ. ಗೋಕಾಕ್ ಚಳವಳಿಯಿಂದ ಕನ್ನಡ ಭಾಷೆಗೆ ಮತ್ತಷ್ಟು ಶಕ್ತಿ ಮತ್ತು ಸಾಮರ್ಥ್ಯದ ಅರಿವು ಹೆಚ್ಚಾಯಿತು. ಭಾಷೆ ವೃದ್ದಿಗೆ ಗಣ್ಯವ್ಯಕ್ತಿಗಳ ಮಾತುಗಾರಿಗೆಯೂ ಪ್ರಭಾವ ಬೀರುತ್ತದೆ. ಡಾ.ರಾಜ್ ಕುಮಾರ್ ಅವರಂತಹ ಮೇರುನಟರ ಮಾತುಗಾರಿಗೆ ಮಹತ್ವವನ್ನು ಹೆಚ್ಚಿಸುತ್ತದೆ ಎಂದು ಸ್ಮರಿಸಿದರು.

ಇದೇ ವೇಳೆ ರಾಜ್ಯ ಮಟ್ಟದ ಕವಲುದಾರಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಕವಿಗಳ ಕವನ-ಕವಿತೆಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ ಸುರೇಶ್‌ಮಲ್ಲಾಡದ ವಹಿಸಿದ್ದರು. ವೇದಿಕೆಯಲ್ಲಿ ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಕಸಾಪ ನಗರಾಧ್ಯಕ್ಷೆ ಸುಜಾತಕೃಷ್ಣ, ವಕೀಲ ಗುರುಪ್ರಸಾದ್, ವೈದ್ಯ ಡಾ.ಎಚ್.ಸಿ.ಆನಂದ್, ಪ್ರಾಧ್ಯಾಪಕ ಜಯಕುಮಾರ್, ಸಮಾಜಸೇವಕಿ ಪ್ರತಿಮಾ, ಶಿಕ್ಷಕಿ ಶ್ಯಾಮಲಾ, ಹಾವೇರಿ ನಾಗರಾಜು ಮತ್ತಿತರರಿದ್ದರು.

ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನಮಂಡ್ಯ: 2025ನೇ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರಾದ್ಯಂತ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ನೂತನ ಆವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ 5 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿರುವ ಮಕ್ಕಳನ್ನು ಗುರುತಿಸಿ ಜುಲೈ 31 ರೊಳಗೆ ಅರ್ಜಿಯನ್ನು ಆನ್‌ಲೈನ್ Website: National Awards Portal https://awards.gov.in ಮೂಲಕ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ. ಸಂ: 08232-223222 ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಅಂಧ ಗಂಡು ಮಕ್ಕಳ ದಾಖಲಾತಿಗೆ ಅವಕಾಶಮಂಡ್ಯ: ಮೈಸೂರಿನ ಬಂಬು ಬಜಾರ್‌ನ ತಿಲಕ್ ನಗರದ ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಶೇ. 40% ಕ್ಕಿಂತ ಹೆಚ್ಚು ದೃಷ್ಟಿ ದೋಷವುಳ್ಳ (ಅಂಧರು) 6 ವರ್ಷದಿಂದ ಹತ್ತು ವರ್ಷ ವಯೋಮಿತಿಯ ಗಂಡು ಮಕ್ಕಳನ್ನು 1ನೇ ತರಗತಿಯಿಂದ 10ನೇ ತರಗತಿಗೆ ದಾಖಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2297496/ಮೊ-9481441453 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.