ಸಾರಾಂಶ
- 1980 ರಿಂದ 2020ರ ವರೆಗಿನ ನೂರಾರು ವಿದ್ಯಾರ್ಥಿಗಳು ಬಾಗಿ
- ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಣೆ, ಶಿಕ್ಷಕರಿಗೆ ಗೌರವಕನ್ನಡಪ್ರಭ ವಾರ್ತೆ ಧಾರವಾಡ
ಯಾವುದೇ ಶಾಲೆ-ಕಾಲೇಜುಗಳ ಹಳೆಯ ವಿದ್ಯಾರ್ಥಿಗಳು ಹತ್ತಾರು ವರ್ಷಗಳ ನಂತರ ತಮ್ಮ ಬ್ಯಾಚ್ ವಿದ್ಯಾರ್ಥಿಗಳನ್ನು ಕಷ್ಟಪಟ್ಟು ಒಂದೇ ವೇದಿಕೆಯಲ್ಲಿ ಸೇರಿಸಿ ಸಮ್ಮಿಲನ ಕಾರ್ಯಕ್ರಮ ಮಾಡುವುದು ಇದೀಗ ಸಾಮಾನ್ಯವಾಗಿದೆ. ಆದರೆ, ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಬರೋಬ್ಬರಿ 40 ಬ್ಯಾಚ್‌ನ ನೂರಾರು ವಿದ್ಯಾರ್ಥಿಗಳನ್ನು ಒಂದೇ ವೇದಿಕೆ ಅಡಿ ಸೇರಿಸಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವವನ್ನು ಶನಿವಾರ ಶಾಲಾ ಆವರಣದಲ್ಲಿ ಸಂಭ್ರಮದಿಂದ ಮಾಡಿದರು.1980ರಿಂದ ಹಿಡಿದು 2020ನೇ ಬ್ಯಾಚ್ ವರೆಗೂ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಶನಿವಾರ ಶಾಲಾ ಆವರಣದಲ್ಲಿ ಮತ್ತೆ ಹಳೆಯ ನೆನಪುಗಳನ್ನು ಕೆದಕಿದರು. ಹತ್ತಾರು ವರ್ಷಗಳಿಂದ ಭೇಟಿಯೇ ಆಗದ ಸ್ನೇಹಿತರು ಒಬ್ಬರನ್ನೊಬ್ಬರು ತಬ್ಬಿಕೊಂಡು, ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು. ವೈಯಕ್ತಿಕ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ಹಳೆಯ ವಿದ್ಯಾರ್ಥಿಗಳು ಅತ್ಯಂತ ಕ್ರಿಯಾಶೀಲವಾಗಿ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಂಡರು. ಹಾಡು, ಜೋಕು, ಆಟ ಹೀಗೆ ಹತ್ತಾರು ವಿನೋದ, ಉಲ್ಲಾಸಗಳೊಂದಿಗೆ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಕೆದಕಿದರು.
ಇದಷ್ಟೇ ಅಲ್ಲದೇ ತಮಗೆ ಕಲಿಸಿದ ಗುರುಗಳು ಸೇರಿದಂತೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಶಿಕ್ಷಕೇತರ ಸಿಬ್ಬಂದಿಗೆ ಗೌರವ ಸನ್ಮಾನ ಮಾಡಿದರು. ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಊಟ ಮಾಡಿ ಸಂಭ್ರಮಿಸಿದರು.ಕಾರ್ಯಕ್ರಮ ಸಂಘಟಕರಲ್ಲಿ ಒಬ್ಬರಾದ ಹಳೆಯ ವಿದ್ಯಾರ್ಥಿನಿ ಓಟಿಲಿ ಅನಬನ್, ನಮ್ಮ ಭೂತಕಾಲವನ್ನು ಗೌರವಿಸಲು ಮತ್ತು ನೆನಪಿಸಿಕೊಳ್ಳಲು, ವರ್ತಮಾನವನ್ನು ಪಾಲಿಸಲು ಮತ್ತು ಪ್ರೌಢ ಶಾಲೆಯ ಭವಿಷ್ಯವನ್ನು ರೂಪಿಸಲು ಯುವಕರು ಮತ್ತು ಹಿರಿಯರು ಒಟ್ಟಾಗಿ ಸೇರಲು ಈ ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ ಈಗಿನ ಪೀಳಿಗೆಗೂ ಅನುಕೂಲ ಆಗಲಿದೆ. ಶಾಲೆಯ ಸಹಾಯ, ವೈಯಕ್ತಿಕ ಸಂಪರ್ಕದೊಂದಿಗೆ ಸಾಮಾಜಿಕ ಜಾಲತಾಣ ಬಳಸಿ 40 ಬ್ಯಾಚ್ ವಿದ್ಯಾರ್ಥಿಗಳನ್ನು ಸಂಘಟಿಸಿದ್ದೇವೆ. ಸದ್ಯದಲ್ಲಿಯೇ ಅಧಿಕೃತ ವೆಬ್‌ಸೈಟ್ ಸಹ ವಿನ್ಯಾಸಗೊಳಿಸಲಾಗುತ್ತಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಬಾಸೆಲ್ ಮಿಶನ್ ಸಂಸ್ಥೆಯ ಟ್ರಸ್ಟಿ ಪ್ರೊ. ಜೆ.ಎಸ್. ಕುರಿ, ಇದೇ ಶಾಲಾ ಮೈದಾನದಲ್ಲಿ ಯುನಿಫಾರ್ಮ್ ಹಾಕಿಕೊಂಡು ಓಡಾಡಿದ ನೀವು, ಪ್ರಸ್ತುತ ವೈದ್ಯರು, ಎಂಜಿನಿಯರ್, ಉದ್ದಿಮೆದಾರರು, ರಾಜಕಾರಣಿಗಳು ಸೇರಿದಂತೆ ದೊಡ್ಡ ಹುದ್ದೆಯಲ್ಲಿದ್ದು ಕೋಟ್ ಹಾಗೂ ರೇಷ್ಮೆ ಸೀರೆಯುಟ್ಟು ಬಂದಿದ್ದೀರಿ. ನಿಮ್ಮ ಈ ಸಂಭ್ರಮ ಹೃದಯಸ್ಪರ್ಶಿ ದೃಶ್ಯ. ತಮಗೆ ಕಲಿಸಿದ ಗುರುಗಳಿಗೆ ಸನ್ಮಾನ ಮಾಡಿದ್ದು, ಶಾಲೆಯ ಬಗೆಗಿನ ಗೌರವ ಇಟ್ಟು ಇಷ್ಟೊಂದು ಹಳೆಯ ವಿದ್ಯಾರ್ಥಿಗಳು ಸುವರ್ಣ ಮಹೋತ್ಸವ ಮಾಡುತ್ತಿರುವುದು ಶ್ಲಾಘನೀಯ. ನಿಮಗೆ ಶಾಲೆಯಿಂದ ದೊರೆತ ಸಂಸ್ಕಾರವನ್ನು ತಮ್ಮ ಮಕ್ಕಳಿಗೂ ಕಲಿಸಿ. ಉತ್ತಮ ಸಮಾಜ ನಿರ್ಮಾಣ ಮಾಡಲು ಉತ್ತಮ ವಿದ್ಯಾರ್ಥಿಗಳು ಹೊರ ಬರಬೇಕು. ಈ ನಿಟ್ಟಿನಲ್ಲಿ ಶಾಲೆಗಳು ಶಿಕ್ಷಣ ನೀಡುವಂತಾಗಲಿ ಎಂದು ಹಾರೈಸಿದರು.ಶಾಲೆಯ ಪ್ರಭಾರಿ ಪ್ರಾಚಾರ್ಯರಾದ ಗ್ರೇಸಲಿನಾ ಖಾನಾಪೂರ ಅಧ್ಯಕ್ಷತೆ ವಹಿಸಿದ್ದರು. ವೈದ್ಯರಾದ ಡಾ. ಜಂಬಗಿ, ಕಮಲಾ ಢವಳೆ ವೇದಿಕೆ ಮೇಲಿದ್ದರು. ಕಲಕೇರಿ ಸಂಗೀತ ಶಾಲೆ ಮಕ್ಕಳಿಂದ ಹಾಡು ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. 40 ಬ್ಯಾಚ್‌ಗಳ ಸುಮಾರು 400ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳಿದ್ದರು.
23ಡಿಡಬ್ಲೂಡಿ4ಧಾರವಾಡದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ 40 ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುವೃಂದಕ್ಕೆ ಸನ್ಮಾನ ಮಾಡಿ ಗೌರವಿಸಿದ ಕ್ಷಣ.
23ಡಿಡಬ್ಲೂಡಿ5ಧಾರವಾಡದ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸೇರಿದ್ದ ಹಳೆಯ ಬ್ಯಾಚ್‌ನ ವಿದ್ಯಾರ್ಥಿಗಳ ಸಂಭ್ರಮ.ಕನ್ನಡಪ್ರಭ ವಾರ್ತೆ ಧಾರವಾಡ