ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಅಗ್ರಿಕಲ್ಚರಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಾಲೇಜ್ ಉದ್ಘಾಟನೆ ಇತ್ತೀಚೆಗೆ ನೆರವೇರಿತು.
ಮೂಡುಬಿದಿರೆ: ಜಗತ್ತಿನ ಯಾವ ವೃತ್ತಿಯಲ್ಲೂ ‘ಕಡಿಮೆ ಶ್ರಮ-ದೀರ್ಘ ಫಲ’ ಎಂಬ ಸಮೀಕರಣವಿಲ್ಲ. ಆದರೆ ಕೃಷಿಯಲ್ಲಿ ಮಾತ್ರ ಎರಡು ಮೂರು ತಿಂಗಳ ಶ್ರಮವೇ 12 ತಿಂಗಳ ಜೀವನಕ್ಕೆ ಸಾಕಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಅಗ್ರಿಕಲ್ಚರಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಾಲೇಜ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಭಾರತದ ಕೃಷಿಯ ಮೂಲಕ ದೇಶದ ಜಿಡಿಪಿಗೆ ಸುಮಾರು 18% ಕೊಡುಗೆ ನೀಡುತ್ತಿದೆ. ಈ ಕೊಡುಗೆ 25-30%ಕ್ಕೆ ಏರಿದರೆ, ಭಾರತ ಕೇವಲ ಅಭಿವೃದ್ಧಿಶೀಲ ರಾಷ್ಟ್ರವಲ್ಲ, ವಿಶ್ವದ ನಂ.1 ಆರ್ಥಿಕ ಶಕ್ತಿಯಾಗುವ ಸಾಮರ್ಥ್ಯ ಸಾಧಿಸುತ್ತದೆ ಎಂದರು.ಅಧ್ಯಕ್ಷತೆವ ಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಪ್ರಸ್ತುತ ಆಳ್ವಾಸ್ ರಾಜ್ಯದ ಐದು ವಿ.ವಿ.ಗಳ ಪದವಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಿಂದಿನ ಕಾಲದಲ್ಲಿ ನೂರಾರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಇಂದು ಮಾರುಕಟ್ಟೆಗೆ ಹೋಗಿ ಅಂಗಡಿಯಲ್ಲಿ ಅಕ್ಕಿ ಕೊಂಡು ತಿನ್ನುವ ಸ್ಥಿತಿಗೆ ತಲುಪಿದ್ದಾರೆ. ಇದು ಸಮಾಜದ ಕೃಷಿ ಕ್ಷೇತ್ರದಲ್ಲಿ ಆದಂತಹ ಸ್ಥಿತ್ಯಂತರ. ಇದು ಸಲ್ಲದು. ಎಂದರು. ಕೃಷಿ ವಿದ್ಯಾಭ್ಯಾಸಕ್ಕೆ ಫ್ಯಾಷನ್ ಅಲ್ಲ, ಪ್ಯಾಷನ್ ಮತ್ತು ಪರಿಶ್ರಮ ಬೇಕು. ಬಿಎಸ್ಸಿ ಕೃಷಿ ಪದವಿಯಲ್ಲಿ ಯಶಸ್ವಿಯಾಗ ಬಯಸುವ ವಿದ್ಯಾರ್ಥಿಗೆ ಫ್ಯಾಷನ್ ಅಗತ್ಯವಿಲ್ಲ. ಆದರೆ ಪ್ಯಾಷನ್, ಆಸಕ್ತಿ ಮತ್ತು ಶ್ರಮಕ್ಕಾಗಿ ಬೆವರೂರಿಸುವ ಮನೋಭಾವ ಅಗತ್ಯ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಡಾ ಪೀಟರ್ ಫರ್ನಾಂಡೀಸ್, ಕೃಷಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಹಲ್ ಪಾಠಕ್ ಇದ್ದರು. ಸಹಾಯಕ ಪ್ರಾಧ್ಯಾಪಕಿ ಡಾ ಶ್ರೇಯಸ್ಸು ನಿರೂಪಿಸಿದರು. ಪ್ರೊ. ಗಣೇಶ್ ವಂದಿಸಿದರು.