ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಲೇಜುಗಳ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಮತ್ತು ಔದ್ಯೋಗಿಕ ಕ್ಷೇತ್ರಗಳ ಬೆಳವಣಿಗೆ ಕುರಿತು ಹಳೆಯ ವಿದ್ಯಾರ್ಥಿಗಳು ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಫಾರ್ಮಸಿ ಕೌನ್ಸಿಲ್ ಆಪ್ ಇಂಡಿಯಾದ ಅಧ್ಯಕ್ಷ ಡಾ.ಮೊಂತುಕುಮಾರ ಪಟೇಲ ಹೇಳಿದರು.ಅವರು ಹಳೆಯ ವಿದ್ಯಾರ್ಥಿಗಳ ಸಂಘ ಬಿ.ವ್ಹಿ.ವ್ಹಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಫಾರ್ಮಸಿ ಕಾಲೇಜು, ಬಾಗಲಕೋಟೆ ವತಿಯಿಂದ ನೂತನ ಸಭಾಭವನದಲ್ಲಿ ಭಾನುವಾರ ನಡೆದ ಫಾರ್ಮಾ ಸಂಭ್ರಮ ಹಳೆಯ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಾವು ಕಲಿತ ಕಾಲೇಜುಗಳ ಅಭಿವೃದ್ಧಿಗೆ ನಮ್ಮ ಪಾತ್ರ ಕೂಡಾ ಮಹತ್ವದ್ದಾಗಿದ್ದು ನಾವೂ ಇತ್ತೀಚಿನ ಔದ್ಯೋಗಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಈ ಹಾನಗಲ್ ಕುಮಾರೇಶ್ವರ ಪಾರ್ಮಸಿ ಕಾಲೇಜು ಉತ್ತಮವಾದ ಮೂಲ ಸೌಕರ್ಯ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿ ವಿದ್ಯಾರ್ಥಿಗಳಿಗಾಗಿ ಕಲ್ಪಿಸಲಾಗಿದೆ. ಇದರಿಂದ ಮಹಾವಿದ್ಯಾಲಯದ ಆವರಣವೂ ಸಕಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಪೂರಕವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಒಳ್ಳೊಳ್ಳೆಯ ಸಂಶೋಧನೆಗಳನ್ನು ಮಾಡುವ ಮೂಲಕ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಬಿ.ವ್ಹಿ.ವ್ಹಿ.ಸಂಘದ ಸಮೂಹ ಮಹಾವಿದ್ಯಾಲಯದ ಆವರಣ ಶಿಕ್ಷಣದ ಕಾಶಿಯಂತೆ ಇರುವುದನ್ನು ನೋಡಿದರೆ ಈ ಬಾಗದ ವಿದ್ಯಾರ್ಥಿಗಳು ಪುಣ್ಯವಂತರು ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಹಳೆಯ ವಿದ್ಯಾರ್ಥಿಗಳ ಸಮಾಗಮವೂ ಬರಿ ಸ್ನೇಹಿತರನ್ನು ಭೇಟಿಯಾಗುವುದಲ್ಲ, ಹೊಸ ಹೊಸ ಸಂಶೋಧನಾತ್ಮಕ ಬೆಳವಣಿಗೆಯ ಅನುಭವಗಳನ್ನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅರೋಗ್ಯಯುತವಾಗಿ ಚರ್ಚಿಸಬೇಕು. ಇದರಿಂದ ಕಲಿಕಾ ಪಕ್ರಿಯೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಸಂಶೋಧನೆ ಕೈಗೊಳ್ಳಲು ಸಹಾಯಕಾರಿಯಾಗುತ್ತದೆ ಎಂದರು.
ಅತಿಥಿಗಳಾಗಿ ಅತಿಥಿಗಳಾಗಿ ಫಾರ್ಮಸಿ ಕೌನ್ಸಿಲ್ ಆಪ್ ಇಂಡಿಯಾದ ಸದಸ್ಯರಾದ ಆರ್.ಎಸ್.ಮದರಖಂಡಿ, ಡಾ. ವೆಂಕಟರಮನ, ಬೆಂಗಳೂರಿನ ಅಕಾಡೆಮಿಕ್ ಕೃಪಾನಿಧಿ ಫಾರ್ಮಸಿ ಕಾಲೇಜಿನ ನಿರ್ದೇಶಕ ಡಾ. ಎಮ್.ಡಿ.ಕರವೇಕರ ಹಾಗೂ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ವಾಯ್.ಶ್ರೀನಿವಾಸ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಡಾ.ಬಿ.ಎಸ್.ಕಿತ್ತೂರ ಸ್ವಾಗತಿಸಿದರು. ಡಾ.ಅನಿತಾ ದೇಸಾಯಿ ಕಾಲೇಜು ಕುರಿತು ಮಾಹಿತಿ ನೀಡಿದರು. ಶಾಂತವೀರ ವಂದಿಸಿದರು,ಕಾರ್ಯಕ್ರಮಕೂ ಮುಂಚೆ ಮಹಾವಿದ್ಯಾಲಯದಲ್ಲಿ ಹಾನಗಲ್ ಕುಮಾರೇಶ್ವರ ಮಾದರಿ ಔಷಧಾಲಯಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
--ಬಾಕ್ಸ್
ಮಹಾವಿದ್ಯಾಲಯದ ಆವರಣವೂ ಸಕಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಪೂರಕವಾಗಿದೆ.-ಡಾ. ಡಾ.ಮೊಂತುಕುಮಾರ ಎಮ್.ಪಟೇಲ, ಅಧ್ಯಕ್ಷರು. ಫಾರ್ಮಸಿ ಕೌನ್ಸಿಲ್ ಆಪ್ ಇಂಡಿಯಾ